AICTE Scholarship 2021 : ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾದ ವಿದ್ಯಾರ್ಥಿಗಳಿಂದ ಎಐಸಿಟಿಇ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾದ ವಿದ್ಯಾರ್ಥಿಗಳು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) ನೀಡುವ ವಿವಿಧ ವಿದ್ಯಾರ್ಥಿವೇತನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಯಾವೆಲ್ಲಾ ವಿದ್ಯಾರ್ಥಿವೇತನಗಳಿವೆ ?:

ತಾಂತ್ರಿಕ ಪದವಿ ಮತ್ತು ಡಿಪ್ಲೊಮಾದಲ್ಲಿ ಅಧ್ಯಯನ ಮಾಡುತ್ತಿರುವ ಬಾಲಕಿಯರಿಗೆ AICTE ಪ್ರಗತಿ ವಿದ್ಯಾರ್ಥಿವೇತ, ತಾಂತ್ರಿಕ ಪದವಿ ಮತ್ತು ಡಿಪ್ಲೊಮಾದಲ್ಲಿ ಅಧ್ಯಯನ ಮಾಡುತ್ತಿರುವ ವಿಶೇಷ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳಿಗೆ AICTE ಸಕ್ಷಮ್ ವಿದ್ಯಾರ್ಥಿವೇತನ, ತಾಂತ್ರಿಕ ಪದವಿ ಮತ್ತು ಡಿಪ್ಲೊಮಾದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ AICTE SWATH ವಿದ್ಯಾರ್ಥಿವೇತನ.

ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್ (NSP) scholarships.gov.in. ಗೆ ಭೇಟಿ ನೀಡಿ ನವೆಂಬರ್ 30 ರವರೆಗೆ ಅರ್ಜಿಯನ್ನು ಹಾಕಬಹುದು.

ಎಐಸಿಟಿಇ ಪಿಜಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ aicte-india.org ನಲ್ಲಿ ಕೂಡ ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಮಾನದಂಡಗಳು ಮತ್ತು ಇತರ ವಿವರಗಳನ್ನು ಪರಿಶೀಲಿಸಿಕೊಳ್ಳಿ.

ಎಐಸಿಟಿಇ ಪಿಜಿ ವಿದ್ಯಾರ್ಥಿವೇತನ ಯೋಜನೆಯು AICTE ಅನುಮೋದಿತ ಕಾಲೇಜುಗಳಲ್ಲಿ ಪೂರ್ಣಪ್ರಮಾಣದ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದ ಮತ್ತು GATE, GPAT ಮತ್ತು CEED ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ಡಿಸೆಂಬರ್ 31, 2021 ಕೊನೆಯ ದಿನವಾಗಿದೆ. ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ 24 ತಿಂಗಳವರೆಗೆ ಅಥವಾ ಕೋರ್ಸ್‌ನ ಸಂಪೂರ್ಣ ಅವಧಿಯಲ್ಲಿ ತಿಂಗಳಿಗೆ 2,400 ರೂ/-ರೂ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

AICTE ಪ್ರಗತಿ ವಿದ್ಯಾರ್ಥಿವೇತನ:

ಮೊತ್ತ: ಅಧ್ಯಯನದ ಅವಧಿಯಲ್ಲಿ ವಾರ್ಷಿಕವಾಗಿ 50,000/-ರೂ

ವೆಬ್‌ಸೈಟ್: Scholarships.gov.in

ಅರ್ಹತೆ : ತಾಂತ್ರಿಕ ಪದವಿ ಕೋರ್ಸ್‌ಗೆ ಅರ್ಹತೆ
ಡಿಪ್ಲೊಮಾ ಕೋರ್ಸ್‌ಗೆ ಅರ್ಹತೆ

AICTE ಸಕ್ಷಮ್ ವಿದ್ಯಾರ್ಥಿವೇತನ:

ಮೊತ್ತ: ಅಧ್ಯಯನದ ಅವಧಿಯಲ್ಲಿ ವಾರ್ಷಿಕವಾಗಿ 50,000/-ರೂ

ವೆಬ್‌ಸೈಟ್: Scholarships.gov.in

ಅರ್ಹತೆ : ತಾಂತ್ರಿಕ ಪದವಿ ಕೋರ್ಸ್‌ಗೆ ಅರ್ಹತೆ

ಅರ್ಹತೆ : ಡಿಪ್ಲೊಮಾ ಕೋರ್ಸ್‌ಗೆ ಅರ್ಹತೆ

AICTE ಸ್ವಥ್ ವಿದ್ಯಾರ್ಥಿವೇತನ:

ಮೊತ್ತ: ಅಧ್ಯಯನದ ಅವಧಿಗೆ ವಾರ್ಷಿಕವಾಗಿ 50,000/-ರೂ

ವೆಬ್‌ಸೈಟ್: Scholarships.gov.in

ಅರ್ಹತೆ : ತಾಂತ್ರಿಕ ಪದವಿ ಕೋರ್ಸ್‌ಗೆ ಅರ್ಹತೆ
ಡಿಪ್ಲೊಮಾ ಕೋರ್ಸ್‌ಗೆ ಅರ್ಹತೆ

For Quick Alerts
ALLOW NOTIFICATIONS  
For Daily Alerts

English summary
Students who are enrolled in technical educational institutions can apply for different scholarships offered by AICTE.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X