ಶಿಕ್ಷಣ ಕ್ಷೇತ್ರಕ್ಕೆ 'ಅಚ್ಛೇ ದಿನ್': ರೂಪುಗೊಳ್ಳಲಿವೆ 20 ವರ್ಲ್ಡ್ ಕ್ಲಾಸ್ ಶಿಕ್ಷಣ ಸಂಸ್ಥೆ

ಉನ್ನತ ಶಿಕ್ಷಣ ನೀಡುವ ವಿಶ್ವ ದರ್ಜೆಯ 20‘ಉತ್ಕೃಷ್ಟ ಶಿಕ್ಷಣ ಸಂಸ್ಥೆ'ಗಳನ್ನು ಸ್ಥಾಪಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಶೀಘ್ರದಲ್ಲಿ ಚಾಲನೆ ನೀಡಲಿದೆ. ಭಾರತದಲ್ಲಿ ಹೆಚ್ಚು ಸಂಶೋಧನೆ ಮತ್ತು ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ

ಭಾರತದಲ್ಲಿ ಶಿಕ್ಷಣಕ್ಕೆ ಅಚ್ಛೇ ದಿನ್ ಶುರುವಾಗಿದೆ. ಭಾರತದ ಶಿಕ್ಷಣ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದು, ಕೇಂದ್ರ ಸರ್ಕಾರ ಶಿಕ್ಷಣವನ್ನು ಬಲಪಡಿಸಲು ಮತ್ತಷ್ಟು ಯೋಜನೆಯನ್ನು ರೂಪಿಸಿದೆ.

ಉನ್ನತ ಶಿಕ್ಷಣ ನೀಡುವ ವಿಶ್ವ ದರ್ಜೆಯ 20 'ಉತ್ಕೃಷ್ಟ ಶಿಕ್ಷಣ ಸಂಸ್ಥೆ'ಗಳನ್ನು ಸ್ಥಾಪಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಶೀಘ್ರದಲ್ಲಿ ಚಾಲನೆ ನೀಡಲಿದೆ. ಈ ಮೂಲಕ ಭಾರತದಲ್ಲಿ ಹೆಚ್ಚು ಸಂಶೋಧನೆ ಮತ್ತು ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ದೇಶದಲ್ಲಿ ಇರುವ ವಿಶ್ವವಿದ್ಯಾಲಯಗಳು ಅಥವಾ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಅಥವಾ ಖಾಸಗಿ ವಲಯದಿಂದ ಬರುವ ಪ್ರಸ್ತಾವನೆಗಳನ್ನು ಆಯ್ಕೆ ಮಾಡಿ ಹೊಚ್ಚ ಹೊಸ ಉನ್ನತ ಶಿಕ್ಷಣ ಸಂಸ್ಥೆಗಳನ್ನು ರೂಪಿಸಲು ಕೇಂದ್ರ ನಿರ್ಧರಿಸಿದೆ.

ಶಿಕ್ಷಣ ಕ್ಷೇತ್ರಕ್ಕೆ ಅಚ್ಛೇ ದಿನ್

ಈ ಯೋಜಿನೆಯಿಂದಾಗಿ ಭಾರತದಲ್ಲಿ ಅತ್ಯುತ್ತಮ ಶಿಕ್ಷಣ ಪಡೆಯಬೇಕೆಂಬ ಕನಸು ನನಸಾಗಲಿದೆ. ಈಗಾಗಲೇ ವಿಶ್ವವಿದ್ಯಾಲಯಗಳ ಹಣಕಾಸು ಆಯೋಗ (ಯುಜಿಸಿ) 20 ವಿಶ್ವ ದರ್ಜೆ ಶಿಕ್ಷಣ ಸಂಸ್ಥೆಗಳ ಯೋಜನೆಯನ್ನು ರೂಪಿಸಿದ್ದು, ಶೀಘ್ರದಲ್ಲೇ ಇದಕ್ಕೆ ಚಾಲನೆ ದೊರೆಯಲಿದೆ.

ಉತ್ಕೃಷ್ಟ ಶಿಕ್ಷಣ ಸಂಸ್ಥೆ

ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ತಲಾ ಹತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಯೋಜನೆಯ ಅಡಿಯಲ್ಲಿ ಸರ್ಕಾರ ನಿಗದಿಪಡಿಸುವ ಷರತ್ತುಗಳ ಅಡಿಯಲ್ಲಿ ತಮ್ಮ ಸಂಸ್ಥೆಯನ್ನು 'ಉತ್ಕೃಷ್ಟ ಶಿಕ್ಷಣ ಸಂಸ್ಥೆ' ಎಂದು ಘೋಷಿಸಲು ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ.

ದೇಶದಲ್ಲಿ ವಿಶ್ವ ದರ್ಜೆಯ 20 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿತ್ತು.

20 ಶಿಕ್ಷಣ ಸಂಸ್ಥೆಗಳಲ್ಲಿ 10 ಸಾರ್ವಜನಿಕವಾದರೆ ಇನ್ನುಳಿದ 10 ಖಾಸಗಿ ಒಡೆತನಕ್ಕೆ ಸೇರಲಿವೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ಸಾವಿರಾರು ಕೋಟಿಗಳನ್ನು ವ್ಯಯಿಸುತ್ತಿದ್ದು, ಅತ್ಯುತ್ತಮ ಕ್ಯಾಂಪಸ್, ಉನ್ನತ ಮಟ್ಟದ ಪ್ರಯೋಗಾಲಯಗಳು ಸೇರಿದಂತೆ ಶಿಕ್ಷಕರಿಗೂ ಭಾರಿ ವೇತನ ಸಿಗಲಿದೆ.

For Quick Alerts
ALLOW NOTIFICATIONS  
For Daily Alerts

English summary
Twenty World Class Institutions are going to come up in India and it is so exciting to see such kind of development in the education sector. It is certainly wonderful news for the students who want to learn best courses and go to the top as well as the best institutions in India.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X