ಕ್ರೀಡಾ ಕ್ಷೇತ್ರದಲ್ಲಿ ಎ ಬಿ ಡಿ ಎಂಬ ಬಹುಮುಖ ಪ್ರತಿಭೆ

Posted By:

ಒಂದು ಕಾಲದಲ್ಲಿ ಕ್ರೀಡೆಗಳು ಕೇವಲ ಹವ್ಯಾಸವಾಗಿದ್ದವು ಆದರೆ ಇಂದು ಕ್ರೀಡೆಯನ್ನೇ ವೃತ್ತಿಯಾಗಿಸಿಕೊಳ್ಳುವ ಮಟ್ಟಿಗೆ ಕ್ರೀಡಾ ಕ್ಷೇತ್ರ ಬೆಳೆದು ನಿಂತಿದೆ. ಇನ್ನು ಕ್ರೀಡಾ ಕ್ಷೇತ್ರದಲ್ಲಿ ಅವಕಾಶ ಮತ್ತು ಪೈಪೋಟಿ ಕೂಡ ಅದೇ ರೀತಿ ಇರುವುದು ಸುಳ್ಳಲ್ಲ. ಕ್ರೀಡಾ ಕ್ಷೇತ್ರದಲ್ಲಿ ಏನಾದರು ಸಾಧನೆ ಮಾಡಬೇಕು ಎಂದು ಬಯಸುವವರಿಗೆ ಕ್ರಿಕೆಟ್ ನ ಬಹುಮುಖ ಪ್ರತಿಭೆ ಎ ಬಿ ಡಿವಿಲಿಯರ್ಸ್ ಗಿಂತ ಉತ್ತಮ ಉದಾಹರಣೆ ಮತ್ತೊಬ್ಬರಿಲ್ಲ.

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಎ ಬಿ ಡಿ ಮಾಡದ ಸಾಧನೆ ಇಲ್ಲ ಎಂದರೆ ತಪ್ಪಾಗಲಾರದು. ಇಂದು ಅನೇಕ ಕ್ರೀಡಾಭಿಮಾನಿಗಳ ಅಚ್ಚುಮೆಚ್ಚಿನ ಕ್ರೀಡಾಪಟು ಅಷ್ಟೇ ಅಲ್ಲದೇ ಕ್ರಿಕೆಟ್ ಬಗ್ಗೆ ಅದೆಷ್ಟೋ ಕನಸುಗಳನ್ನು ಹೊತ್ತ ಯುವ ಆಟಗಾರಿಗೆ ಸ್ಪೂರ್ತಿಯ ಚಿಲುಮೆ ಎ ಬಿ ಡಿವಿಲಿಯರ್ಸ್.

ಈತ ಆಡದ ಆಟಗಳಿಲ್ಲ. ಮಾಡದ ದಾಖಲೆಗಳಲ್ಲಿಲ್ಲ. ಎಬಿಡಿ ಕ್ರಿಕೆಟ್ ಮಾತ್ರವಲ್ಲದೇ ಇತರೆ ಕ್ರೀಡೆಗಳಲ್ಲೂ ಅನೇಕ ಸಾಧನೆಗಳನ್ನು ಮಾಡಿದ್ದಾರೆ ಅದು ಅಂತಿಂಥ ಸಾಧನೆಗಳಲ್ಲ. ಈತನ ಸಾಧನೆ ಬಗ್ಗೆ ಕೇಳಿದರೆ ಈತ ನಿಜವಾಗಿಯು ಕ್ರೀಡಾ ಲೋಕದ ಸೂಪರ್ ಮ್ಯಾನ್.

ಎ ಬಿ ಡಿ ಎಂಬ ಬಹುಮುಖ ಪ್ರತಿಭೆ

ಅಬ್ರಾಹಿಂ ಬೆಂಜಮಿನ್ ಡಿವಿಲಿಯರ್ಸ್

ಅಬ್ರಾಹಿಂ ಬೆಂಜಮಿನ್ ಡಿವಿಲಿಯರ್ಸ್ ಹುಟ್ಟಿದ್ದು ದಕ್ಷಿಣ ಆಫ್ರಿಕಾದ ಪ್ರೆಟೋರಿಯಾದಲ್ಲಿ. ಫೆಬ್ರವರಿ 17 , 1984 ರಂದು ಎಬಿಡಿ ಜನಿಸಿದರು. ಆಫ್ರಿಕನ್ ಹೈಸ್ಕೂಲ್ ಫಾರ್ ಬಾಯ್ಸ್ ಶಾಲೆಯಲ್ಲಿ ಶಿಕ್ಷಣವನ್ನು ಮುಗಿಸಿದ ಎಬಿಡಿ ಇಂದು ವಿಶ್ವದ ಅಗ್ರ ಕ್ರೀಡಾಪಟು.

ಮಿ.360 ಎಂದೇ ಖ್ಯಾತಿಯಾಗಿರುವ ಎ ಬಿ ಡಿ ಏಕದಿನ, ಟೆಸ್ಟ್ ಮತ್ತು ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ತನ್ನದೇ ಆದ ವಿಶಿಷ್ವ ಛಾಪು ಮೂಡಿಸಿದ್ದಾರೆ. ಕೇವಲ ಕ್ರಿಕೆಟ್ ಮಾತ್ರವಲ್ಲದೇ ಇತರೆ ಕ್ರೀಡೆಗಳಲ್ಲೂ ಎಬಿಡಿ ಸಾಧನೆ ಅತ್ಯದ್ಭುತ.

ಇತರೆ ಕ್ರೀಡೆಗಳಲ್ಲಿ ಎಬಿಡಿ

ಕ್ರಿಕೆಟ್ ನಂತೆಯೇ ಟೆನಿಸ್, ಗಾಲ್ಫ್, ರಗ್ಬಿ, ಹಾಕಿ ಕ್ರೀಡೆಗಳಲ್ಲೂ ಸಾಧನೆ ಮಾಡಿರುವ ಎಬಿಡಿ ಉತ್ತಮ ಈಜುಗಾರ ಕೂಡ ಹೌದು.

  • ಶಾಲಾ ದಿನಗಳಲ್ಲೇ ದಕ್ಷಿಣ ಆಫ್ರಿಕಾದ ಜೂನಿಯರ್ ಹಾಕಿ ತಂಡಕ್ಕೆ ಆಯ್ಕೆಯಾಗಿ ಅಂಡರ್ 16 ತಂಡದಲ್ಲಿ ಸ್ಥಾನ ಪಡೆದಿದ್ದರು.
  • ಎಬಿಡಿ ಉತ್ತಮ ಈಜುಗಾರ ಕೂಡ ಹೌದು, ಶಾಲಾದಿನಗಳಲ್ಲಿ ಈಜುಕೋಳದಲ್ಲಿ ದಾಖಲೆಬರೆದಿದ್ದಾರೆ.
  • ದಕ್ಷಿಣ ಆಫ್ರಿಕಾ ಬ್ಯಾಡ್ಮಿಂಟನ್ ತಂಡವನ್ನು ಎಬಿಡಿ ಪ್ರತಿನಿಧಿಸಿದ್ದರು.
  • ಡೆವಿಸ್ ಕಪ್ ಟೆನಿಸ್ ಟೀಂ ಪ್ರತಿನಿಧಿತ್ವ ಕೂಡ ಎಬಿಡಿ ಹೆಸರಲ್ಲಿದೆ.

ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡದ ಅಭಿಮಾನಿಯಾಗಿರುವ ಎಬಿಡಿ ಟೆನಿಸ್ ಎಬಿಡಿ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅಭಿಮಾನಿ.

ಸ್ವತಃ ಗಾಯಕರಾಗಿರುವ ಎಬಿಡಿ ಮ್ಯೂಸಿಕ್ ಬ್ಯಾಂಡ್ ಕೂಡ ನಡೆಸುತ್ತಾರೆ. "ಶೋ ದೆಮ್ ಹು ಯು ಆರ್ " ಅವರ ಗೀತೆಗಳಲ್ಲಿ ಪ್ರಸಿದ್ಧಿ ಪಡೆದ ಹಾಡಾಗಿದೆ.

ಇಷ್ಟೆಲ್ಲ ಸಾಧನೆ ಮಾಡಿರುವ ಎಬಿಡಿ ಹೆಸರಿನಲ್ಲಿ ಅನೇಕ ವಿಶ್ವದಾಖಲೆ ಹಾಗೂ ನ್ಯಾಷನಲ್ ಲೆವೆಲ್ ರೆಕಾರ್ಡ್ ಗಳಿವೆ. ಒಟ್ಟಿನಲ್ಲಿ ಎ ಬಿ ಡಿ ಕ್ರಿಕೆಟ್ ಅಂಗಳದ ಸೂಪರ್ ಸ್ಟಾರ್ ಎನ್ನುವುದರಲ್ಲಿ ಎರಡು ಮಾತಿಲ್ಲ.

English summary
AB de Villiers is a champion sportsman with an all- round interests during his growing years.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia