2018 ರಲ್ಲಿ ಬಿಎಸ್ಸಿಯ ಈ ಕೋರ್ಸ್ ಗಳಿಗೆ ಹೆಚ್ಚು ಬೇಡಿಕೆ

Posted By:

ಒಂದು ಕಾಲದಲ್ಲಿ ಬಿಎಸ್ಸಿ ಎಂದರೆ ಕೇವಲ ಪಿಸಿಎಂ, ಪಿಎಂಸಿಎಸ್ ಮತ್ತು ಪಿಎಂಇ ಎಂದಷ್ಟೇ ಹೇಳಲಾಗುತ್ತಿತ್ತು. ಆದರೆ ಈಗ ಬಿಎಸ್ಸಿ ಶಿಕ್ಷಣ ಕೂಡ ಸಾಕಷ್ಟು ಮುಂದುವರೆದಿದ್ದು, ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ವಾಟ್ಸಾಪ್, ಫೇಸ್ಬುಕ್ ಬಳಸುವುದೇ ಉದ್ಯೋಗವಾದಾಗ!

ದುಬಾರಿ ಇಂಜಿನಿಯರಿಗ್, ಮೆಡಿಕಲ್ ಕೋರ್ಸ್ ಓದಲಾಗದ ಮಧ್ಯಮ ವರ್ಗದವರಿಗೆ ಬಿಎಸ್ಸಿ ಕೋರ್ಸ್ ಅವಕಾಶಗಳ ದೊಡ್ಡಣ್ಣ ಎನಿಸಿದೆ. ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಉತ್ತಮ ಜೀವನ ರೂಪಿಸಿಕೊಳ್ಳಲು ಬಿಎಸ್ಸಿ ಸಹಾರಿಯಾಗಿದೆ. ಹತ್ತು ಹಲವು ಕಾಂಬಿನೇಶನ್ ಇರುವ ಬಿಎಸ್ಸಿ ಕೋರ್ಸ್ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುತ್ತಾ ಯುವಕರನ್ನು ತನ್ನತ್ತ ಆಕರ್ಷಿಸುತ್ತಿದೆ.

ಭವಿಷ್ಯ ರೂಪಿಸುವ ಇ- ಬಿಸಿನೆಸ್ ಎನ್ನೋ ಟ್ರೆಂಡಿ ಶಿಕ್ಷಣ

ಉದ್ಯೋಗಾವಕಾಶ ಸೃಷ್ಟಿಸುವ ಬಿಎಸ್ಸಿ

ಬಿಎಸ್ಸಿ ಇನ್‌ ಅಗ್ರಿಕಲ್ಚರ್‌, ಹಾರ್ಟಿಕಲ್ಚರ್‌, ಫಾರೆಸ್ಟ್ರಿ, ಐಟಿ, ಕಂಪ್ಯೂಟರ ಸೈನ್ಸ್‌, ಕೆಮೆಸ್ಟ್ರೀ, ಮೆಥಮೆಟಿಕ್ಸ್‌, ಫಿಸಿಕ್ಸ್‌ , ಹೊಟೇಲ್‌ ಮ್ಯಾನೇಜ್ಮೆಂಟ್‌, ನಾಟಿಕಲ್‌ ಸೈನ್ಸ್‌, ಇಲೆಕ್ಟ್ರಾನಿಕ್ಸ್‌, ಇಲೆಕ್ಟ್ರಾನಿಕ್ಸ್‌ ಆಂಡ್‌ ಕಮ್ಯೂನಿಕೇಶನ್‌, ಬಯೋಟೆಕ್ನಾಲಜಿ, ಏವಿಯೇಷನ್‌, ಅನಿಮೇಷನ್‌ ಆಂಡ್‌ ಮಲ್ಟಿ ಮೀಡಿಯಾ ಮೊದಲಾದ ವಿಭಾಗಗಳಲ್ಲಿ ಬಿಎಸ್ಸಿ ಮಾಡಲು ಅವಕಾಶವಿದೆ.

ಇನ್ನು ಇಂಜಿನಿಯರಿಂಗ್ ಕೋರ್ಸ್ ಗೆ ಸಮಾನವಾದ ಬಿಸಿಎ, ಬಿಆರ್ಕ್ ಕೋರ್ಸುಗಳಿಗೂ ಸಾಕಷ್ಟು ಬೇಡಿಕೆ ಇದೆ.

ಬಿಎಸ್ಸಿಯ ರೀತಿಯಲ್ಲೇ ಪಿಯುಸಿ ಬಳಿಕ ಮಾಡಬಹುದಾದ ಮೂರು ವರ್ಷಗಳ ಕೋರ್ಸ್‌ ಬಿಸಿಎ (ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಶನ್‌). ಬಿಇ ಕಂಪ್ಯೂಟರ್ ಸೈನ್ಸ್ ನಷ್ಟೇ ಮಹತ್ವ ಪಡೆದಿದ್ದು, ಎಂಎನ್ಸಿ ಕಂಪನಿ ಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ.

ಬಿಆರ್ಕ್ (ಬ್ಯಾಚುಲರ್‌ ಆಫ್‌ ಆರ್ಕಿಟೆಕ್ಚರ್‌) ಬಿಇ ಅರ್ಚಿಟೆಕ್ಚರ್ ನಷ್ಟೇ ಮಹತ್ವ ಇದೆ. ಕಟ್ಟಡ ನಿರ್ಮಾಣ, ಸಾರ್ವಜನಿಕ ಉಪಯೋಗದ ಇತರ ಮೂಲಸೌಕರ್ಯಗಳ ನಿರ್ಮಾಣವನ್ನು ಇದು ಕಲಿಸುತ್ತದೆ. ಐದು ವರ್ಷಗಳ ಈ ಕೋರ್ಸು ಮುಗಿಸಿದರೆ ಸ್ವಯಂ ಕಂಪನಿಯನ್ನು ಕೂಡ ಸ್ಥಾಪಿಸಿ ಉದ್ಯೋಗ ಕಂಡುಕೊಳ್ಳಬಹುದಾಗಿದೆ.

ಇದರ ಜೊತೆ ವೈದ್ಯಕೀಯಕ್ಕೆ ಸಂಬಂಧಿಸಿದ ಫಾರ್ಮಸಿ, ಪ್ಯಾರಾಮೆಡಿಕಲ್ ಕೋರ್ಸುಗಳು ಸಹ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ.

English summary
BSc is a low cost course and has a variety of courses. BSc course creating more jobs opportunities to youths.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia