ಎಐಸಿಟಿಇ: ಸಂಶೋಧನಾ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೆ ಹೊಸ ನಿಯಮ

Posted By:

ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸಂಶೋಧನೆಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ರೂಪಿಸಿದೆ.

ತುಮಕೂರಿನಲ್ಲಿ ಜನವರಿ 6 ಮತ್ತು 7 ರಂದು ಬೃಹತ್ ಉದ್ಯೋಗ ಮೇಳ

ಸಂಶೋಧನಾ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೆ ಸಂಬಂಧಿಸಿದಂತೆ ಮಂಡಳಿಯು ಕೆಲವು ಮಾರ್ಪಾಡುಗಳನ್ನು ಮಾಡಿದೆ. ನೂತನ ನಿಯಮದಂತೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಬೋಧಕರು ಮಾರ್ಗದರ್ಶನ ಮಾಡಬಹುದಾದ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಹಾಕಲಾಗಿದೆ.

ಎಐಸಿಟಿಇ ಹೊಸ ನಿಯಮ

ಪರಿಷ್ಕೃತ ನಿಯಮಗಳ ಪ್ರಕಾರ, ಏಕಕಾಲಕ್ಕೆ ಗರಿಷ್ಠ ನಾಲ್ವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಮಾತ್ರ ಪ್ರಾಧ್ಯಾಪಕರಿಗೆ ಅವಕಾಶ ಇದೆ. ಸಹಾಯಕ ಪ್ರಾಧ್ಯಾಪಕರು ಇಬ್ಬರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬಹುದಾಗಿದೆ.

ಈ ನಿಯಮವು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದ್ದು, ಎಐಸಿಟಿಇಯು ಇದೇ ಮೊದಲ ಬಾರಿಗೆ ಇಂತಹ ಮಿತಿ ನಿಗದಿ ಪಡಿಸಿದೆ.

ತಾಂತ್ರಿಕ ಶಿಕ್ಷಣದ ಸಂಶೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಂತಹ ತೀರ್ಮಾನಕ್ಕೆ ಮಂಡಳಿಯು ಮುಂದಾಗಿದ್ದು, ಇದರಿಂದಾಗಿ ಮಾರ್ಗದರ್ಶಕರು ವಿದ್ಯಾರ್ಥಿಗಳೊಡನೆ ಹೆಚ್ಚಿನ ಸಮಯ ಮೀಸಲಿಡಬಹುದು, ಜೊತೆಗೆ ಸಂಶೋಧನಾ ಕ್ಷೇತ್ರ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದು ಎಐಸಿಟಿಇ ತಿಳಿಸಿದೆ.

ಎಐಸಿಟಿಇ

ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಇದು ಮಾನವ ಸಂಪನ್ಮೂಲ ಸಂಪನ್ಮೂಲ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ತಾಂತ್ರಿಕ ಶಿಕ್ಷಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಮಟ್ಟದ ಕೌನ್ಸಿಲ್.

ಭಾರತದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಶಿಕ್ಷಣ ವ್ಯವಸ್ಥೆಗಳ ಸರಿಯಾದ ಯೋಜನೆ ಮತ್ತು ಸಂಘಟಿತ ಅಭಿವೃದ್ಧಿಗೆ AICTE ಕಾರಣವಾಗಿದೆ. AICTE ಭಾರತೀಯ ಸಂಸ್ಥೆಗಳಲ್ಲಿ ಅದರ ಚಾರ್ಟರ್ ಪ್ರಕಾರ ನಿರ್ದಿಷ್ಟ ವರ್ಗಗಳ ಅಡಿಯಲ್ಲಿ ಸ್ನಾತಕೋತ್ತರ ಮತ್ತು ಪದವಿ ಕಾರ್ಯಕ್ರಮಗಳನ್ನು ಮಾನ್ಯಮಾಡುತ್ತದೆ.

English summary
According to AICTE Revised Terms, Professors are allowed only to guide maximum four students at a time. Assistant Professor can guide two students.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia