ಮುಚ್ಚಲಿವೆ ರಾಜ್ಯದ 11 ಇಂಜಿನಿಯರಿಂಗ್ ಕಾಲೇಜುಗಳು

Posted By:

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್‌(ಎಐಸಿಟಿಇ) ನೀಡಿರುವ ಅಂಕಿ ಸಂಖ್ಯೆಗಳ ಪ್ರಕಾರ ದೇಶದ 122 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಬಾಗಿಲು ಮುಚ್ಚುವ ಹಂತದಲ್ಲಿವೆ.

ಮಹಾರಾಷ್ಟ್ರ, ಗುಜರಾತ್‌ ಮತ್ತು ಹರಿಯಾಣದಲ್ಲಿ ಹೆಚ್ಚಿನ ಕಾಲೇಜುಗಳು ಮುಚ್ಚುವ ಸ್ಥಿತಿ ತಲುಪಿದ್ದು ಇದರಲ್ಲಿ  ಕರ್ನಾಟಕದ 11 ಕಾಲೇಜುಗಳು ಸೇರಿವೆ ಎಂದು ಎಐಸಿಟಿಇ ವರದಿ ಮಾಡಿದೆ.

ಮುಚ್ಚುವ ಹಂತದಲ್ಲಿರುವ ಎಂಜಿನಿಯರಿಂಗ್‌ ಕಾಲೇಜುಗಳು ಪ್ರಸಕ್ತ ಸಾಲಿಗೆ ನೂತನ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಯನ್ನು ನಡೆಸುತ್ತಿಲ್ಲ. ಹಿಂದಿನ ಸಾಲಿನಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ವ್ಯಾಸಂಗವನ್ನು ಪೂರ್ಣಗೊಳಿಸಲು ಕಾಲೇಜುಗಳು ಅವಕಾಶ ಕಲ್ಪಿಸುತ್ತಿವೆ.

ಇಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ

ಬಾಗಿಲು ಮುಚ್ಚಲು ಕಾರಣ

ಐಐಟಿ ಮತ್ತು ಎನ್ಐಟಿಗಳು ಹಾಗೂ ಇತರ ಕೇಂದ್ರೀಯ ಅನುದಾನಿತ ಸಂಸ್ಥೆಗಳಂತಹ ಪ್ರತಿಷ್ಠಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿರುವುದರಿಂದ ಇತರ ಖಾಸಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ. ಕಡಿಮೆ ಸಂಖ್ಯೆಯ ದಾಖಲಾತಿಯಿಂದ ಸಂಸ್ಥೆಗಳ ಉಳಿವು ಕಷ್ಟವಾಗುತ್ತಿದೆ ಎಂದು ಹಿರಿಯ ಎಐಸಿಸಿಟಿ ಅಧಿಕಾರಿ ಹೇಳಿದ್ದಾರೆ‌.

ಅಸ್ತಿತ್ವ ಉಳಿಸಿಕೊಳ್ಳಲಾಗದ ಎಂಜಿನಿಯರಿಂಗ್ ಕಾಲೇಜುಗಳು ಮುಚ್ಚುವ ಅಥವಾ ಪಾಲಿಟೆಕ್ನಿಕ್‌, ವಿಜ್ಞಾನ ಮತ್ತು ಕಲಾ ಕಾಲೇಜುಗಳಾಗಿ ಮಾರ್ಪಾಡಾಗುತ್ತಿವೆ.

ಗುಜರಾತಿನಲ್ಲಿ 15 ಎಂಜಿನಿಯರಿಂಗ್‌ ಕಾಲೇಜುಗಳು, ತೆಲಂಗಾಣದಲ್ಲಿ 7, ಕರ್ನಾಟಕದಲ್ಲಿ 11, ಉತ್ತರ ಪ್ರದೇಶದಲ್ಲಿ 12, ಪಂಜಾಬ್‌ನಲ್ಲಿ 6, ರಾಜಸ್ತಾನದಲ್ಲಿ 11 ಮತ್ತು ಹರಿಯಾಣದಲ್ಲಿ 13 ಕಾಲೇಜುಗಳು ಮುಚ್ಚುವ ಹಂತದಲ್ಲಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ತಾಂತ್ರಿಕ ಕಾಲೇಜು ಮಾತ್ರ ಬಾಗಿಲು ಮುಚ್ಚಲಿದೆ.

23 ಕಾಲೇಜುಗಳಿಗೆ ಬೀಗ

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್‌(ಎಐಸಿಟಿಇ) ನೀಡಿರುವ ಅಂಕಿ ಸಂಖ್ಯೆಗಳ ಪ್ರಕಾರ ಕಳೆದ ವರ್ಷ ಮಹಾರಾಷ್ಟ್ರದ ಪುಣೆ, ನಾಗಪುರ, ಔರಂಗಾಬಾದ್‌, ಜಲಗಾವ್‌ ಮತ್ತು ಕೊಲ್ಲಾಪುರ ಹಾಗೂ ಇತರೆಡೆಗಳ 23 ಕಾಲೇಜುಗಳು 2016-2017ನೇ ಸಾಲಿನಲ್ಲಿ ಬಾಗಿಲು ಮುಚ್ಚಿವೆ.

English summary
Failing to survive, private engineering colleges either seek progressive closure to ultimately shut down or turn into polytechnic or science and art colleges.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia