ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅಧಾರ್ ಕಾರ್ಡ್ ಬೇಕಿಲ್ಲ

ಕರ್ನಾಟಕ ಪ್ರೌಢಶಿಕ್ಷಣ ಮತ್ತು ಪರೀಕ್ಷಾ ಮಂಡಳಿ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಡಿ.ಆದರ್ಶ್ ಭಟ್ ಎಂಬುವರ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದರು.

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಆಧಾರ್ ಸಂಖ್ಯೆ ಇಲ್ಲದಿದ್ದರೂ ಪರೀಕ್ಷೆ ಬರೆಯಬಹುದಾಗಿದೆ.

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅಧಾರ್ ಕಾರ್ಡ್ ಇಲ್ಲದೆಯೇ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಸಿಬಿಎಸ್ಇ ಶಾಲೆಗೆ ಪ್ರವೇಶ ಪಡೆಯಲು ಆಧಾರ್ ಕಡ್ಡಾಯಸಿಬಿಎಸ್ಇ ಶಾಲೆಗೆ ಪ್ರವೇಶ ಪಡೆಯಲು ಆಧಾರ್ ಕಡ್ಡಾಯ

ಪರೀಕ್ಷೆಗೆ ಹಾಲ್ ಟಿಕೆಟ್ ನೀಡಲು ಆಧಾರ್ ಕಾರ್ಡ್ ಸಂಖ್ಯೆ ಕಡ್ಡಾಯ ಎಂದು ಇತ್ತೀಚೆಗೆ ಕರ್ನಾಟಕ ಪ್ರೌಢಶಿಕ್ಷಣ ಮತ್ತು ಪರೀಕ್ಷಾ ಮಂಡಳಿ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಡಿ.ಆದರ್ಶ್ ಭಟ್ ಎಂಬುವರ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದರು.

ವಿಜ್ಞಾನ ವಸ್ತು ಪ್ರದರ್ಶನ: ರಾಷ್ಟ್ರಮಟ್ಟಕ್ಕೆ ರಾಜ್ಯದ ವಿದ್ಯಾರ್ಥಿನಿಯರು ವಿಜ್ಞಾನ ವಸ್ತು ಪ್ರದರ್ಶನ: ರಾಷ್ಟ್ರಮಟ್ಟಕ್ಕೆ ರಾಜ್ಯದ ವಿದ್ಯಾರ್ಥಿನಿಯರು

ಪರೀಕ್ಷೆ ಬರೆಯಲು ಅಧಾರ್ ಕಾರ್ಡ್ ಬೇಕಿಲ್ಲ

ಸ್ಟೂಡೆಂಟ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಂ (ಎಸ್ಎಟಿಎಸ್) ಗೆ ಆಧಾರ್ ಸಂಖ್ಯೆ ಸಂಪರ್ಕಿಸುವುದು ಕಡ್ಡಾಯ ಎಂದು ಪರೀಕ್ಷಾ ಮಂಡಳಿ ಇತ್ಥೀಚೆಗೆ ಸುತ್ತೋಲೆ ಹೊರಡಿಸಿತ್ತು.

ಎಸ್ಎಟಿಎಸ್ ನಲ್ಲಿ ಆಧಾರ್ ಸಂಖ್ಯೆ ಬರೆಯದಿದ್ದರೆ, ಅಂದರೆ ಅದು ಖಾಲಿಯಾಗಿ ಉಳಿದಿದ್ದರೆ, ನೀವು ಈ ಅಂಕಣವನ್ನು ಖಾಲಿ ಉಳಿಸುವಂತಿಲ್ಲ ಎಂಬ ಸಂದೇಶ ಬರುತಿತ್ತು. ಇದು ಸಮಸ್ಯೆಗೆ ಕಾರಣವಾಗಿದೆ ಎಂದು ದೂರುದಾರರು ಕೋರ್ಟ್ ಗೆ ತಿಳಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ ನಾಗರತ್ನ, ವಿದ್ಯಾರ್ಥಿಯು ಬೇರೆ ಎಲ್ಲಾ ಅಂಶಗಳಲ್ಲಿ ಪರೀಕ್ಷೆ ಬರೆಯಲು ಅರ್ಹತೆ ಹೊಂದಿದ್ದರೆ ಲಿಖಿತ ಅಥವಾ ವಿದ್ಯುನ್ಮಾನ ತಂತ್ರಜ್ಙಾನವನ್ನು ಬಳಸಿಕೊಂಡು ಹಾಲ್ ಟಿಕೆಟ್ ನೀಡುವಂತೆ ತೀರ್ಪು ನೀಡಿದರು.

ಇದೇ ಅಂಶವನ್ನು ಮುಂದಿಟ್ಟುಕೊಂಡು ವಿವರಣೆ ಕೇಳಿ ರಾಜ್ಯ ಸರ್ಕಾರ ಮತ್ತು ಪರೀಕ್ಷಾ ಮಂಡಳಿಗೆ ನೋಟಿಸ್ ಜಾರಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಆರನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಆರನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಉತ್ತರ ಪ್ರದೇಶದಲ್ಲಿ ಆಧಾರ್ ಕಡ್ಡಾಯ

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಬೋರ್ಡ್ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮುನ್ನ ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ತೋರಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಕೂಡ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿತ್ತು.

ಆಧಾರ್ ಕಾರ್ಡ್

ಆಧಾರ್ ಸಂಖ್ಯೆಯು ಪ್ರಾಧಿಕಾರದಿಂದ ನಿರ್ದಿಷ್ಟಪಡಿಸಲಾಗಿರುವ ಪರಿಶೀಲನಾ ಪ್ರಕ್ರಿಯೆಗಳು ತೃಪ್ತಿಕರವಾಗಿ ಪೂರ್ಣಗೊಂಡನಂತರ ಭಾವಿಗುಪ್ರಾವು ("ಪ್ರಾಧಿಕಾರ") ಭಾರತದ ನಿವಾಸಿಗಳಿಗೆ ನೀಡುವ 12 ಅಂಕೆಗಳ ಯಾದೃಚ್ಛಿಕ ಸಂಖ್ಯೆಯಾಗಿರುತ್ತದೆ. ಆಧಾರ್ ಸಂಖ್ಯೆಯು ಯಾವುದೇ ಗುಪ್ತಚರ ಮಾಹಿತಿ ರಹಿತವಾಗಿರುತ್ತದೆ ಹಾಗೂ ಜಾತಿ, ಮತ, ಆದಾಯ, ಆರೋಗ್ಯ, ಭೌಗೋಳಿಕ ಆಧಾರದ ಮೇರೆಗೆ ಜನತೆಯ ಪಾರ್ಶ್ವಚಿತ್ರಣವನ್ನು ನೀಡುವುದಿಲ್ಲ. ಆಧಾರ್ ಸಂಖ್ಯೆಯು ಗುರುತಿನ ಒಂದು ಸಾಕ್ಷಾಧಾರವಾಗಿರುತ್ತದೆ, ಆದಾಗ್ಯೂ, ಅದು ಆಧಾರ್ ಸಂಖ್ಯೆಯನ್ನು ಹೊಂದಿರುವವರಿಗೆ ಸಂಬಂಧಿಸಿದಂತೆ ಅದು ನಾಗರಿಕತೆಯ ಹಕ್ಕನ್ನು ನೀಡುವುದಿಲ್ಲ.

For Quick Alerts
ALLOW NOTIFICATIONS  
For Daily Alerts

English summary
The High Court has directed that SSLC students be allowed to write the exam without aadhaar card.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X