ವಾಕ್ ಇನ್ ಇಂಟರ್ವ್ಯೂ ಮೂಲಕ ರೆಪ್ರೆಸೆಂಟೇಟಿವ್ ಹುದ್ದೆಗಳ ನೇಮಕಾತಿ

Posted By:

ಫಾರ್ಮಸಿಯಲ್ಲಿ ಪದವಿ ಅಥವಾ ಇನ್ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿದವರಿಗೆ ಕರ್ನಾಟಕ ಆಂಟಿಬಯೋಟಿಕ್ಸ್ ಅಂಡ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್' (ಕೆಎಪಿಎಲ್)ನಲ್ಲಿ ಉದ್ಯೋಗ ಅವಕಾಶಗಳಿವೆ.

ಖಾಲಿ ಇರುವ 19 ಪ್ರೊಫೆಶನಲ್ ಸರ್ವೀಸ್ ರೆಪ್ರೆಸೆಂಟೇಟಿವ್ಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ವಾಕ್ ಇನ್ ಸಂದರ್ಶನವಿದ್ದು, ಆಸಕ್ತ ಹಾಗೂ ಅರ್ಹ ಅಬ್ಯರ್ಥಿಗಳು ಇದೇ ನವೆಂಬರ್ 2 ಮತ್ತು 03ರಂದು ನಡೆಯಲಿರುವ ಸಂದರ್ಶನಕ್ಕೆ ತಮ್ಮ ಮೂಲ ದಾಖಲಾತಿಗಳೊಂದಿಗೆ ಹಾಜರಾಗತಕ್ಕದ್ದು.

ರೆಪ್ರೆಸೆಂಟೇಟಿವ್ ಹುದ್ದೆಗಳ ನೇಮಕಾತಿ

ವಿದ್ಯಾರ್ಹತೆ

ಫಾರ್ಮಸಿ/ವಿಜ್ಞಾನ/ಕಾಮರ್ಸ್/ಆರ್ಟ್ಸ್ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು, ಹಾಗೂ ಇದಕ್ಕೆ ಸಂಬಂಧಿಸಿದ ಕಂಪನಿಗಳಲ್ಲಿ ಒಂದು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಹಂಪಿ ವಿಶ್ವವಿದ್ಯಾಲಯ ಬೋಧಕೇತರ ಹುದ್ದೆಗಳ ನೇಮಕಾತಿ

ವಯೋಮಿತಿ

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 26 ವರ್ಷ ಹಾಗೂ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ವೇತನ ಶ್ರೇಣಿ: 13000 ರು. ತಿಂಗಳಿಗೆ.

ಆಯ್ಕೆ ವಿಧಾನ: ವಾಕ್ ಇನ್ ಸಂದರ್ಶನ.

ಸಂದರ್ಶನವು ಬೆಳಗ್ಗೆ 9:00 ರಿಂದ ಮಧ್ಯಾಹ್ನ 1:30 ರವರೆಗೆ ನಡೆಯಲಿದೆ.

ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ತಮಗೆ ಸಂಬಂಧಪಟ್ಟ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಸೇವೆ ಮಾಡಿರುವ ಪ್ರಮಾಣ ಪತ್ರಗಳನ್ನು ತಮ್ಮ ಬಯೋಡೆಟಾದೊಂದಿಗೆ ಕಡ್ಡಾಯವಾಗಿ ತರತಕ್ಕದ್ದು.

ಸಂದರ್ಶನದ ದಿನಾಂಕ

  • 02-11-2017: ಕರ್ನಾಟಕ, ಆಂಧ್ರಪ್ರದೇಶ, ತಮಿಳು ನಾಡು ಮತ್ತು ಕೇರಳ ರಾಜ್ಯಗಳಿಗೆ
  • 03-11-2017: ಬಿಹಾರ್, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ್, ಮಹಾರಾಷ್ಟ್ರ, ಪಂಜಾಬ್ ರಾಜ್ಯಗಳಿಗೆ

ಸಂದರ್ಶನ ನಡೆಯುವ ಸ್ಥಳ

KARNATAKA ANTIBIOTICS & PHARMACEUTICALS LTD., Nirman Bhavan, Opposite to Orion Mall, Dr.Rajkumar Road, 1st Block, Rajajinagar, Bangalore- 560 010
Ph: 080 2357 1590

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Karnataka Antibiotics and Pharmaceutical Limited released new notification for the recruitment of total 19 (Nineteen) Professional service representative vacancies.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia