40 Percent Students Taking Tutions : ಶೇ.40 ರಷ್ಟು ವಿದ್ಯಾರ್ಥಿಗಳು ಟ್ಯೂಷನ್ ಮೊರೆ ಹೋಗಿದ್ದಾರೆ : ಎಎಸ್‌ಇಆರ್ ವರದಿ

ಭಾರತದಲ್ಲಿ 2021ನೇ ಸಾಲಿನಲ್ಲಿ ಟ್ಯೂಷನ್ ತರಗತಿಗಳಿಗೆ ಹೋಗುವ ವಿದ್ಯಾರ್ಥಿಗಳ ಪ್ರಮಾಣವು ಶೇಕಡಾ 40ಕ್ಕೆ ಜಿಗಿದಿದೆ ಎಂದು ರಾಷ್ಟ್ರೀಯ ಮಟ್ಟದ ಸಮೀಕ್ಷೆಯು ಬಹಿರಂಗಪಡಿಸಿದೆ. 2018 ರಲ್ಲಿ ಈ ಸಂಖ್ಯೆಯು ಶೇಕಡಾ 30 ಕ್ಕಿಂತ ಕಡಿಮೆಯಿತ್ತು ಆದರೆ ಅದು ಈಗ ಹದಿನಾರನೇ ವಾರ್ಷಿಕ ಶಿಕ್ಷಣದ ಸ್ಥಿತಿಯ ವರದಿ (ಗ್ರಾಮೀಣ) ಅಥವಾ ASER 2021 ರ ಪ್ರಕಾರ ಶೇಕಡಾ 10 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದೆ ಎಂದು ವರದಿ ಬಿಡುಗಡೆಯಾಗಿದೆ.

 
ಟ್ಯೂಷನ್ ತರಗತಿಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಶೇ.40ಕ್ಕೆ ಜಿಗಿತ

ASER ವರದಿಯ ಪ್ರಕಾರ ಕೇರಳವನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲಿ ಟ್ಯೂಷನ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.

ಸಮೀಕ್ಷೆಯ ಪ್ರಕಾರ ಈ ಸಂಖ್ಯೆಯು ಲಿಂಗ ಮತ್ತು ಎಲ್ಲಾ ಶ್ರೇಣಿಗಳು ಮತ್ತು ಶಾಲಾ ಪ್ರಕಾರಗಳಲ್ಲಿಯೂ ಕೂಡ ಹೆಚ್ಚಾಗಿಯೇ ಕಂಡುಬಂದಿದೆ.
ಸಾಮಾನ್ಯವಾಗಿ ಕಡಿಮೆ ಅನುಕೂಲವಿರುವ ವಿದ್ಯಾರ್ಥಿಗಳು ಟ್ಯೂಷನ್-ತೆಗೆದುಕೊಳ್ಳುವಿಕೆಯ ಪ್ರಮಾಣ ಹೆಚ್ಚಾಗಿದೆ.

"ಪೋಷಕರ ಶಿಕ್ಷಣವನ್ನು ಆರ್ಥಿಕ ಸ್ಥಿತಿಗೆ ಪ್ರಾಕ್ಸಿಯಾಗಿ ತೆಗೆದುಕೊಳ್ಳುವುದರಿಂದ, ಕಡಿಮೆ ಶಿಕ್ಷಣವನ್ನು ಹೊಂದಿರುವ ಪೋಷಕರ ಮಕ್ಕಳ ಪ್ರಮಾಣವು ಶೇಕಡಾ 12.6ರಷ್ಟು ಹೆಚ್ಚಾಗಿದೆ. ಉನ್ನತ ಶಿಕ್ಷಣವನ್ನು ಹೊಂದಿರುವ ಪೋಷಕರ ವರ್ಗವನ್ನು ಗಮನಿಸಿದಾಗ ಅವರ ಮಕ್ಕಳಲ್ಲಿ ಟ್ಯೂಷನ್ ಹೋಗುವವರ ಸಂಖ್ಯೆ ಶೇಕಡಾ 7.2ರಷ್ಟು ಹೆಚ್ಚಳವಾಗಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ.

ಶಾಲೆಗಳು ಪುನರಾರಂಭಗೊಂಡ ಬಳಿಕ ಟ್ಯೂಷನ್ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ. "ಶಾಲಾ ಪುನರಾರಂಭದ ಸ್ಥಿತಿಯಿಂದ ಟ್ಯೂಷನ್ ತೆಗೆದುಕೊಳ್ಳುವ ಮಕ್ಕಳ ಅನುಪಾತದಲ್ಲಿ ಕೆಲವು ವ್ಯತ್ಯಾಸಗಳು ಗೋಚರಿಸುತ್ತವೆಯಾದರೂ ಸಮೀಕ್ಷೆಯ ಸಮಯದಲ್ಲಿ ಇನ್ನೂ ಶಾಲೆಗಳನ್ನು ಮುಚ್ಚಿರುವ ಮಕ್ಕಳಲ್ಲಿ ಟ್ಯೂಷನ್ ಹೋಗುವವರ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ ಎಂದೂ ಸಮೀಕ್ಷೆ ತಿಳಿಸಿದೆ.

ASER 2021 ವರದಿಯು 25 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೆಯನ್ನು ಆಧರಿಸಿದೆ. ಒಟ್ಟಾರೆ ವರದಿಯು ಒಟ್ಟು 76,706 ಕುಟುಂಬಗಳು ಮತ್ತು 5-16 ವರ್ಷ ವಯಸ್ಸಿನ 75,234 ಮಕ್ಕಳು ಮತ್ತು 7,299 ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರನ್ನು ಒಳಗೊಂಡಿದೆ.

For Quick Alerts
ALLOW NOTIFICATIONS  
For Daily Alerts

English summary
ASER 2021 report says around 40 percent of students taking tution classes in india.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X