10 ಸಾವಿರ ಶಿಕ್ಷಕರ ನೇಮಕ: 3ನೇ ಸುತ್ತಿನ ಮೌಲ್ಯಮಾಪನಕ್ಕೆ ಅವಕಾಶ

Posted By:

ಶಿಕ್ಷಕರ ನೇಮಕಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅಂಕಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದರೆ 3ನೇ ಸುತ್ತಿನ ಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಭಾರತೀಯ ಸೇನೆ ನೇಮಕಾತಿ: ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಉಚಿತ ತರಬೇತಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮೌಲ್ಯಮಾಪನ ಪದ್ಧತಿಯಲ್ಲಿ ಬದಲಾವಣೆ ಮಾಡಿ ಮೌಲ್ಯಮಾಪನ ಶೇ.15 ಅಂಕಗಳು ವ್ಯತ್ಯಾಸ ಬಂದರೆ ತೃತೀಯ ಬಾರಿಗೆ ಮೌಲ್ಯಮಾಪನ ನಡೆಸಲು ನಿರ್ಧರಿಸಲಾಗಿದೆ.

ಕೆಎಎಸ್ ಮುಖ್ಯ ಪರೀಕ್ಷೆಗೆ ಕೆಎಸ್ಒಯು ಪದವಿ ಪಡೆದ ಅಭ್ಯರ್ಥಿಗಳನ್ನು ಪರಿಗಣಿಸುವಂತೆ ಹೈಕೋರ್ಟ್ ಗೆ ಅರ್ಜಿ

3ನೇ ಸುತ್ತಿನ ಮೌಲ್ಯಮಾಪನಕ್ಕೆ ಅವಕಾಶ

ಮೂರನೇ ಬಾರಿಗೆ ಮೌಲ್ಯಮಾಪನ ಮಾಡುವುದರಿಂದ ಶಿಕ್ಷಕರು ಮೌಲ್ಯಮಾಪನ ಪ್ರಶ್ನಿಸಿ ಅನವಶ್ಯಕವಾಗಿ ಆಕ್ಷೇಪಣೆ ಸಲ್ಲಿಸುವುದು ಮತ್ತು ಕೋರ್ಟ್ ಮೊರೆ ಹೋಗುವುದು ತಪ್ಪಲಿದೆ.

ಹೊಸ ಪದ್ಧತಿಯನ್ನು 10 ಸಾವಿರ ಶಿಕ್ಷಕರ ನೇಮಕಕ್ಕೆ ಕಳೆದ ತಿಂಗಳು ನಡೆಸಿದ ಸಿಇಟಿಯ ಮೌಲ್ಯಮಾಪನದಿಂದಲೇ ಜಾರಿಗೊಳಿಸಲು ನಿರ್ಧರಿಸಿದೆ.

ಇದೇ ಮೊದಲು ಬಾರಿಗೆ ಶಿಕ್ಷಣ ಇಲಾಖೆ ಬಹು ಆಯ್ಕೆ ಪದ್ಧತಿ ಹೊರತು ಪಡಿಸಿ ವಿಸ್ತಾರವಾದ ಮಾದರಿಯಲ್ಲಿ ಪರೀಕ್ಷೆ ನಡೆಸುತ್ತಿದೆ. ಹೀಗಾಗಿ ಮೌಲ್ಯಮಾಪನ ಪದ್ಧತಿಯಲ್ಲಿ ಬದಲಾವಣೆ ಮಾಡಲಿದೆ. ಕೆಪಿಎಸ್ಸಿ ಮಾದರಿಯಲ್ಲಿ 2 ಬಾರಿಗೆ ಮೌಲ್ಯಮಾಪನ ನಡೆಸಲಿದೆ.

ಮೆರಿಟ್ ಆಧಾರದಲ್ಲಿ ಆಯ್ಕೆ ಪಟ್ಟಿ, ಮೀಸಲು ಕೋಟಾದಡಿ ಸೀಟುಗಳ ಪಟ್ಟಿ ಹಾಗೂ ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಎಲ್ಲ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಮೆರಿಟ್ ನಿರ್ಧರಿಸಲು ಪರಿಗಣಿಸಲಾಗುವುದು. ಅಂದರೆ, ಭಾಷೆ-ಆಂಗ್ಲ ವಿಷಯದ ಹುದ್ದೆಗೆ ಪೇಪರ್-1 ಮತ್ತು ಪೇಪರ್-2 ರಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದು.

ಪೇಪರ್-1, ಪೇಪರ್-2 ಪತ್ರಿಕೆಯಲ್ಲಿ ಕನಿಷ್ಟ ಶೇ.50 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ. ಪೇಪರ್-3 ಪತ್ರಿಕೆಯಲ್ಲಿ ಕನಿಷ್ಟ ಶೇ. 60 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.

English summary
The Education Department has decided to allow the 3rd round evaluation to be made in the Common Entrance Examination for Teachers recruitment.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia