AIR Programme For Competitive Exams : ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹೊಸ ಕಾರ್ಯಕ್ರಮ ಲಾಂಚ್ ಮಾಡಿದ ಎಐಆರ್

ಅಖಿಲ ಭಾರತ ಬಾನುಲಿ ಕೇಂದ್ರ (AIR) ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಸಾಪ್ತಾಹಿಕ ಸಂವಾದಾತ್ಮಕ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಪ್ರತಿ ಶನಿವಾರದಂದು ಈ ಕಾರ್ಯಕ್ರಮವು ಪ್ರಸಾರವಾಗಲಿದ್ದು, ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ಪರೀಕ್ಷೆಗಳಿಗೆ ತಯಾರಿ ನಡೆಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ  ತಯಾರಿಗಾಗಿ ಎಐಆರ್ ಹೊಸ ಸಂವಾದಾತ್ಮಕ ಕಾರ್ಯಕ್ರಮ ಆರಂಭ

ಅಖಿಲ ಭಾರತ ಬಾನುಲಿ ಕೇಂದ್ರ ಪ್ರಸಾರ ಮಾಡುವ 30 ನಿಮಿಷಗಳ ಈ ಕಾರ್ಯಕ್ರಮವನ್ನು ಹಿಂದಿಯಲ್ಲಿ 'ಅಭ್ಯಾಸ್' ಎಂದು ಹೆಸರಿಸಲಾಗಿದೆ. ಇಂಗ್ಲಿಷ್‌ನಲ್ಲಿ ಇದರರ್ಥ 'ಅಭ್ಯಾಸ' ಮತ್ತು ಈ ಕಾರ್ಯಕ್ರಮವನ್ನು ಪ್ರತಿ ವಾರ 100.1 FM ಗೋಲ್ಡ್ ನಲ್ಲಿ ರಾತ್ರಿ 9:30 ರಿಂದ 10:00 ರವರೆಗೆ ಪ್ರಸಾರ ಮಾಡಲಾಗುತ್ತಿದೆ. ಕಾರ್ಯಕ್ರಮದ ಮೊದಲ ಸಂಚಿಕೆಯು ಏಪ್ರಿಲ್ 2 ರಂದು ಪ್ರಸಾರಗೊಂಡಿದೆ. ಮೊದಲ ಎಪಿಸೋಡ್ ನಲ್ಲಿ ಆಧುನಿಕ ಇತಿಹಾಸದ ಬಗ್ಗೆ ಪ್ರಸಾರ ಮಾಡಲಾಗಿದೆ ಎಂದು AIR ನ ಸುದ್ದಿ ಸೇವೆಗಳ ವಿಭಾಗದವರು ಮಾಹಿತಿ ನೀಡಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳ  ತಯಾರಿಗಾಗಿ ಎಐಆರ್ ಹೊಸ ಸಂವಾದಾತ್ಮಕ ಕಾರ್ಯಕ್ರಮ ಆರಂಭ

ಕಾರ್ಯಕ್ರಮ ವೀಕ್ಷಿಸುವುದು ಹೇಗೆ ?:

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವಿವಿಧ ಪರೀಕ್ಷೆಗಳ ತಯಾರಿಗಾಗಿ AIR ನ ಸಾಪ್ತಾಹಿಕ ಸಂವಾದಾತ್ಮಕ ಕಾರ್ಯಕ್ರಮವನ್ನು ವೀಕ್ಷಿಸಲು ಅಭ್ಯರ್ಥಿಗಳು AIR ನ Twitter ಹ್ಯಾಂಡಲ್ '@airnewsalerts' ಅಥವಾ YouTube ಚಾನೆಲ್ 'airnewsofficial' ಅಥವಾ ನ್ಯೂಸನ್ ಏರ್ ಅಪ್ಲಿಕೇಶನ್‌ಗೆ ಭೇಟಿ ನೀಡಬಹುದು.

ಅಖಿಲ ಭಾರತ ಬಾನುಲಿ ಕೇಂದ್ರ ಹೇಳಿಕೆ :

ಅಖಿಲ ಭಾರತ ಬಾನುಲಿ ಕೇಂದ್ರ ತನ್ನ ಅಧಿಕೃತ ಹೇಳಿಕೆಯಲ್ಲಿ,"ಸಾಪ್ತಾಹಿಕ ಸಂವಾದಾತ್ಮಕ ಕಾರ್ಯಕ್ರಮವು ಎಕ್ಸ್‌ಪ್ಲೇನರ್‌ಗಳು, ಫ್ಯಾಕ್ಟ್‌ಫೈಲ್, ಪರೀಕ್ಷಾ ಕ್ಯಾಲೆಂಡರ್ ಮತ್ತು ಸಂಗೀತ ವಿರಾಮದೊಂದಿಗೆ ವಾರದ ಪ್ರಶ್ನೆಯಂತಹ ವಿಭಾಗಗಳನ್ನು ಒಳಗೊಂಡಿರುತ್ತದೆ.
ಪ್ರಮುಖ ಶಿಕ್ಷಣತಜ್ಞರು ಕೇಳುಗರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾರೆ. ಹಾಗೂ ಏಪ್ರಿಲ್ 9 ರಂದು ಮುಂದಿನ ಸಂಚಿಕೆ ಪ್ರಸಾರವಾಗಲಿದ್ದು, ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು WhatsApp ಸಂಖ್ಯೆ 928 909 4044 ಗೆ ಕಳುಹಿಸಬಹುದು ಅಥವಾ ಏಪ್ರಿಲ್ 5 ರವರೆಗೆ [email protected] ಗೆ ಮೇಲ್ ಮಾಡಬಹುದು" ಎಂದು ತಿಳಿಸಿದೆ.

For Quick Alerts
ALLOW NOTIFICATIONS  
For Daily Alerts

English summary
All india radio launches weekly interactive programme for competitive exams. Aspirants who are preparing for exams they can stay tuned.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X