ವಿಜಯ ಬ್ಯಾಂಕ್ ನಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳ ನೇಮಕಾತಿ

Posted By:

ಮಂಗಳೂರು ಮೂಲದ ವಿಜಯ ಬ್ಯಾಂಕ್ ಕರ್ನಾಟಕ ಸೇರಿದಂತೆ ದೇಶಾದ್ಯಂತ 2000 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಸಾವಿರಾರು ನೌಕರರನ್ನು ಹೊಂದಿರುವ ವಿಜಯ ಬ್ಯಾಂಕ್ 2017 ನೇ ಸಾಲಿನಲ್ಲಿ ಮತ್ತಷ್ಟು ನೇಮಕಾತಿಗಳನ್ನು ಮಾಡಿಕೊಳ್ಳುತ್ತಿದೆ.

ವಿಜಯ ಬ್ಯಾಂಕ್ ನ್ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳನ್ನೂ ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಬ್ಯಾಂಕ್ ಪ್ರಕಟಣೆಯಂತೆ ಅರ್ಹ ಅಭ್ಯರ್ಥಿಗಳು ಮಾರ್ಚ್ 10 , 2017 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ವಿಜಯ ಬ್ಯಾಂಕ್ ನೇಮಕಾತಿ 2017

ಹುದ್ದೆಯ ವಿವರ

ಮ್ಯಾನೇಜರ್

1 .ಪ್ರೊಬೇಷನರಿ ಚೀಫ್ ಮ್ಯಾನೇಜರ್ : ಸ್ಟಾಟಿಸ್ಟಿಷಿಯನ್ :01
2 .ಪ್ರೊಬೇಷನರಿ ಸೀನಿಯರ್ ಮ್ಯಾನೇಜರ್ : ಸ್ಟಾಟಿಸ್ಟಿಷಿಯನ್ :01
3.ಪ್ರೊಬೇಷನರಿ ಸೀನಿಯರ್ ಮ್ಯಾನೇಜರ್ : ರಿಸ್ಕ್ ಮ್ಯಾನೇಜ್ಮೆಂಟ್ :04
ಒಟ್ಟು ಹುದ್ದೆಗಳು :06
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್

ವಿದ್ಯಾರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮ ಪದವಿ ಗಳಿಸಿರಬೇಕು.

ಅರ್ಜಿ ಶುಲ್ಕ

  • ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳಿಗೆ ರೂ.600 /-
  • ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100 /-

ವಯೋಮಿತಿ

  • ಹುದ್ದೆ-1 ಕ್ಕೆ 30 -45 ವರ್ಷ
  • ಹುದ್ದೆ-2 ,3 ಕ್ಕೆ 25 -37 ವರ್ಷ
  • ಮೀಸಲಾತಿಗೆ ಒಳಪಡುವವರ ವಯೋಮಿತಿಯನ್ನು ವಿಜಯ ಬ್ಯಾಂಕ್ ನಿಯಮಾನುಸಾರ ಸಡಿಲಿಕೆ ಮಾಡಲಾಗುವುದು.

ವೇತನ

  • ಹುದ್ದೆ-1 : 50300 -59170 /-
  • ಹುದ್ದೆ-2 ,3 : 42,020 -51,490 /-

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ಗುಂಪು ಚರ್ಚೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ

1.ಅಭ್ಯರ್ಥಿಗಳು ವಿಜಯ ಬ್ಯಾಂಕ್ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಬೇಕು.
2.ವೆಬ್ಸೈಟ್ ನಲ್ಲಿ ಪ್ರಕಟವಾಗಿರುವ ಜಾಹೀರಾತನ್ನು ಗಮನವಿಟ್ಟು ಸಂಪೂರ್ಣವಾಗಿ ಓದಿ
3.ಆನ್ಲೈನ್ ಅರ್ಜಿಯಲ್ಲಿ ಶೈಕ್ಷಣಿಕ ಮತ್ತು ವೈಯಕ್ತಿಕ ದಾಖಲೆಗಳ ವಿವರವನ್ನು ತಪ್ಪಿಲ್ಲದಂತೆ ತುಂಬಿ, ಹಾಗೂ ನಿಮ್ಮ ಇತ್ತೀಚಿನ ಭಾವಚಿತ್ರ ಮತ್ತು ಸಹಿಯ ಸ್ಕ್ಯಾನ್ ಇಮೇಜ್ ಅನ್ನು ಅಪ್ಲೋಡ್ ಮಾಡಿ.
4. ಅರ್ಜಿಯನ್ನು ತುಂಬಿದ ನಂತರ ಒಮ್ಮೆ ಪರಿಶೀಲಿಸಿ
5.ಅರ್ಜಿಯ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದ ನಂತರ ಸೇವ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
6.ಪ್ರಿಂಟ್ ತೆಗೆದ ಅರ್ಜಿಯ ಜೊತೆ ವೆಬ್ಸೈಟ್ ನಲ್ಲಿ ಕೇಳಲಾಗಿರುವ ಎಲ್ಲಾ ಸೂಕ್ತ ದಾಖಲೆಗಳನ್ನು ಅದರೊಂದಿಗೆ ಲಗತ್ತಿಸಿ ಅಂಚೆ ಮೂಲಕ ಬ್ಯಾಂಕ್ ವಿಳಾಸಕ್ಕೆ ಕೊನೆಯ ದಿನಾಂಕದ ಒಳಗೆ ತಲುಪಿಸಿ.

ಅರ್ಜಿ ಸಲ್ಲಿಸಬೇಕಾದ ವಿಳಾಸ

vijaya Bank P.O.Box No .5136 , G .P.O. BANGALORE -560001

ಪ್ರಮುಖ ದಿನಾಂಕಗಳು

ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 -03 -2017
ಅಂಚೆ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 -03 -2017
ಅಂಚೆ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ದೂರದ ನಿವಾಸಿಗಳಿಗೆ) 20 -03 -2017
ಹೆಚ್ಚಿನ ಮಾಹಿತಿಗಾಗಿ: http://www.vijayabank.com/

English summary
Vijaya Bank is ready to hire applicants for the manager posts

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia