ಐಐಇ ಮತ್ತು ವೃತ್ತಿಪರ ತಂತ್ರಜ್ಞಾನ ಸಂಸ್ಥೆಗಳ ಪ್ರಮಾಣ ಪತ್ರಕ್ಕೆ ಎಐಸಿಟಿಇ ಗ್ರೀನ್ ಸಿಗ್ನಲ್

Posted By:

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ರದ್ದು ಮಾಡಿದ್ದ ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ (ಇಂಡಿಯಾ) ಮತ್ತು ವೃತ್ತಿಪರ ತಂತ್ರಜ್ಞಾನ ಸಂಸ್ಥೆಗಳ ಇಂಜಿನಿಯರಿಂಗ್ ಮತ್ತು ಡಿಪ್ಲೋಮ ಪದವಿಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮಾನ್ಯತೆ ನೀಡುವುದಾಗಿ ತಿಳಿಸಿದೆ.

ಬಿಹೆಚ್ಇಲ್: 250 ಡಿಪ್ಲೊಮಾ ಪದವೀಧರರಿಗೆ ಅಪ್ರೆಂಟಿಸ್

ಐಐಇ ಪದವಿ ಪ್ರಮಾಣ ಪತ್ರಕ್ಕೆ ಎಐಸಿಟಿಇ ಗ್ರೀನ್ ಸಿಗ್ನಲ್

ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ (ಇಂಡಿಯಾ) ಮತ್ತು ಇನ್ನಿತರ ವೃತ್ತಿಪರ ತಂತ್ರಜ್ಞಾನ ಸಂಸ್ಥೆಗಳಿಂದ 2013ರ ಮೇ31ರೊಳಗೆ ಪಡೆದ ಎಂಜಿನಿಯರಿಂಗ್‌ ಮತ್ತು ಡಿಪ್ಲೋಮಾ ಮತ್ತು ತತ್ಸಮಾನ ಪದವಿಗಳನ್ನೂ ಮಾನ್ಯ ಮಾಡುವುದಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸ್ಪಷ್ಟನೆ ನೀಡಿದೆ.

ವೃತ್ತಿಪರ ತಂತ್ರಜ್ಞಾನ ಸಂಸ್ಥೆಗಳ ತಾಂತ್ರಿಕ ಕೋರ್ಸ್‌, ಪದವಿ ಮತ್ತು ತತ್ಸಮಾನ ಪದವಿ ಮಾನ್ಯತೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ರದ್ದು ಮಾಡಿತ್ತು.

ಸರ್ಕಾರಿ ಉದ್ಯೋಗ ಉನ್ನತ ಶಿಕ್ಷಣಕ್ಕೆ ವೃತ್ತಿಪರ ತಂತ್ರಜ್ಞಾನ ಸಂಸ್ಥೆಗಳ ಪ್ರಮಾಣ ಪತ್ರವನ್ನು ಪರಿಗಣಿಸುವುದಕ್ಕೆ ಸಚಿವಾಲಯವು ತಡೆಯೊಡ್ಡಿತ್ತು.

ಅಭ್ಯರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾನ್ಯತೆ ರದ್ದಾದ ದಿನದಿಂದ ಮುಂದಿನ ಐದು ವರ್ಷಗಳ ಅವಧಿಯಲ್ಲಿ (ಮೇ 31, 2013ರವರೆಗೆ ಮಾತ್ರ) ಪಡೆದ ಪದವಿಗಳನ್ನು ಸರ್ಕಾರಿ ಉದ್ಯೋಗ, ಶಿಕ್ಷಣ ಮತ್ತು ಇನ್ನಿತರ ಉದ್ದೇಶಗಳಿಗೂ ಪರಿಗಣಿಸುವುದಾಗಿ ಎಐಸಿಟಿಇ ಹೇಳಿದೆ.

ಆಗಸ್ಟ್ ತಿಂಗಳಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು 2013 ರವರೆಗೂ ಶಿಕ್ಷಣ ಪಡೆದ ಅಭ್ಯರ್ಥಿಗಳನ್ನು ಪರಿಗಣಿಸಲು ಒಪ್ಪಿಗೆ ನೀಡಲಾಗಿದೆ. ಈ ಅವಧಿಯ ನಂತರ ಪಡೆದ ತಾಂತ್ರಿಕ ಪದವಿಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

English summary
The All India Technical Education Board (AICTE) has clarified that the Institute of Engineers (India) and other professional technology institutes will be certified engineering and diploma and equivalent degrees by May 31, 2013.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia