800 ಇಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ಎಐಸಿಟಿಇ ನಿರ್ಧಾರ

Posted By:

ಈ ವರ್ಷದ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಭಾರೀ ಇಳಿಮುಖ ಕಂಡುಬಂದಿದ್ದನ್ನು ಕೆಲದಿನಗಳಷ್ಟೇ ತಾಂತ್ರಿಕ ಶಿಕ್ಷಣ ಮಂಡಳಿ ಮಾಹಿತಿ ನೀಡಿತ್ತು. ಈಗ ದೇಶದಲ್ಲಿ 800 ಇಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚುವುದಾಗಿ ತಿಳಿಸಿದೆ.

ಮೂಲಸೌಕರ್ಯ ಕೊರತೆ ಹಾಗೂ ಪ್ರವೇಶಾತಿ ಅಭಾವ ಎದುರಿಸುತ್ತಿರುವ ದೇಶದ ಸುಮಾರು 800 ಇಂಜಿನಿಯರಿಂಗ್​ಕಾಲೇಜುಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಸ್ಥಗಿತಗೊಳ್ಳಲಿವೆ. ತಾಂತ್ರಿಕ ಶಿಕ್ಷಣದಲ್ಲಿ ಗುಣಮಟ್ಟದ ಶಿಕ್ಷಣದ ಉದ್ದೇಶದಿಂದ ಎಐಸಿಟಿಇ ಈ ನಿರ್ಧಾರಕ್ಕೆ ಬಂದಿದೆ.

ರಾಜ್ಯದಲ್ಲಿ ಕುಸಿದ ಇಂಜಿನಿಯರಿಂಗ್ ದಾಖಲಾತಿ

ಭಾರತದಲ್ಲಿ 10,361 ಎಂಜಿನಿಯರಿಂಗ್‌ ಕಾಲೇಜು ಇದೆ. ಮಹಾಷ್ಟ್ರದಲ್ಲಿ 1500, ತಮಿಳುನಾಡಿನಲ್ಲಿ 1300, ಉತ್ತರ ಪ್ರದೇಶದಲ್ಲಿ 1165, ಆಂಧ್ರ ಪ್ರದೇಶದಲ್ಲಿ 800 ಹಾಗೂ ಕರ್ನಾಟಕದಲ್ಲಿ 600 ಎಂಜಿನಿಯರಿಂಗ್‌ ಕಾಲೇಜು ಸೇರಿದಂತೆ ಎಲ್ಲಾ ರಾಜ್ಯದಲ್ಲೂ ಎಂಜಿನಿಯರಿಂಗ್‌ ಕಾಲೇಜು ಇದೆ.

ಮುಚ್ಚಲಿವೆ 800 ಇಂಜಿನಿಯರಿಂಗ್ ಕಾಲೇಜುಗಳು

ಎಐಸಿಟಿಇಯ ವೆಬ್​ಸೈಟ್ ಪ್ರಕಾರ, 2017-18ರ ಶೈಕ್ಷಣಿಕ ವರ್ಷದಲ್ಲಿ 450 ಕಾಲೇಜುಗಳು ಮುಚ್ಚಲಿವೆ. ಕರ್ನಾಟಕದ 20 ಕಾಲೇಜುಗಳೂ ಅದರಲ್ಲಿ ಸೇರಿವೆ. ತೆಲಂಗಾಣ, ಉತ್ತರಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಹೆಚ್ಚು ಕಾಲೇಜುಗಳು ಮುಚ್ಚಲಿವೆ.

ಎಐಸಿಟಿಇಯ ಕಠಿಣ ನಿಯಮಗಳಿಂದ ಪ್ರತಿವರ್ಷ ಅಂದಾಜು 150 ಇಂಜಿನಿಯರಿಂಗ್​ಕಾಲೇಜುಗಳು ಮುಚ್ಚುತ್ತಿವೆ. ಈ ಭಾರಿ 37 ಲಕ್ಷ್ ಸೀಟುಗಳಲ್ಲಿ 27 ಲಕ್ಷ ಸೀಟುಗಳು ಖಾಲಿ ಇವೆ.

ಮಂಡಳಿಯ ನಿಯಮದ ಪ್ರಕಾರ ಮೂಲಸೌಕರ್ಯ ಕೊರತೆ ಹಾಗೂ ಸತತ 5 ವರ್ಷದಿಂದ ಶೇ.33ಕ್ಕಿಂತ ಕಡಿಮೆ ಪ್ರವೇಶಾತಿ ಇರುವ ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ ಎಂದು ಎಐಸಿಟಿಇಯ ಅಧ್ಯಕ್ಷ ಅನಿಲ್ ದತ್ತಾತ್ರೇಯ ಸಹಸ್ರಬುದ್ದೆ ಹೇಳಿದ್ದಾರೆ.

