ವೈದ್ಯರ ನೇಮಕಾತಿ: ಆನ್-ಲೈನ್ ಬಿಡ್ ನಲ್ಲಿ ವೈದ್ಯರ ಡಿಮ್ಯಾಂಡ್

ಕಳೆದ ಒಂದು ವರ್ಷದಲ್ಲಿ ನೂರಕ್ಕು ಅಧಿಕ ವೈದ್ಯರುಗಳು ಸೇವೆಯಿಂದ ಹೊರ ನಡೆದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು ಆನ್‌ಲೈನ್‌ ಬಿಡ್ ಮಾಡಲಾಗುತ್ತಿದೆ. ಇದಕ್ಕೆ ವೈದ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ವೈದ್ಯರ ನೇಮಕಾತಿಗೆ ಆನ್-ಲೈನ್ ಬಿಡ್ ಮಾಡಲಾಗಿತ್ತು. ಇದಕ್ಕೆ ಈವರೆಗೂ 2883 ವೈದ್ಯರುಗಳು ಸ್ಪಂದಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1,212 ಹುದ್ದೆಗಳಿಗೆ ನಡೆಸಲಾದ ಆನ್‌ಲೈನ್‌ ಬಿಡ್‌ನಲ್ಲಿ 2,883 ವೈದ್ಯರು ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ನೂರಕ್ಕು ಅಧಿಕ ವೈದ್ಯರುಗಳು ಸೇವೆಯಿಂದ ಹೊರ ನಡೆದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು ಆನ್‌ಲೈನ್‌ ಬಿಡ್ ಮಾಡಲಾಗುತ್ತಿದೆ. ಇದಕ್ಕೆ ವೈದ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ವೈದ್ಯರ ನೇಮಕಾತಿಗೆ ಆನ್-ಲೈನ್ ಬಿಡ್

ಯಾವ ವೈದ್ಯರು ಎಷ್ಟು ಡಿಮ್ಯಾಂಡ್?

  • ಅರಿವಳಿಕೆ ತಜ್ಞ ಹುದ್ದೆಗೆ ₹,80,000 ದಿಂದ ₹ 4 ಲಕ್ಷ
  • ಜನರಲ್ ಸರ್ಜರಿ ₹ 60,000 ದಿಂದ ₹ 4 ಲಕ್ಷ
  • ಮಕ್ಕಳ ತಜ್ಞ ₹ 70,000 ದಿಂದ ₹ 4.5 ಲಕ್ಷ
  • ಪ್ರಸೂತಿ ಮತ್ತು ಸ್ತ್ರೀರೋಗ ₹80,000 ದಿಂದ ₹ 5 ಲಕ್ಷ
  • ಮೂಳೆ ತಜ್ಞರು ₹ 60,000 ದಿಂದ ₹ 5 ಲಕ್ಷದ ವರೆಗೆ ವೇತನ ಕೇಳಿದ್ದಾರೆ.

ಅರ್ಜಿಗಳ ಪರಿಶೀಲನೆಗೆ ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ.

ಯಾವ ಜಿಲ್ಲೆಗೆ ಎಷ್ಟು ಅರ್ಜಿ?

ಬೆಂಗಳೂರು ನಗರ ಜಿಲ್ಲೆಯ 11 ಹುದ್ದೆಗಳಿಗೆ 427 ಮತ್ತು ಗ್ರಾಮಾಂತರ ಜಿಲ್ಲೆಯ 9 ಹುದ್ದೆಗಳಿಗೆ 149 ಅರ್ಜಿಗಳು ಬಂದಿವೆ. ಕಲಬುರ್ಗಿಯ 112 ಹುದ್ದೆಗಳಿಗೆ 257, ಬೆಳಗಾವಿಯಲ್ಲಿ 80 ಹುದ್ದೆಗೆ 147, ರಾಮನಗರದಲ್ಲಿ 22 ಹುದ್ದೆಗಳಿಗೆ 143 ಅರ್ಜಿಗಳು ಸಲ್ಲಿಕೆಯಾಗಿವೆ. ಚಾಮರಾಜನಗರ ಜಿಲ್ಲೆಗೆ ಕಡಿಮೆ ಅರ್ಜಿಗಳು ಬಂದಿದ್ದು, 22 ಹುದ್ದೆಗಳಿಗೆ 13 ಅರ್ಜಿ ಮಾತ್ರ ಸಲ್ಲಿಕೆಯಾಗಿವೆ.

ಈಗಿನ ವೇತನ

ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ ನೇಮಕ ಆಗುವ ವೈದ್ಯರಿಗೆ ₹ 1.30 ಲಕ್ಷ ವೇತನ ಹಾಗೂ ಸಾಮರ್ಥ್ಯ ಆಧಾರಿತ ಪ್ರೋತ್ಸಾಹ ಧನವಾಗಿ ₹ 20,000ದಿಂದ ₹ 70,000ವರೆಗೆ ನೀಡಲಾಗುತ್ತಿದೆ.

ಉಳಿದ ಜಿಲ್ಲೆಗಳಲ್ಲಿ ₹ 1.10 ಲಕ್ಷ ವೇತನ ಹಾಗೂ ₹ 10,000 ದಿಂದ ₹ 70,000 ವರೆಗೆ ಸಾಮರ್ಥ್ಯ ಆಧಾರಿತ ಪ್ರೋತ್ಸಾಹಧನ ನೀಡಲಾಗುತ್ತಿದೆ.

For Quick Alerts
ALLOW NOTIFICATIONS  
For Daily Alerts

English summary
A week since it opened online bidding for specialist doctors, the state government has received at least 2883 applications for the contractual postings to various state-run hospitals across Karnataka.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X