ಬೆಂಗಳೂರು ಕೇಂದ್ರದಲ್ಲಿ ನಡೆಯಲಿರುವ ಆಯುಷ್ ಇಲಾಖೆ ಹುದ್ದೆಗಳ ಸ್ಪರ್ಧಾತ್ಮಕ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಕರ್ನಾಟಕ ಲೋಕ ಸೇವಾ ಆಯೋಗದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು ಪರೀಕ್ಷಾರ್ಥಗಳು ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.
ಆಯುಷ್ ಇಲಾಖೆಯಲ್ಲಿನ ಗ್ರೂಪ್ ಎ, ಗ್ರೂ ಬಿ ಮತ್ತು ತಾಂತ್ರಿಕೇತರ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಕಡ್ಡಾಯ ಕನ್ನಡ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಆಯೋಗದ ವಿಳಾಸಕ್ಕೆಭೇಟಿ ನೀಡಿ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ದಿನಾಂಕ 25-05-2017 ರಿಂದ 31-05-2017 ರವರೆಗೂ ಬೆಂಗಳೂರು ಕೇಂದ್ರದಲ್ಲಿ ನಡೆಯಲಿದೆ.
ಪ್ರವೇಶ ಪತ್ರ ಡೌನ್ಲೋಡ್ ಮಾಡುವ ವಿಧಾನ
- ಆಯೋಗದ ವೆಬ್ಸೈಟ್ kpsc.kar.nic.in ಭೇಟಿ ನೀಡಿ
- 'Apply Online-Admission Ticket Download' ಬಟನ್ ಮೇಲೆ ಕ್ಲಿಕ್ ಮಾಡಿ
- 'CLICk here to opt for the medium of examination w.r.t. Notification NO.PSC 01/RTB-2/2016 DT:17-12-2016 for those who have applied for posts in the Ayush dept.' ಕ್ಲಿಕ್ ಮಾಡಿ
- ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕ ನಮೂದಿಸಿ
- ಪರದೆಯಲ್ಲಿ ಮೂಡುವ ಮಾಹಿತಿ ಖಚಿತಪಡಿಸಿಕೊಂಡು ಹಾಗೂ ನೀಡಿರವ ಸೂಚನೆಗಳನ್ನು ಓದಿರುತ್ತೇನೆಂದು ದೃಢೀಕರಿಸಿ ಡೌನ್ಲೋಡ್ ಮಾಡಿಕೊಳ್ಳಿ
ಸೂಚನೆ
ಪ್ರವೇಶ ಪತ್ರ ಡೌನ್ಲೋಡ್ ಮಾಡಲು ತಾಂತ್ರಿಕ ಸಮಸ್ಯೆ ಎದುರಾದಲ್ಲಿ ಅಂತಹ ಅಭ್ಯರ್ಥಿಗಳು ಅಪ್ಲಿಕೇಷನ್ ಐಡಿ ಹಾಗೂ ಶುಲ್ಕ ಪಾವತಿಸಿದ ವಿವರಗಳೊಂದಿಗೆ ತಾಂತ್ರಿಕ ಸಮಸ್ಯೆಗೆ ಸಹಾಯವಾಣಿ ಸಂಖ್ಯೆ 7815930294 / 7815930293 ಸಂಪರ್ಕಿಸಲು ಸೂಚಿಸಲಾಗಿದೆ.
For Quick Alerts
For Daily Alerts