7th Pay Commission : ರೈಲ್ವೆ ಉದ್ಯೋಗಿಗಳಿಗೆ ಹಬ್ಬಕ್ಕೆ ಬೋನಸ್ ಜೊತೆಗೆ ಡಿಎ ಹೆಚ್ಚಳ

ಹಬ್ಬದ ಸೀಸನ್ ಸಮೀಪಿಸುತ್ತಿರುವಾಗಲೇ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಒಂದು ಒಳ್ಳೆಯ ಸುದ್ದಿ ಇದೆ. ಉದ್ಯೋಗಿಗಳಿಗೆ ಈಗಾಗಲೇ ಡಿಯರ್ನೆಸ್ ಭತ್ಯೆಯ (ಡಿಎ) ಹೆಚ್ಚಳವನ್ನು ಮಾಡಲಾಗಿದ್ದು, ಇದೀಗ ದುರ್ಗಾ ಪೂಜೆಯ ಹಿನ್ನೆಲೆಯಲ್ಲಿ ಬೋನಸ್ ನೀಡಲಾಗುತ್ತಿದೆ. ಕಳೆದ ವರ್ಷದಂತೆಯೇ ಈ ಭಾರಿಯೂ 17,951/- ರೂಗಳನ್ನು ನೌಕರರ ಬ್ಯಾಂಕ್ ಖಾತೆಗೆ ಒಟ್ಟು 78 ದಿನಗಳ ಬೋನಸ್ ಆಗಿ ಜಮಾ ಆಗಲಿದೆ ಎಂದು ವರದಿಗಳು ಹೇಳಿವೆ.

7ನೇ ವೇತನ ಆಯೋಗ : ರೈಲ್ವೆ ಉದ್ಯೋಗಿಗಳಿಗೆ ಸಿಹಿ ಸುದ್ದಿ, ಬೋನಸ್ ಜೊತೆಗೆ ಡಿಎ ನಿಮ್ಮ ಜೇಬಿಗೆ

ರೈಲ್ವೆ ಉದ್ಯೋಗಿಗಳಿಗೆ ಈಬೃಹತ್ ಬೋನಸ್ ಹೊರತಾಗಿ ಜುಲೈನ ಡಿಎ ಕೂಡ ಅವರ ಸಂಬಳಕ್ಕೆ ಸೇರಿಸಲಾಗುತ್ತದೆ. ಅದರರ್ಥ ಈಗ ಬರುತ್ತಿರುವ ಸಂಬಳ ದಲ್ಲಿ ಬೋನಸ್ ಜೊತೆಗೆ ಡಿಎ ಕೂಡ ಸಿಗಲಿದೆ.

ರೈಲ್ವೆ ಉದ್ಯೋಗಿಗಳು ಇತ್ತೀಚೆಗೆ 11% ರಷ್ಟು ಡಿಎ ಹೆಚ್ಚಳವನ್ನು ಪಡೆದಿದ್ದಾರೆ. ಕೇಂದ್ರ ಸರ್ಕಾರವು ಜನವರಿ 2020 ರಿಂದ ಬಹಳ ಸಮಯದಿಂದ ಕಾಯುತ್ತಿದ್ದ ನೌಕರರ ಡಿಎ ಮೇಲಿನ ನಿಷೇಧವನ್ನು ತೆಗೆದುಹಾಕಿತು. ತದನಂತರ ಶೇ.17% ರಿಂದ 28% ಕ್ಕೆ ಡಿಎ ಅನ್ನು ಹೆಚ್ಚಿಸಲಾಗಿದೆ. ಜುಲೈ 2021 ರ ಡಿಎ ಅನ್ನು ಶೇ.3%ರಷ್ಟು ಹೆಚ್ಚಿಸಲು ಸಿದ್ಧವಾಗಿದೆ. ಇದರೊಂದಿಗೆ ಒಟ್ಟು ಡಿಎ ಶೇ.31% ರಷ್ಟಾಗಲಿದೆ ಎಂಬುದು ಸಂತಸದ ವಿಷಯ.

ಧನ್ಬಾದ್ ರೈಲ್ವೆ ವಿಭಾಗವು ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳನ್ನು ಒಳಗೊಂಡಿದೆ. ಈ ವಿಭಾಗಗಳಲ್ಲಿ ಸುಮಾರು 22,222 ಕ್ಕೂ ಹೆಚ್ಚು ಉದ್ಯೋಗಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲಾ ಉದ್ಯೋಗಿಗಳು ಹಬ್ಬದ ಸೀಸನ್ ಆರಂಭವಾಗುವ ಮುನ್ನ ಬೋನಸ್ ಪಡೆಯಲಿದ್ದಾರೆ. ಈಗ ಪ್ರತಿ ಉದ್ಯೋಗಿಯು 17,951/- ರೂಗಳನ್ನು ಬೋನಸ್ ಆಗಿ ಪಡೆದರೆ, ಸುಮಾರು 39 ಕೋಟಿ 90 ಲಕ್ಷವನ್ನು ಬೋನಸ್ ಮೊತ್ತವಾಗಿ ಮಾತ್ರ ವಿತರಿಸಲಾಗುತ್ತದೆ.

ಬೋನಸ್ ಜೊತೆಗೆ ಉದ್ಯೋಗಿ ಮತ್ತು ಅಧಿಕಾರಿಯ ಸಂಬಳದ ಆಧಾರದ ಮೇಲೆ ಹಬ್ಬದ ಸೀಸನ್‌ಗೆ ಮುಂಚಿತವಾಗಿ ರೈಲ್ವೇ ಉದ್ಯೋಗಿಗಳಿಗೆ ಡಿಎ ಕೂಡ ಜಮಾ ಆಗಲಿದೆ. ಆದ್ದರಿಂದ ರೈಲ್ವೆ ಉದ್ಯೋಗಿಗಳಿಗೆ ಹಬ್ಬದ ಸೀಷನ್ ಶುಭಸುದ್ದಿಯನ್ನು ನೀಡಿದೆ.

For Quick Alerts
ALLOW NOTIFICATIONS  
For Daily Alerts

English summary
7th pay commission : good news for railway employees, will get festival bonus and outstanding DA before durga puja.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X