ಯುಪಿಎಸ್ಸಿ ಸಿಎಂಸ್ ಪರೀಕ್ಷೆ: 710 ಹುದ್ದೆಗಳ ನೇಮಕಾತಿ

ಕೇಂದ್ರ ಲೋಕ ಸೇವಾ ಆಯೋಗ (ಯು ಪಿ ಎಸ್ ಸಿ) ದಲ್ಲಿ 710 ಹುದ್ದೆಗಳು ಖಾಲಿಯಿದ್ದು, ನೇಮಕಾತಿಗಾಗಿ ಸಿಎಂಎಸ್ಇ (CMSE) ಪರೀಕ್ಷೆಯನ್ನು ಆಯೋಜಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಕೇಂದ್ರ ಲೋಕ ಸೇವಾ ಆಯೋಗ (ಯು ಪಿ ಎಸ್ ಸಿ) ದಲ್ಲಿ 710 ಹುದ್ದೆಗಳು ಖಾಲಿಯಿದ್ದು, ನೇಮಕಾತಿಗಾಗಿ ಸಿಎಂಎಸ್ಇ (CMSE) ಪರೀಕ್ಷೆಯನ್ನು ಆಯೋಜಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇ 19, 2017 ಸಂಜೆ 06:00 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಒಟ್ಟು ಹುದ್ದೆ: 710

ಹುದ್ದೆಯ ವಿವರ

  1. ರೈಲ್ವೇಸ್ ನಲ್ಲಿ ಅಸಿಸ್ಟಂಟ್ ಡಿವಿಶನಲ್ ಮೆಡಿಕಲ್ ಆಫೀಸರ್ ಹುದ್ದೆ : 450
  2. ಇಂಡಿಯನ್ ಆರ್ಡಿನನ್ಸ್ ಫ್ಯಾಂಕ್ಟರೀಸ್ ಹೆಲ್ತ್ ಸರ್ವಿಸ್ ನಲ್ಲಿ ಅಸಿಸ್ಟಂಟ್ ಮೆಡಿಕಲ್ ಆಫೀಸರ್ ಹುದ್ದೆ: 26
  3. ಕೇಂದ್ರ ಆರೋಗ್ಯ ಸೇವೆಯಲ್ಲಿ ಜ್ಯೂನಿಯರ್ ಸ್ಕೇಲ್ ಹುದ್ದೆ: 216
  4. ನವದೆಹಲಿ ಮುನ್ಸಿಪಲ್ ಕೌನ್ಸಿಲ್ ನಲ್ಲಿ : 02
  5. ಪೂರ್ವ, ಉತ್ತರ ಮತ್ತು ದಕ್ಷಿಣ ದೆಹಲಿಯ ಮುನ್ಸಿಪಲ್ ಕಾರ್ಪೋರೇಶನ್ ನಲ್ಲಿ ಜನರಲ್ ಡ್ಯುಟಿ ಮೆಡಿಕಲ್ ಆಫೀಸರ್: 16
ಯುಪಿಎಸ್ಸಿ 710 ಹುದ್ದೆಗಳ ನೇಮಕಾತಿ

    ವಯೋಮಿತಿ

    ಅಭ್ಯರ್ಥಿಗಳು 01-08-2017 ದಿನಾಂಕಕ್ಕೆ ಅನ್ವಯವಾಗುವಂತೆ 32 ವರ್ಷ ಮೀರಿರಬಾರದು.

    ವಿದ್ಯಾರ್ಹತೆ

    ಅಭ್ಯರ್ಥಿಗಳು ಎಂಬಿಬಿಎಸ್ ಅಂತಿಮ ಪರೀಕ್ಷೆಯ ಲಿಖಿತ ಮತ್ತು ಪ್ರಾಯೋಗಿಕ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು.

    ಆಯ್ಕೆ ವಿಧಾನ

    ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ವ್ಯಕ್ತಿತ್ವ ಪರೀಕ್ಷೆ ಮೂಲಕ ಆರಿಸಲಾಗುತ್ತದೆ.

    ಪರೀಕ್ಷಾ ವಿಧಾನ

    ಪರೀಕ್ಷೆಯು 600 ಅಂಕಗಳದಾಗಿದ್ದು 500 ಅಂಕಗಳ ಲಿಖಿತ ಪರೀಕ್ಷೆ ಮತ್ತು 100 ಅಂಕಗಳ ವ್ಯಕ್ತಿತ್ವ ಪರೀಕ್ಷೆಯನ್ನು ಹೊಂದಿರುತ್ತದೆ.

    ಲಿಖಿತ ಪರೀಕ್ಷೆ

    500 ಅಂಕಗಳ ಲಿಖಿತ ಪರೀಕ್ಷೆಯು ಎರಡು ಪ್ರಶ್ನೆಪತ್ರಿಕೆಯನ್ನು ಹೊಂದಿದ್ದು, ಪ್ರತಿ ಪ್ರಶ್ನೆಪತ್ರಿಕೆಯು 250 ಅಂಕಗಳನ್ನು ಹೊಂದಿರುತ್ತದೆ.

    • ಮೊದಲ ಪತ್ರಿಕೆಯಲ್ಲಿ ಜನಲ್ ಎಬಿಲಿಟಿ, ಜನರಲ್ ಮೆಡಿಸಿನ್ ಮತ್ತು ಪಿಡಿಯಾಟ್ರಿಕ್ಸ್ ಕುರಿತಾಗಿ ಕೇಳಲಾಗಿರುತ್ತದೆ.
    • ಎರಡನೇ ಪತ್ರಿಕೆಯಲ್ಲಿ ಸರ್ಜರಿ, ಗೈನಕಾಲಜಿ ಆಬ್ಸ್ಟೆಟ್ರಿಕ್ಸ್ ಮತ್ತು ಪ್ರಿವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್ ಬಗ್ಗೆ ಕೇಳಲಾಗಿರುತ್ತದೆ.

    ಅರ್ಜಿ ಶುಲ್ಕ

    • ಅಭ್ಯರ್ಥಿಗಳು 200 ರೂ. ಶುಲ್ಕವನ್ನು ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ಸಲ್ಲಿಸಬಹುದು.
    • ಎಸ್ ಬಿ ಐ ನ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಸಲ್ಲಿಸಬಹುದು.
    • ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

    ಪ್ರಮುಖ ದಿನಾಂಕಗಳು

    ಅರ್ಜಿ ಸಲ್ಲಿಕೆ ಏಪ್ರಿಲ್ 26 ರಿಂದ ಆರಂಭವಾಗಿದ್ದು, ಮೇ 19, 2017 ಸಂಜೆ 6 ಗಂಟೆಯೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
    ಹೆಚ್ಚಿನ ಮಾಹಿತಿಗೆ www.upsc.gov.in ಗಮನಿಸಿ

    For Quick Alerts
    ALLOW NOTIFICATIONS  
    For Daily Alerts

    English summary
    Union Public Service Commission (UPSC) has invited applications for the recruitment of 710 vacancies by conducting Combined Medical Services Examination (CMSE) 2017.
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X