ಕೆಪಿಎಸ್‌ಸಿ: ಅರ್ಹತೆ ಇದ್ದರೂ ಅರ್ಜಿ ಸಲ್ಲಿಸದ 247 ಮಂದಿ!

ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರ್ಸ್‌ ಹುದ್ದೆ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾದ 8,327 ಅಭ್ಯರ್ಥಿಗಳ ಪೈಕಿ 8,042 ಅಭ್ಯರ್ಥಿಗಳು ಮಾತ್ರ ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿದ್ದಾರೆ.

2015ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್ಸ್‌ ಹುದ್ದೆಗಳ ಮುಖ್ಯ ಪರೀಕ್ಷೆಗೆ ಆಯ್ಕೆಯಾದವರ ಪೈಕಿ 247 ಮಂದಿ ಮುಖ್ಯ ಪರೀಕ್ಷೆಯಿಂದ ಹಿಂದೆ ಸರಿದಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪರೀಕ್ಷಾರ್ಥಿಗಳು ಅಂತಿಮ ಪರೀಕ್ಷೆಯಿಂದ ಹೊರಗುಳಿದಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್‌ ಪ್ರೊಬೆಷನರ್ಸ್‌ ಹುದ್ದೆ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾದ 8,327 ಅಭ್ಯರ್ಥಿಗಳ ಪೈಕಿ 8,042 ಅಭ್ಯರ್ಥಿಗಳು ಮಾತ್ರ ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿದ್ದಾರೆ.

ಕೆಪಿಎಸ್ಸಿ: ಗ್ರೂಪ್ 'ಸಿ' 1604 ಹುದ್ದೆಗಳ ನೇಮಕಾತಿಕೆಪಿಎಸ್ಸಿ: ಗ್ರೂಪ್ 'ಸಿ' 1604 ಹುದ್ದೆಗಳ ನೇಮಕಾತಿ

ಕೆಪಿಎಸ್‌ಸಿ: ಹಿಂದೆ ಸರಿದ 247 ಮಂದಿ

ಕಳೆದ ಆಗಸ್ಟ್‌ ತಿಂಗಳಲ್ಲಿ ಪ್ರಿಲೀಮ್ಸ್‌ ನಡೆದ ವೇಳೆ 1.31 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 8,327 ಅಭ್ಯರ್ಥಿಗಳು ಅಂತಿಮ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು. ಇದಕ್ಕಾಗಿ ಅರ್ಜಿ ಆಹ್ವಾನಿಸಿದಾಗ 8,042 ಅಭ್ಯರ್ಥಿಗಳು ಮಾತ್ರ ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿದ್ದಾರೆ.

ಪರೀಕ್ಷೆಯಿಂದ ಹೊರಗುಳಿದವರನ್ನು ಹೊರತುಪಡಿಸಿ ಅರ್ಜಿ ಸಲ್ಲಿಸಿಯೂ ಶುಲ್ಕ ಪಾವತಿಸದ 38 ಅಭ್ಯರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಈ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಬೇಕೇ, ಬೇಡವೆ ಎಂಬುದನ್ನು ಇನ್ನೆರಡು ದಿನಗಳಲ್ಲಿ ಆಯೋಗ ತೀರ್ಮಾನಿಸಲಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಪ್ರಸನ್ನಕುಮಾರ್‌ ಹೇಳಿದ್ದಾರೆ.

ಕೆಎಎಸ್ ಪೂರ್ವಭಾವಿ ಪರೀಕ್ಷೆ ಪಾಸ್ ಮಾಡುವುದೇ ಕಷ್ಟ ಅಂತಹುದರಲ್ಲಿ ಮುಖ್ಯ ಪರೀಕ್ಷೆ ಬರೆದು ಸರಕಾರದ ಪ್ರಮುಖ ಹುದ್ದೆಗಳಾಗಿರುವ ತಹಸೀಲ್ದಾರ್‌, ಡಿವೈಎಸ್ಪಿ ಅಂತಹ ಹುದ್ದೆಗಳಿಗೆ ಆಯ್ಕೆಯಾಗುವ ಅವಕಾಶ ಬಂದಿರುವುದನ್ನು ಕಳೆದುಕೊಂಡಿರುವುದು ಅನೇಕರಲ್ಲಿ ಆಶ್ಚರ್ಯ ಉಂಟು ಮಾಡಿದೆ.

