Aadi Swaroopa : ಏಕಕಾಲಕ್ಕೆ ಎರಡೂ ಕೈನಲ್ಲಿ ಬರೆದು ವಿಶ್ವ ದಾಖಲೆ ಮಾಡಿದ 16 ವರ್ಷದ ಮಂಗಳೂರಿನ ಹುಡುಗಿ

ಏಕಕಾಲಕ್ಕೆ ಎರಡೂ ಕೈನಲ್ಲಿ ಬರೆದು ವಿಶ್ವ ದಾಖಲೆ ಮಾಡಿದ ಮಂಗಳೂರಿನ ಹುಡುಗಿ

ಏಕಕಾಲಕ್ಕೆ ಎರಡೂ ಕೈಗಳಿಂದ ಬರೆಯುವುದರ ಜೊತೆಗೆ ಒಂದು ನಿಮಿಷಕ್ಕೆ 45 ಇಂಗ್ಲೀಷ್ ಪದಗಳನ್ನು ಯುನಿ ಡೈರೆಕ್ಷನಲ್ ಶೈಲಿಯಲ್ಲಿ ಬರೆಯುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ ಮಂಗಳೂರಿನ ಆದಿ ಸ್ವರೂಪಾ.

ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್‌ ಸಂಸ್ಥೆಯು ಮಂಗಳೂರಿನ 16 ವರ್ಷದ ಆದಿ ಸ್ವರೂಪಾ ಗೆ ಎಕ್ಸ್‌ಕ್ಲೂಸಿವ್ ವಲ್ಡ್ ರೆಕಾರ್ಡ್‌ ಗೌರವ ಘೋಷಿಸಿದೆ. ಮಂಗಳೂರಿನ ಗೋಪಾಡ್ಕರ್- ಸುಮಾಡ್ಕರ್ ದಂಪತಿ ಮಗಳು ಸ್ವರೂಪಾ.

ಏಕಕಾಲಕ್ಕೆ ಎರಡೂ ಕೈನಲ್ಲಿ ಬರೆದು ವಿಶ್ವ ದಾಖಲೆ ಮಾಡಿದ ಮಂಗಳೂರಿನ ಹುಡುಗಿ

ಸ್ವರೂಪಾ ಶಾಲೆಗೆ ಹೋದವಳಲ್ಲ, 10ನೇ ತರಗತಿಯ ಸ್ವಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇವರು ಎರಡು ವರ್ಷಗಳ ಹಿಂದೆ ಎರಡೂ ಕೈಗಳಿಂದ ಬರೆಯುವುದರ ಅಭ್ಯಾಸ ಆರಂಭಿಸಿದ್ದರು. ಇದೀಗ ಯುನಿಡೈರೆಕ್ಷನಲ್, ಆಪೊಸಿಟ್ ಡೈರೆಕ್ಷನ್, ರೈಟ್ ಹ್ಯಾಂಡ್ ಸ್ಪೀಡ್, ಲೆಫ್ಟ್ ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್, ಮಿರರ್‌ ಇಮೇಜ್‌, ಹೆಟೆರೋಟೋಪಿಕ್, ಹೆಟೆರೋ ಲಿಂಗ್ವಿಸ್ಟಿಕ್, ಎಕ್ಸ್‌ಚೇಂಜ್‌, ಡ್ಯಾನ್ಸಿಂಗ್ ಮತ್ತು ಬ್ಲೈಂಡ್‌ ಫೋಲ್ಡಿಂಗ್ ಎನ್ನುವ ಹತ್ತು ಶೈಲಿಗಳಲ್ಲಿ ಬೋರ್ಡ್‌ ಮೇಲೆ ಬರೆಯುವಲ್ಲಿ ಪರಿಣತಿಯನ್ನು ಹೊಂದಿದ್ದಾರೆ.

ಏಕಕಾಲಕ್ಕೆ ಎರಡೂ ಕೈನಲ್ಲಿ ಬರೆದು ವಿಶ್ವ ದಾಖಲೆ ಮಾಡಿದ ಮಂಗಳೂರಿನ ಹುಡುಗಿ

ಸ್ವರೂಪ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್‌ ಬಾಕ್ಸ್‌, ರೂಬಿಕ್ ಕ್ಯೂಬ್ ಹೀಗೆ ಹತ್ತು ಹಲವು ವಿಷಯಗಳ ಅಧ್ಯಯನದಲ್ಲೂ ಆಸಕ್ತಿ ಹೊಂದಿದ್ದಾರೆ.

ಆದಿ ಸ್ವರೂಪಾ ಅವರಿಗೆ ಸಂಗೀತದ ಮೇಲೂ ಪ್ರೀತಿ. ಹಿಂದೂಸ್ತಾನಿ ಸಂಗೀತವನ್ನು ಪಂಡಿತ್‌ ರವಿಕಿರಣ್ ಅವರಲ್ಲಿ ಅಭ್ಯಸಿಸುತ್ತಿದ್ದಾರೆ. 7 ವರ್ಷಗಳಲ್ಲಿ 50ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ, ಕಥಾ ಸಂಕಲನ ಹೊರತಂದಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
16 year old girl from mangaluru can write with both hands at same time made world record.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X