ಮುಚ್ಚುವ ಹಂತದಲ್ಲಿರುವ ಎಂಜಿನಿಯರಿಂಗ್‌ ಕಾಲೇಜುಗಳು ಪ್ರಸಕ್ತ ಸಾಲಿಗೆ ನೂತನ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಯನ್ನು ನಡೆಸುವುದಿಲ್ಲ್ಲ. ಹಿಂದಿನ ಸಾಲಿನಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ವ್ಯಾಸಂಗವನ್ನು ಪೂರ್ಣಗೊಳಿಸಲು ಕಾಲೇಜುಗಳು ಅವಕಾಶ ಕಲ್ಪಿಸಲಾಗುತ್ತದೆ. ಮುಚ್ಚುವ ಕಾಲೇಜುಗಳಲ್ಲಿ ಇರುವ ವಿದ್ಯಾರ್ಥಿಗಳು ವ್ಯಾಸಂಗ ಮುಂದುವರಿಸಬಹುದು. ಮೊದಲನೇ ವರ್ಷಕ್ಕೆ ಪ್ರವೇಶಾತಿಗೆ ಅವಕಾಶ ನೀಡದೆ, ಕಾಲೇಜುಗಳನ್ನು ಮುಚ್ಚಲಾಗುತ್ತದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್‌(ಎಐಸಿಟಿಇ) ನೀಡಿರುವ ಅಂಕಿ ಸಂಖ್ಯೆಗಳ ಪ್ರಕಾರ ಕಳೆದ ವರ್ಷ ಮಹಾರಾಷ್ಟ್ರದ ಪುಣೆ, ನಾಗಪುರ, ಔರಂಗಾಬಾದ್‌, ಜಲಗಾವ್‌ ಮತ್ತು ಕೊಲ್ಲಾಪುರ ಹಾಗೂ ಇತರೆಡೆಗಳ 23 ಕಾಲೇಜುಗಳು 2016-2017ನೇ ಸಾಲಿನಲ್ಲಿ ಬಾಗಿಲು ಮುಚ್ಚಿವೆ.

ಅಸ್ತಿತ್ವ ಉಳಿಸಿಕೊಳ್ಳಲಾಗದ ಎಂಜಿನಿಯರಿಂಗ್ ಕಾಲೇಜುಗಳು ಮುಚ್ಚುವ ಅಥವಾ ಪಾಲಿಟೆಕ್ನಿಕ್‌, ವಿಜ್ಞಾನ ಮತ್ತು ಕಲಾ ಕಾಲೇಜುಗಳಾಗಿ ಮಾರ್ಪಾಡಾಗುತ್ತಿವೆ.

ರಾಜ್ಯದಲ್ಲೂ ಇಂಜಿನಿಯರಿಂಗ್ ಶಿಕ್ಷಣ ಬೇಡಿಕೆ ಕಳೆದುಕೊಂಡಿದೆ. ಈ ಬಾರಿ ಕರ್ನಾಟಕದಲ್ಲಿ 26 ಸರ್ಕಾರಿ ಶಿಕ್ಷಣ ಸಂಸ್ಥೆಗಳಿಂದ 12385 ಇಂಜಿನಿಯರಿಂಗ್ ಸೀಟುಗಳಿದ್ದವು. ಅವುಗಳಲ್ಲಿ ಕೇವಲ 9462 ಸೀಟುಗಳ ಮಾತ್ರ ಭರ್ತಿಯಾಗಿವೆ. ಇನ್ನು 171 ಖಾಸಗಿ ಶಿಕ್ಷಣ ಸಂಸ್ಥೆಗಳ 101076 ಸೀಟುಗಳ ಪೈಕಿ ಕೇವಲ 71580 ಸೀಟುಗಳ ಭರ್ತಿಯಾಗಿವೆ.

ವಿದ್ಯಾರ್ಥಿಗಳು ವಿಜ್ಞಾನ ಪದವಿ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಬೇಸಿಕ್ ಸೈನ್ಸ್ ಕಲಿತು ಉನ್ನತ ಶಿಕ್ಷಣ ಮತ್ತು ಸಂಶೋಧನೆ ಕಡೆಗೆ ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ ಇಂಜಿನಿಯರಿಂಗ್ ಬೇಡಿಕೆ ಕಡಿಮೆಯಾಗಿದೆ

English summary
The All India Council for Technical Education (AICTE) wants to close down about 800 engineering colleges across India as there are no takers for their seats, and admissions are plunging in these institutions every year.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia