What Is Mission Karmayogi: ಕರ್ಮಯೋಗಿ ಯೋಜನೆ ಎಂದರೇನು ಗೊತ್ತಾ ?

ನಾಗರಿಕ ಸೇವಾ ವಲಯದ ಅಧಿಕಾರಿಗಳ ಉನ್ನತೀಕರಣ ಮತ್ತು ವ್ಯಕ್ತಿತ್ವ ಚುರುಕುಗೊಳಿಸುವ ಹಾಗೂ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಕರ್ಮಯೋಗಿ ಯೋಜನೆಯನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿದೆ.

ಕರ್ಮಯೋಗಿ ಯೋಜನೆ ಎಂದರೇನು ?
ನೌಕರರ

ನೇಮಕಾತಿ ನಂತರದ ತರಬೇತಿ ಕಾರ್ಯವಿಧಾನವನ್ನು ಉನ್ನತೀಕರಿಸುವ ಉದ್ದೇಶದಿಂದ ಪೌರಕಾರ್ಮಿಕರಿಗಾಗಿ ಹೊಸ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆ ಇದಾಗಿದೆ.

ನಾಗರಿಕ ಸೇವಾ ಅಧಿಕಾರಿಗಳು ವೃತ್ತಿ ಕ್ಷಮತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಕೆಗಳಲ್ಲಿ ನಿಪುಣರಾಗಿರಬೇಕು ಹೀಗಾಗಿ ಅವರಿಗೆ ಅಗತ್ಯ ತರಬೇತಿಯನ್ನು ನೀಡುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.

ಈ ಯೋಜನೆ ಸಮರ್ಥ ನಾಯಕತ್ವವುಳ್ಳ ಅಧಿಕಾರಿಗಳನ್ನು ಸೃಷ್ಟಿಸುವಲ್ಲಿ ಸಹಕಾರಿಯಾಗಲಿದೆ ಮತ್ತು ಉತ್ತಮ ಭವಿಷ್ಯಕ್ಕಾಗಿ ನಾಗರಿಕ ಸೇವೆಗಳನ್ನು ನಿರ್ಮಿಸಲು ಸಹಕಾರಿಯಾಗಲಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಕಾರ್ಯದರ್ಶಿ ಮತ್ತು ಸಿಬ್ಬಂದಿ ವಿಭಾಗದ ಕಾರ್ಯದರ್ಶಿ ಸಿ ಚಂದ್ರಮೌಳಿ ಹೇಳಿದ್ದಾರೆ.

ಪೌರ ಕಾರ್ಮಿಕರಿಗೆ ಮಿಷನ್ ಕರ್ಮಯೋಗಿ ಕಾರ್ಯಕ್ರಮವನ್ನು ತಲುಪಿಸುವ ಉದ್ದೇಶದಿಂದ ಐಗೋಟ್ ಕರ್ಮಯೋಗಿ ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಸ್ಥಾಪಿಸಲಾಗಿದೆ. ಪೌರ ಕಾರ್ಮಿಕರ ಸೇವಾ ವಿತರಣೆಗೆ ಈ ಯೋಜನೆ ಅನುಕೂಲವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ರಾಷ್ಟ್ರೀಯ ನಾಗರಿಕ ಸೇವಾ ಸಾಮರ್ಥ್ಯ ವೃದ್ಧಿ ಯೋಜನೆಯ ಲಾಂಚ್ ಪ್ಯಾಡ್ ಆಗಿ ಈ ಕರ್ಮಯೋಗಿ ಯೋಜನೆ ಕಾರ್ಯ ನಿರ್ವಹಿಸಲಿದೆ. ಎನ್‌ಪಿಸಿಎಸ್ ‌ಸಿಬಿಯನ್ನು ಪ್ರಧಾನಮಂತ್ರಿಯ ಮಾನವ ಸಂಪನ್ಮೂಲ ಮಂಡಳಿಯು ನಿರ್ವಹಿಸಲಿದ್ದು, ಇದರಲ್ಲಿ ಎಲ್ಲ ರಾಜ್ಯ ಮುಖ್ಯಮಂತ್ರಿಗಳು, ಕೇಂದ್ರ ಸಂಪುಟ ಸಚಿವರು ಮತ್ತು ತಜ್ಞರು ಸೇರಿದ್ದಾರೆ. ಈ ಮಂಡಳಿಯು ನಾಗರಿಕ ಸೇವಾ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಪರಿಶೀಲಿಸಿ ಅನುಮೋದಿಸುತ್ತದೆ. ಇದರ ಜೊತೆಗೆ ಆಯ್ದ ಕಾರ್ಯದರ್ಶಿಗಳು ಮತ್ತು ಕೇಡರ್ ನಿಯಂತ್ರಣ ಅಧಿಕಾರಿಗಳನ್ನು ಒಳಗೊಂಡ ಸಂಪುಟ ಕಾರ್ಯದರ್ಶಿಗಳ ಸಮನ್ವಯ ಘಟಕವೂ ಇರುತ್ತದೆ.

ವಿಶೇಷ ತಂಡದಿಂದ 'ಐಗೋಟ್ ಕರ್ಮಯೋಗಿ' ನಿಯಂತ್ರಣ ಇನ್ನು, ಐಗೋಟ್ ಕರ್ಮಯೋಗಿ ಪ್ಲಾಟ್ ಫಾರ್ಮ್ ನಿಯಂತ್ರಿಸಲು ವಿಶೇಷ ತಂಡವು ಕಾರ್ಯ ನಿರ್ವಹಿಸಲಿದೆ. ಈ ಪೈಕಿ ಸಾಮರ್ಥ್ಯ ವೃದ್ಧಿ ಆಯೋಗ ಹಾಗೂ ಹಲವು ಕ್ಷೇತ್ರಗಳಲ್ಲಿ ಪರಿಣಿತಿ ಪಡೆದ ತಜ್ಞರು ಜಾಗತಿಕ ಉದ್ಯಮಿಗಳು ಸೇರಿದ್ದಾರೆ. ಈ ಆಯೋಗವು ಸರ್ಕಾರದಲ್ಲಿರುವ ಮಾನವ ಸಂಪನ್ಮೂಲ ಮತ್ತು ವಾರ್ಷಿಕ ಸಾಮರ್ಥ್ಯ ವೃದ್ಧಿಯ ಕುರಿತು ಪರಿಶೋದನೆ ನಡೆಸಲಿದೆ. ಅಂತಿಮವಾಗಿ 2013ರ ಕಂಪನಿ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಸಂಪೂರ್ಣ ಸ್ವಾಮ್ಯದ ವಿಶೇಷ ಉದ್ದೇಶ ವಾಹನ(ಎಸ್ ಪಿವಿ)ವಾಗಿ ಈ ಕಂಪನಿಯು ಕಾರ್ಯ ನಿರ್ವಹಿಸಲಿದೆ.

ಕರ್ಮಯೋಗಿ ಯೋಜನೆಗೆ ಹಣ ಹೇಗೆ ಬರುತ್ತದೆ?:

ಕರ್ಮಯೋಗಿ ಯೋಜನೆಯು ಕೇಂದ್ರ ಸರ್ಕಾರದ 46 ಲಕ್ಷ ಉದ್ಯೋಗಿಗಳನ್ನು ಒಳಗೊಂಡಿರುತ್ತದೆ. ಈ ಯೋಜನೆಯ ವೆಚ್ಚಗಳಿಗೆ ಕೇಂದ್ರ ಸರ್ಕಾರದಿಂದ ಹಣವನ್ನು ಸಂಗ್ರಹಿಸಲಾಗುತ್ತದೆ. 2020-21ನೇ ಸಾಲಿನಿಂದ 2024-25ನೇ ಸಾಲಿನವರೆಗೂ ಅಂದರೆ ಐದು ವರ್ಷಗಳ ಅವಧಿ ವರೆಗೆ 51.86 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಎಸ್‌ಪಿವಿ ಸ್ಥಾಪನೆಯ ಜೊತೆಗೆ ಐಗೋಟ್ ಕರ್ಮಯೋಗಿ ಪ್ಲಾಟ್‌ಫಾರ್ಮ್‌ನ ಎಲ್ಲಾ ಬಳಕೆದಾರರ ಕಾರ್ಯಕ್ಷಮತೆ ಮೌಲ್ಯಮಾಪನಕ್ಕಾಗಿ ಸೂಕ್ತ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಚೌಕಟ್ಟನ್ನು ಸಹ ಇರಿಸಲಾಗುವುದು.

For Quick Alerts
ALLOW NOTIFICATIONS  
For Daily Alerts

English summary
Mission karmayogi in kannada: A new capacity-building scheme for civil servants aimed at upgrading the post-recruitment training mechanism of the officers and employees at all levels.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X