ಐಐಟಿ ಐಐಎಸ್ಸಿಗಳಲ್ಲಿ ಸಂಶೋಧನೆ ಮಾಡುವವರಿಗೆ ರೂ.70000 ಫೆಲೋಷಿಪ್

ಸಧ್ಯ ಐಐಟಿಯಲ್ಲಿ ಸಂಶೋಧನೆ ನಡೆಸುವವರಿಗೆ ಮಾಸಿಕ 25 ಸಾವಿರ ಫೆಲೋಷಿಪ್‌ ನೀಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಕೇವಲ ಆರ್ಥಿಕ ಕಾರಣದಿಂದ ದೇಶದಿಂದ ಹೊರ ಹೋಗುತ್ತಿದ್ದಾರೆ ಇದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ

ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಗಳಲ್ಲಿ ಪಿಎಚ್‌ಡಿ ಸಂಶೋಧನೆಗಳಲ್ಲಿ ತೊಡಗುವವರಿಗೆ ಕೇಂದ್ರ ಸರ್ಕಾರ ಮಾಸಿಕ 70000 ರೂ.ಫೆಲೊಷಿಪ್ ನೀಡುವುದಾಗಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸಂಶೋಧನಾ ಫೆಲೋಷಿಪ್‌ ಯೋಜನೆ ಅಡಿಯಲ್ಲಿ ಹೊಸ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಮುಂಬರುವ ವರ್ಷದಿಂದ ಇದು ಜಾರಿಯಾಗುವ ಸಾಧ್ಯತೆ ಇದೆ.

ಸಂಶೋಧನೆ ಮಾಡುವವರಿಗೆ ರೂ.70000 ಫೆಲೋಷಿಪ್

ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಐಐಟಿ ಖರಗ‍ಪುರದ 67ನೇ ಸಂಸ್ಥಾಪನಾ ದಿನದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸರ್ಕಾರದ ಉನ್ನತ ಇಲಾಖೆಯ ಕಾರ್ಯದರ್ಶಿ ಕೆವಲ್‌ ಕುಮಾರ್‌ ಶರ್ಮಾ ಈ ವಿಚಾರ ತಿಳಿಸಿದ್ದಾರೆ.

ಪ್ರಸಕ್ತ ಐಐಟಿಯಲ್ಲಿ ಸಂಶೋಧನೆ ನಡೆಸುವವರಿಗೆ ಮಾಸಿಕ ₹25 ಸಾವಿರ ಫೆಲೋಷಿಪ್‌ ನೀಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಕೇವಲ ಆರ್ಥಿಕ ಕಾರಣದಿಂದ ದೇಶದಿಂದ ಹೊರ ಹೋಗುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ, ಅಲ್ಲದೆ ಈ ಫೆಲೋಷಿಪ್ ಪಡೆಯುವವರು ಬೇರೆ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನ ಐಐಎಸ್ಸಿ ಹಾಗೂ ಐಐಟಿಯಲ್ಲಿರುವ 2 ಸಾವಿರ ಮಂದಿಗೆ ಈ ಫೆಲೋಷಿಪ್‌ ನೀಡಲಾಗುವುದು. ಇದನ್ನು ಐದು ವರ್ಷಗಳ ತನಕ ನೀಡಲಾಗುತ್ತದೆ. ಇದರಿಂದ ಪ್ರತಿಭಾವಂತರ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಕಾರ್ಪೊರೇಟ್‌ ಉದ್ಯೋಗ ಅಥವಾ ಉನ್ನತ ವೇತನಕ್ಕಾಗಿ ವಿದೇಶಗಳತ್ತ ಹೋಗುವುದು ತಪ್ಪಿಸಲು ಈ ಯೋಜನೆ ಹೆಚ್ಚು ಸಹಕಾರಿಯಾಗಿದೆ. ಕೇಂದ್ರ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆ ಪ್ರಸ್ತಾಪವಾಗಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
The Centre will provide Rs 70,000 as monthly fellowship to those researchers doing their PhDs in IITs or IISc, Union higher education secretary Kewal Kumar Sharma has said.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X