Natasha Peri : ಭಾರತ ಮೂಲದ 11 ವರ್ಷದ ವಿದ್ಯಾರ್ಥಿನಿ ನತಾಶಾ ಇದೀಗ ಜಗತ್ತಿನ ಪ್ರತಿಭಾವಂತ ವಿದ್ಯಾರ್ಥಿನಿ

11 ವರ್ಷದ ಬಾಲೆ ನತಾಶಾ ಇದೀಗ ಜಗತ್ ಪ್ರಸಿದ್ಧಿ

ಭಾರತೀಯ ಅಮೆರಿಕನ್ 11 ವರ್ಷದ ಬಾಲಕಿ ನತಾಶಾ ಪೆರಿ ಇದೀಗ ವಿಶ್ವದ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದಾಳೆ.

ಹಲವು ಕಾಲೇಜುಗಳಲ್ಲಿ ಪ್ರವೇಶಾತಿ ನೀಡುವುದಕ್ಕಾಗಿ ವಿದ್ವತ್ ಮೌಲ್ಯಮಾಪನ ಪರೀಕ್ಷೆ (SAT) ಮತ್ತು ಅಮೇರಿಕನ್ ಕಾಲೇಜು ಪರೀಕ್ಷೆ (ACT)ಗಳನ್ನು ನಡೆಸಲಾಗುತ್ತದೆ. ಇದರ ಮೂಲಕ ಕಾಲೇಜುಗಳು ವಿದ್ಯಾರ್ಥಿಯನ್ನು ಸೇರಿಸಿಕೊಳ್ಳಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಕಂಪನಿಗಳು ಮತ್ತು ಎನ್‌ಜಿಒ ಗಳು ಈ ಅಂಕಗಳ ಮೂಲಕ ವಿದ್ಯಾರ್ಥಿವೇತನವನ್ನು ಸಹ ನೀಡುತ್ತವೆ.

ನ್ಯೂ ಜೆರ್ಸಿಯ ಥೇಲ್ಮಾ ಎಲ್ ಸ್ಯಾಂಡ್ಮೆರಿಯರ್ ಎಲಿಮೆಂಟ್ರಿ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ನತಾಶಾ ಪೆರಿ ಎಸ್ಎಟಿ ಮತ್ತು ಎಸಿಟಿ ಪರೀಕ್ಷೆಗಳಿಗೆ ಹಾಜರಾಗಿದ್ದರು. ಜಾನ್ಸ್ ಹಾಪ್ಕಿನ್ಸ್ ಕೇಂದ್ರದಲ್ಲಿ ಟ್ಯಾಲೆಂಟೆಡ್ ಯೂತ್ ಟ್ಯಾಲೆಂಟ್ (ವಿಟಿವೈ) ಶೋಧದ ಭಾಗವಾಗಿ ತೆಗೆದುಕೊಂಡಿದ್ದ ಮೌಲ್ಯಮಾಪನದಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದಾಗಿ ಪ್ರಶಂಸೆಯನ್ನು ಪಡೆದಿದ್ದಾರೆ.

CTY ದರ್ಜೆಯ ಮಟ್ಟದ ಪರೀಕ್ಷೆಯನ್ನು ಪ್ರಪಂಚದಾದ್ಯಂತದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಲು ಮತ್ತು ಅವರ ನಿಜವಾದ ಶೈಕ್ಷಣಿಕ ಸಾಮರ್ಥ್ಯಗಳನ್ನು ಕಂಡುಹಿಡಿಯಲು ಬಳಸಲಾಗುತ್ತದೆ. 2020-21 ಸಿಟಿವೈ ಟ್ಯಾಲೆಂಟ್ ಸರ್ಚ್ ನಲ್ಲಿ ೮4 ದೇಶಗಳಿಂದ ಭಾಗವಹಿಸಿದ್ದ ಸುಮಾರು 19,000 ವಿದ್ಯಾರ್ಥಿಗಳೊಂದಿಗೆ ಗ್ರೇಡ್ 5 ನಲ್ಲಿದ್ದ ನತಾಶಾ ಪೆರಿ ಭಾಗವಹಿಸಿದ್ದರು. ಸಿಟಿವೈ ನಲ್ಲಿ ವಿದ್ಯಾರ್ಥಿಯ ಗ್ರೇಡ್ ಗಿಂತಲೂ ಹೆಚ್ಚಿನ ಬೌದ್ಧಿಕ ಮಟ್ಟದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪರೀಕ್ಷೆಯಲ್ಲಿ ಗ್ರೇಡ್ 8 ಕ್ಕೂ ಮೇಲ್ಪಟ್ಟ ಬೌದ್ಧಿಕ ಕ್ಷಮತೆಯನ್ನು ಪೆರಿ ಪ್ರದರ್ಶಿಸಿದ್ದಾರೆ.

CTY ಕೋರ್ಸ್‌ಗಳಲ್ಲಿ ಪ್ರತಿ ವರ್ಷ 15,500 ಕ್ಕೂ ಹೆಚ್ಚು ದಾಖಲಾತಿಗಳು :

CTY ಟ್ಯಾಲೆಂಟ್ ಸರ್ಚ್ ಭಾಗವಹಿಸುವವರಲ್ಲಿ ಶೇಕಡಾ 20 ಕ್ಕಿಂತ ಕಡಿಮೆ CTY ಉನ್ನತ ಗೌರವ ಪ್ರಶಸ್ತಿಗಳಿಗೆ ಅರ್ಹತೆ ಪಡೆಯುತ್ತಾರೆ. ಪ್ರಶಸ್ತಿ ಪಡೆದವರು CTY ನ ಆನ್‌ಲೈನ್ ಮತ್ತು ಬೇಸಿಗೆ ಕಾರ್ಯಕ್ರಮಕ್ಕೆ ಅರ್ಹತೆ ಪಡೆದಿದ್ದಾರೆ. ಇದರ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಪಂಚದಾದ್ಯಂತದ ಇತರ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಕಲಿಯಲು ಕೆಲಸ ಮಾಡುತ್ತಾರೆ. CTY ಆನ್‌ಲೈನ್ ಪ್ರೋಗ್ರಾಂ ಕೋರ್ಸ್‌ಗಳಲ್ಲಿ ಪ್ರತಿ ವರ್ಷ 15,500 ಕ್ಕೂ ಹೆಚ್ಚು ದಾಖಲಾತಿಗಳಿವೆ. ಇದರ ಜೊತೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ CTY ನ ವೈಯಕ್ತಿಕ ಬೇಸಿಗೆ ಕಾರ್ಯಕ್ರಮಗಳನ್ನು US ಮತ್ತು ಹಾಂಕಾಂಗ್‌ನ ಸರಿಸುಮಾರು 20 ಸ್ಥಳಗಳಲ್ಲಿ ನೀಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Natasha Peri an 11 year old Indian American girl living in America has been recognized as one of the brightest students in the world.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X