ಪದವೀಧರರಿಗೆ ಯುಪಿಎಸ್​ಸಿ ಗ್ರೂಪ್ ಬಿ ಹುದ್ದೆಯಲ್ಲಿ ನೇರ ನೇಮಕಾತಿ

Posted By:

ಕೇಂದ್ರ ಲೋಕಸೇವಾ ಆಯೋಗದ ಮೂಲಕ ಇಂಡಿಯನ್ ಇನ್ಫರ್ಮೇಷನ್ ಸರ್ವೀಸ್ ಗ್ರೂಪ್ ಬಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇಂಡಿಯನ್ ಇನ್ಫರ್ಮೇಷನ್ ಸರ್ವಿಸ್ ನ ಗ್ರೂಪ್ ಬಿ ಯಲ್ಲಿ ಒಟ್ಟು 72 ಸೀನಿಯರ್ ಗ್ರೇಡ್ ಹುದ್ದೆಗಳ ಖಾಲಿ ಇದ್ದು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಯುಪಿಎಸ್​ಸಿ ಗ್ರೂಪ್ ಬಿ ಹುದ್ದೆ ನೇರ ನೇಮಕಾತಿ

ಭಾಷಾವಾರು ಹುದ್ದೆಗಳು

ಹಿಂದಿ-19, ಇಂಗ್ಲಿಷ್-21, ಕನ್ನಡ-2,
ಮರಾಠಿ-3, ಗುಜರಾತಿ-2, ಬೆಂಗಾಲಿ-3,
ಒರಿಯಾ-2, ತಮಿಳು-4, ತೆಲುಗು-4,
ಉರ್ದು-4, ಪಂಜಾಬಿ-2, ಮಣಿಪುರಿ-1
ಮಲಯಾಳಂ-2, ಅಸ್ಸಾಮಿ-2, ಕಾಶ್ಮೀರಿ-1

ವಯೋಮಿತಿ

  • ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ
  • ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.

ವಿದ್ಯಾರ್ಹತೆ

ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರು ವಿಷಯದಲ್ಲಿ ಪದವಿ ಅಥವಾ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಪದವಿ/ಸ್ನಾತಕೋತ್ತರ/ಡಿಪ್ಲೊಮಾ ಪೂರೈಸಿರಬೇಕು.

ಸಂಬಂಧಿಸಿದ ಭಾಷೆಯಲ್ಲಿ ಕಡ್ಡಾಯವಾಗಿ ಹತ್ತನೇ ತರಗಿವರೆಗೂ ಓದಿರಬೇಕು.

ಸರ್ಕಾರಿ/ನೋಂದಾಯಿತ ಖಾಸಗಿ ಮಾಧ್ಯಮ ಸಂಸ್ಥೆಯಲ್ಲಿ ಪತ್ರಕರ್ತರಾಗಿ ಕನಿಷ್ಠ ಎರಡು ವರ್ಷಗಳ ಸೇವೆ ಸಲ್ಲಿಸಿರಬೇಕು.

ಅರ್ಜಿ ಸಲ್ಲಿಸುವ ವಿಧಾನ

ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್-ಲೋಡ್ ಮಾಡತಕ್ಕದ್ದು.

ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳಿಗೆ ರೂ.25/-
  • ಎಸ್.ಸಿ/ಎಸ್.ಟಿ/ಮಹಿಳೆ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-06-2017
ಅರ್ಜಿಗಳನ್ನು ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ: 30-06-2017

ಆಯ್ಕೆ ವಿಧಾನ

ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಸಲ್ಲಿಸಿರುವ ಅರ್ಜಿಗಳನ್ನು ಆಧರಿಸಿ ಅರ್ಹ ಅಭ್ಯರ್ಥಿಗಳನ್ನ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಕಾರ್ಯಾನುಭವ/ ವ್ಯಕ್ತಿತ್ವ/ಕೌಶಲಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ www.upsconline.nic.in ಗಮನಿಸಿ

English summary
UPSC invites application for recruitment by selection to the eventy-two Senior Grade of Indian Information Service Group ‘B’ (Gazetted), Ministry of Information and Broadcasting,
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia