ಔಟ್‌ಡೇಟೆಡ್‌ ಸಿಲಬಸ್‌: ಭಾರತದ 800 ಇಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ!

ಆ್ಯಸ್ಪೈರಿಂಗ್‌ ಮೈಂಡ್ಸ್‌ ನಡೆಸಿದ ಸರ್ವೆಯಲ್ಲಿ ಭಾರತದ ಸುಮಾರು 800 ಕಾಲೇಜುಗಳ ಶೇ.95ರಷ್ಟು ಎಂಜಿನಿಯರ್‌ಗಳಿಗೆ ಕೋಡಿಂಗ್‌ ಮಾಡಲೂ ಬರುವುದಿಲ್ಲ ಎಂಬ ಸುದ್ದಿ ಪ್ರಕಟವಾಗಿದೆ.

ಭಾರತದ ಇಂಜಿನಿಯರಿಂಗ್ ಶಿಕ್ಷಣ ಕಳಪೆಯಾಗಿದ್ದು, ಇಲ್ಲಿನ ಇಂಜಿನಿಯರ್ಗಳು ಉದ್ಯೋಗಕ್ಕೆ ಅರ್ಹರಲ್ಲ ಎಂಬ ಆತಂಕಕಾರಿ ವರದಿ ಬಂದಿದೆ. ಇದೇ ಕಾರಣಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯು ದೇಶದ 800 ಎಂಜಿನಿಯರಿಂಗ್‌ ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಿದೆ.

ಉದ್ಯೋಗಾರ್ಹತೆ ಮೌಲ್ಯಮಾಪನ ಸಂಸ್ಥೆ ಆ್ಯಸ್ಪೈರಿಂಗ್‌ ಮೈಂಡ್ಸ್‌ ನಡೆಸಿದ ಸರ್ವೆಯಲ್ಲಿ ಭಾರತದ ಸುಮಾರು 800 ಕಾಲೇಜುಗಳ ಶೇ.95ರಷ್ಟು ಎಂಜಿನಿಯರ್‌ಗಳಿಗೆ ಕೋಡಿಂಗ್‌ ಮಾಡಲೂ ಬರುವುದಿಲ್ಲ ಎಂಬ ಸುದ್ದಿ ಪ್ರಕಟವಾಗಿದೆ.

ಎನ್ ಸಿ ಇ ಆರ್ ಟಿ ಸಮೀಕ್ಷೆ: ಕಲಿಕಾ ಮಟ್ಟದಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಬೆಸ್ಟ್ಎನ್ ಸಿ ಇ ಆರ್ ಟಿ ಸಮೀಕ್ಷೆ: ಕಲಿಕಾ ಮಟ್ಟದಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಬೆಸ್ಟ್

ಶೇ.95 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅನರ್ಹರು!

ಭಾರತದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಬಹುತೇಕ ಕಾಲೇಜುಗಳಲ್ಲಿ ಔಟ್‌ಡೇಟೆಡ್‌ ಸಿಲಬಸ್‌ ಓದುತ್ತಾರೆ ಹಾಗೂ ಹಳೆಯ ಪಠ್ಯಬೋಧನೆ ಹಾಗೂ ಶಿಕ್ಷಣದ ಗುಣಮಟ್ಟ ಕೊರತೆಯಿಂದಾಗಿ ಶೇ.95 ಎಂಜಿನಿಯರ್‌ಗಳಿಗೆ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲು ಗೊತ್ತಿಲ್ಲ. ತಮ್ಮ ಆಯ್ಕೆಯ ವಿಷಯದಲ್ಲಿ ಕೂಡಾ ಆಳವಾದ ಜ್ಞಾನ ಹೊಂದಿರುವುದಿಲ್ಲ ಎಂದು ವರದಿ ತಿಳಿಸಿದೆ.

ದೇಶದ ಸುಮಾರು 500 ಕಾಲೇಜುಗಳ 36,800 ವಿದ್ಯಾರ್ಥಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಶೇ.2.21ರಷ್ಟು ಪದವೀಧರರು ಮಾತ್ರ ಸಂಪೂರ್ಣ ಸರಿಯಾದ ಕೋಡ್‌ ಬರೆಯಬಲ್ಲರು. ಶೇ.31ರಷ್ಟು ಪದವೀಧರರು ಸಣ್ಣಪುಟ್ಟ ತಪ್ಪುಗಳೊಂದಿಗೆ ಕೋಡ್‌ ಬರೆಯಬಲ್ಲರು. ಆದರೆ ಶೇ.60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋಡ್‌ ಬರೆಯಲು ಅಸಮರ್ಥರಾಗಿದ್ದಾರೆ.

ಗ್ರೂಪ್ ಸ್ಟಡಿಗೆ ಸಹಕಾರಿಗುವ ಸೋಷಿಯಲ್ ಮೀಡಿಯಾಗ್ರೂಪ್ ಸ್ಟಡಿಗೆ ಸಹಕಾರಿಗುವ ಸೋಷಿಯಲ್ ಮೀಡಿಯಾ

ಕೆಲ ವರ್ಷಗಳ ಹಿಂದೆ ಮೆಕ್‌ಕಿನ್ಸಿ ವರದಿಯು ಕೇವಲ ಕಾಲುಭಾಗದಷ್ಟು ಭಾರತೀಯ ಎಂಜಿನಿಯರ್‌ಗಳು ಉದ್ಯೋಗಕ್ಕೆ ಅರ್ಹರು ಎಂದಿತ್ತು. ಅದಾದ ಬಳಿಕ ಬಂದ ಕೆಲ ಅಧ್ಯಯನ ವರದಿಗಳು, ಈ ಸಂಖ್ಯೆಯನ್ನು ಶೇ.20ಕ್ಕಿಂತ ಕಡಿಮೆಗೆ ಇಳಿಸಿದ್ದವು.

ಐಐಟಿ ಸೇರಿದಂತೆ ಭಾರತದ ಹೆಸರಾಂತ ಎಂಜಿನಿಯಂರಿಂಗ್‌ ಕಾಲೇಜುಗಳ ಪದವೀಧರರಿಗೆ ಡಿಮ್ಯಾಂಡ್‌ಗೆ ಬರವಿಲ್ಲವಾದರೂ, ಪ್ರತಿವರ್ಷ ಲಕ್ಷಾಂತರ ಎಂಜಿನಿಯರ್‌ಗಳನ್ನು ಸೃಷ್ಟಿಸುವ ಸಾವಿರಾರು ಸ್ಥಳೀಯ ಹಾಗೂ ಸಣ್ಣ ಕಾಲೇಜುಗಳ ಫಲಾನುಭವಿಗಳು ಮಾತ್ರ ಜ್ಞಾನ ಹಾಗೂ ಕೌಶಲ್ಯ ಕೊರತೆಯಿಂದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ.

ಪ್ರತಿವರ್ಷ ಸುಮಾರು 150 ಕಾಲೇಜುಗಳು ಎಐಸಿಟಿಯ ನಿಯಮಗಳನ್ನು ಅನುಸರಿಸಲು ವಿಫಲವಾಗಿ ಮುಚ್ಚುತ್ತವೆ. ಎಐಸಿಟಿಇ ನಿಯಮದಂತೆ ಮೂಲಸೌಕರ್ಯಗಳ ಕೊರತೆಯಿರುವ ಹಾಗೂ ನಿರಂತರ 5 ವರ್ಷ ಶೇ.30ಕ್ಕಿಂತ ಕಡಿಮೆ ಸೀಟುಗಳನ್ನು ತುಂಬುವ ಕಾಲೇಜುಗಳನ್ನು ಮುಚ್ಚಬೇಕಿದೆ.

For Quick Alerts
ALLOW NOTIFICATIONS  
For Daily Alerts

English summary
All India Council for Technical Education (AICTE) has decided to shut down about 800 engineering colleges from the next academic year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X