ಸಿ ಆರ್ ಪಿ ಎಫ್ ಆಸ್ಪತ್ರೆಯಲ್ಲಿ ನೇಮಕಾತಿ

Posted By:

ಸಿಆರ್ ಪಿಎಫ್ ಆಸ್ಪತ್ರೆಗಳಲ್ಲಿ ವಿಶೇಷ ತಜ್ಞ ಡಾಕ್ಟರ್ ಹಾಗೂ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳಾಗಿ (ಜೆಡಿಎಂಓ) ತೊಡಗಿಸಿಕೊಳ್ಳಲು ಸೂಕ್ತ ಮತ್ತು ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.

ಮಂಗಳೂರು ವಿಶ್ವವಿದ್ಯಾಲಯ ಬೋಧಕ ಹುದ್ದೆಗಳ ನೇಮಕಾತಿ

ಆಸಕ್ತ ಅಭ್ಯರ್ಥಿಗಳು ದಿನಾಂಕ 09-10-2017 ರಂದು ಬೆಳಗ್ಗೆ 9:00 ಕ್ಕೆ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಸಿ ಆರ್ ಪಿ ಎಫ್ ನೇಮಕಾತಿ

ಹುದ್ದೆಗಳ ವಿವರ

ವಿಶೇಷ ತಜ್ಞ (ಪ್ಯಾಥಾಲಜಿಸ್ಟ್)-01 ಹುದ್ದೆ

(ಬೆಂಗಳೂರಿನ ಕಾಂಪೊಜಿಟ್ ಆಸ್ಪತ್ರೆಗೆ ಮಾತ್ರ)

ವೇತನ: ಎ ದರ್ಜೆ ಶಹರ ರೂ.64,009/-, ಬಿ ದರ್ಜೆ ಶಹರ ರೂ.60,841/-, ಸಿ ದರ್ಜೆ ಶಹರ ರೂ.57,672/-

ವಯಸ್ಸು: ನೇರ ಸಂದರ್ಶನದ ದಿನಾಂಕಕ್ಕೆ 67 ವರ್ಷಗಳ ಕೆಳಗೆ ಇರಬೇಕು.
ಶಿಕ್ಷಣಾರ್ಹತೆ: ಸಂಬಂಧಿಸಿದ ವಿಶೇಷ ತಜ್ಞ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಪಡೆದಿರಬೇಕು
ಸಂಬಂಧಿಸಿದ ಕ್ಷೇತ್ರದಲ್ಲಿ ಪದವೀಧರರಿಗೆ ಒಂದು ವರೆ ವರ್ಷಗಳ ಅನುಭವ ಮತ್ತು ಡಿಪ್ಲೊಮಾ ಧಾರಕರಿಗೆ ಎರಡುವರೆ ವರ್ಷಗಳ ಅನುಭವ ಇರಬೇಕು

ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು-01 ಹುದ್ದೆ

ವೇತನ: ಎ ದರ್ಜೆ ಶಹರ ರೂ.53,025/-, ಬಿ ದರ್ಜೆ ಶಹರ ರೂ.50,400/-, ಸಿ ದರ್ಜೆ ಶಹರ ರೂ.47,775/-
ವಿದ್ಯಾರ್ಹತೆ: ಎಂಬಿಬಿಎಸ್, ಇಂಟರ್ನಶಿಪ್

ನೇರ ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ಸಂಬಂಧಿಸಿದ ದಾಖಲೆಗಳ (ಪದವಿ, ವಯಸ್ಸಿನ ಪುರಾವೆ, ಅನುಭವ ಪ್ರಮಾಣಪತ್ರ ಮುಂತಾದವು) ಮೂಲ ಮತ್ತು ನಕಲು ಪ್ರತಿಗಳನ್ನು ತರಬೇಕು. ಬಿಳಿ ಕಾಗದದ ಅರ್ಜಿಯ ಮೇಲ್ಭಾಗದಲ್ಲಿ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ಬರೆದಿರಬೇಕು ಮತ್ತು ಪಾಸ್ ಪೋರ್ಟ್ ಅಳತೆಯ 5 ಫೋಟೋಗಳನ್ನು ಒಳಗೊಂಡಿರಬೇಕು. ಸಂದರ್ಶನ ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು.

ಗುತ್ತಿಗೆ ಆಧಾರದ ಮೇಲೆ ಜಿಡಿಎಂಓ ಮತ್ತು ವಿಶೇಷ ತಜ್ಞ ವೈದ್ಯರ ಸಂಬಳವನ್ನು ಪುನರ್ವಿಮರ್ಶಿಸಬೇಕು ಎಂಬ ಪ್ರಸ್ತಾಪವನ್ನು ಎಂಎಚ್ಎ ದಲ್ಲಿ ಪರಿಶೀಲಿಸಲಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ ವಿಳಾಸ ಗಮನಿಸಲು ಸೂಚಿಸಲಾಗಿದೆ.

English summary
Walk-in-interview for appointment of Specialist and GDMOs through contractual basis for various locations of CRPF Rectt Branch Dte Gen.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia