Bengaluru Girl Wrote Book On Lockdown : ಕೊರೊನಾ ಪಿಡುಗಿನ ಲಾಕ್‌ಡೌನ್ ಕುರಿತು ಪುಸಕ್ತ ಪ್ರಕಟಿಸಿದ 7 ವರ್ಷದ ಬಾಲೆ

ಕೊರೊನಾ ಲಾಕ್‌ಡೌನ್ ಕುರಿತು ಪುಸ್ತಕ ಪ್ರಕಟಿಸಿದ ಬೆಂಗಳೂರಿನ 7 ವರ್ಷದ ಬಾಲೆ ಜಿಯಾ

ಕೊರೋನಾ ಪಿಡುಗು ಎಲ್ಲೆಡೆ ಹಬ್ಬಿದ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಧಿಸಲಾಗಿತ್ತು ಅಂತಹ ಸಮಯದಲ್ಲಿ 7 ವರ್ಷದ ಪೋರಿ ಒಂದು ಮಹತ್ತರವಾದ ಕೆಲಸವನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾಳೆ.

ಬೆಂಗಳೂರಿನ 7 ವರ್ಷದ ಬಾಲಕಿ ಜಿಯಾ ಗಂಗಾಧರ್ ಲಾಕ್‌ಡೌನ್ ಸಮಯದಲ್ಲಿ ತನ್ನ ಅನುಭವಗಳನ್ನು ಕುರಿತು ಪುಸಕ್ತ ಬರೆಯುವ ಮೂಲಕ ಸದುಪಯೋಗಮಾಡಿಕೊಂಡಿದ್ದಾಳೆ.

ಜಿಯಾ 'L is for Lockdown-Jiya's journal of lockdown lessons' ಎಂಬ ಹೆಸರುಳ್ಳ ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಪುಸಕ್ತದಲ್ಲಿ ಲಾಕ್‌ಡೌನ್ ಸಮಯದಲ್ಲಾದ ಅನುಭವ, ಆನ್‌ಲೈನ್ ತರಗತಿಗಳು ಮತ್ತು ಸೈಬ್ರರ್ ಕ್ರೈಂ ಗೆ ಸಂಬಂಧಿಸಿದ ಇತರೆ ವಿಚಾರಗಳನ್ನು ಹಂಚಿಕೊಂಡಿದ್ದಾಳೆ.

ಜಿಯಾ ತನ್ನ ಶಿಕ್ಷಕಿ ಸಹಾಯ ಪಡೆದುಕೊಂಡು ಈ ಪುಸ್ತಕವನ್ನು ಪ್ರಕಟ ಮಾಡಿದ್ದಾಳೆ. ಈಕೆ ಬರೆದಿರುವ ಪುಸ್ತಕವನ್ನು ಅಮೆಜಾನ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಪುಸ್ತಕದ ಬೆಲೆ 158 ರೂಪಾಯಿಗಳು.

ಜಿಯಾಳ ತಾಯಿ ಮಾರ್ಕೆಟಿಂಗ್ ಪ್ರೊಫೆಷನಲ್​ ಆಗಿದ್ದವರು. ಅವರು ತಮ್ಮ ಮಗುವಿನ ದೈನಂದಿನ ದಿನಚರಿಯ ಪುಸ್ತಕವನ್ನು ಓದಿದ ಬಳಿಕ ಒಂದೊಳ್ಳೆಯ ಪುಸ್ತಕ ಬರೆಯುವ ಅವಳ ಆಸೆಯನ್ನು ಪ್ರೋತ್ಸಾಹಿಸಿದರು.

ಈ ಪುಸ್ತಕದಲ್ಲಿ ಜಿಯಾ ಮನೆಯಲ್ಲಿರುವಾಗ ನ್ಯೂಸ್‌ಪೇಪರ್ ಹಾಕುವವರೊಂದಿಗಿನ ಸಂವಹನ, ಆನ್‌ಲೈನ್ ಗೇಮ್ ಆಡುವಾಗ ಕಳೆದ ಕ್ಷಣಗಳು ಮತ್ತು ಸೈಬರ್ ಕ್ರೈಂ ಬಗ್ಗೆ ಪ್ರಾಥಮಿಕ ಮಾಹಿತಿ ತಿಳಿದುಕೊಂಡಿದ್ದರ ಬಗ್ಗೆ ವಿವರಿಸಿದ್ದಾಳೆ.

ಲಾಕ್​ಡೌನ್​ ಆದಾಗಿನಿಂದಲೇ ಆನ್ಲೈನ್ ತರಗತಿಗಳು ಜಾರಿಗೆ ಬಂದವು ಹಾಗಾಗಿ ನಾನು ಹೆಚ್ಚು ಸಮಯ ಅದರಲ್ಲೇ ಕಳೆಯಬೇಕಾಯಿತು. ಹಾಗಾಗಿ ಅದರಿಂದ ನನ್ನ ದಿನಚರಿಯೊಂದಿಗೆ ಸಮಯ ಕಳೆಯಲು ಅನುಕೂಲವಾಯಿತು. ಬಹುಶ: ಶಾಲೆಗೆ ಹೋಗುತ್ತಿರುವಾಗ ಈ ಅನುಭವನ್ನು ಪಡೆಯಲು ಸಾಧ್ಯವಿರಲಿಲ್ಲ. ಮನೆಯಲ್ಲಿ ತಂದೆ- ತಾಯಿ ನನ್ನ ಜತೆ ಇದ್ದದುದರಿಂದ ಅವರು ನನಗೆ ಸಹಾಯ ಮಾಡಿದರು ಎಂದು ಜಿಯಾ ಹೇಳಿದ್ದಾಳೆ. ಈ ಕುರಿತಂತೆ ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

For Quick Alerts
ALLOW NOTIFICATIONS  
For Daily Alerts

English summary
Bengaluru's 7 year old girl jiya gangadhar published a book on pandemic lockdown. Whats the title and how much price for it those details here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X