ಅರ್ಜಿ ಹಾಕದ ಕಾರಣ ಆ ಎಲ್ಲಾ 247 ಮಂದಿ ಅಂತಿಮ ಪರೀಕ್ಷೆ ಬರೆಯುವಂತಿಲ್ಲ. ಇವರನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲು ಆಯೋಗ ಸಿದ್ಧತೆ ನಡೆಸಿದೆ.

ಅಂತಿಮ ಪರೀಕ್ಷೆಗೆ ಅರ್ಹತೆ ಪಡೆದಿದ್ದವರ ಪೈಕಿ 247 ಅಭ್ಯರ್ಥಿಗಳು ಏಕೆ ಅರ್ಜಿ ಹಾಕಿಲ್ಲ ಎಂಬುದು ತಿಳಿದಿಲ್ಲ. ಇದಕ್ಕೆ ನಿಖರ ಕಾರಣ ಗೊತ್ತಿಲ್ಲ. ಪರೀಕ್ಷೆಗೆ ಅರ್ಜಿ ಹಾಕುವುದು ಹಾಗೂ ಹಾಜರಾಗುವುದು ಅಭ್ಯರ್ಥಿಗೆ ಬಿಟ್ಟ ವಿಚಾರ. ಅಂತಿಮ ಪರೀಕ್ಷೆಗೆ ಆಯೋಗ ಸಿದ್ಧತೆ ಕೈಗೊಂಡಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಪ್ರಸನ್ನಕುಮಾರ್‌ ಹೇಳಿದ್ದಾರೆ.

ಪರೀಕ್ಷೆಯಿಂದ ಹಿಂದೆ ಸರಿಯಲು ಕಾರಣ

ಅಂತಿಮ ಪರೀಕ್ಷೆಗೆ ಅಭ್ಯರ್ಥಿಗಳು ಅರ್ಜಿ ಹಾಕದಿರಲು ಹಲವಾರು ಕಾರಣಗಳಿವೆ. ಕೆಪಿಎಸ್ಸಿಗಿಂತ ಉನ್ನತ ಮಟ್ಟದ ಪರೀಕ್ಷೆಗಳನ್ನು ತೆಗೆದುಕೊಂಡಿದ್ದರೆ ಮತ್ತು ಉನ್ನತ ವ್ಯಾಸಂಗದಲ್ಲಿ ತೊಡಗಿಸಿಕೊಂಡಿದ್ದರೆ ಪರೀಕ್ಷೆಯಿಂದ ಹೊರಗುಳಿಯುವ ಸಾಧ್ಯತೆಗಳಿವೆ.

ಮುಖ್ಯ ಪರೀಕ್ಷೆ ದಿನಾಂಕ

ಬೆಂಗಳೂರು ಹಾಗೂ ಧಾರವಾಡ ನಗರಗಳ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

'ಎ' ಹಾಗೂ 'ಬಿ' ವೃಂದದ ಒಟ್ಟು 428 ಹುದ್ದೆಗಳ ಅಂತಿಮ ಪರೀಕ್ಷೆ ಡಿ.16ರಿಂದ ಆರಂಭವಾಗಲಿದೆ. ಮೊದಲ ಎರಡು ದಿನ ಪರೀಕ್ಷೆ ನಡೆದು ಡಿ.19ರಿಂದ 23ರ ವರೆಗೆ ದಿನ ಬಿಟ್ಟು ದಿನ ಪರೀಕ್ಷೆ ನಿಗದಿ ಮಾಡಲಾಗಿದೆ.

ಕೆಪಿಎಸ್ಸಿ: 2015 ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆ ವೇಳಾಪಟ್ಟಿಕೆಪಿಎಸ್ಸಿ: 2015 ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆ ವೇಳಾಪಟ್ಟಿ

For Quick Alerts
ALLOW NOTIFICATIONS  
For Daily Alerts

English summary
KPSC Gazetted Probationers main examination, Out of 8,327 applicants who passed the preliminary examination only 8,042 candidates applied.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X