ಬಿಇಡಿ ಗೂ ಬರಲಿದೆ ಏಕರೂಪ ಪ್ರವೇಶ ಪರೀಕ್ಷೆ

Posted By:

ಬಿಇಡಿ ಕೋರ್ಸಿಗೂ ಇನ್ನುಮುಂದೆ ದೇಶಾದ್ಯಂತ ಒಂದೇ ಪ್ರವೇಶ ಪರೀಕ್ಷೆ ಶೀಘ್ರದಲ್ಲೇ ಜಾರಿಯಾಗಲಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳಿಗೆ ದೇಶಾದ್ಯಂತ ಏಕರೂಪ ಪರೀಕ್ಷೆ ನೀಟ್ ರೀತಿಯೇ ಬಿಇಡಿ ಮತ್ತು ಬಿಇ ಪರೀಕ್ಷೆಗಳಿಗೂ ಒಂದೇ ಪರೀಕ್ಷೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಒಂದು ವೇಳೆ ಏಕರೂಪ ಪರೀಕ್ಷೆ ಜಾರಿಯಾದರೆ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಸ್ಪರ್ದೆಯನ್ನು ಎದುರಿಸಬೇಕಾಗುತ್ತದೆ. ಇದರಿಂದ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬಹುದು ಎನ್ನುವುದು ತಜ್ಞರ ಅಭಿಪ್ರಾಯ.

ಶಾಲಾ ಶಿಕ್ಷಕರಲ್ಲಿ ಗುಣಮಟ್ಟ ತರಲು ಎನ್ ಸಿ ಟಿ ಇ ಸಾಕಷ್ಟು ಹೊಸ ಯೋಜನೆಗಳನ್ನು ರೂಪಿಸಿದ್ದು ಆಲ್ ಇಂಡಿಯಾ ಎಂಟ್ರೆನ್ಸ್ ಎಕ್ಸಾಮ್ ಫಾರ್ ಬಿಇಡಿ ಕಾರ್ಯಕ್ರಮವೂ ಶೀಘ್ರದಲ್ಲೆ ಬರಲಿದೆ ಎಂದು ಕೇಂದ್ರ ಸಚಿವ ಉಪೇಂದ್ರ ಕುಶ್ವಹ ತಿಳಿಸಿದ್ದಾರೆ.

ಏಕರೂಪ ಪ್ರವೇಶ ಪರೀಕ್ಷೆ

ಏಕರೂಪ ಪರೀಕ್ಷೆಯಿಂದಾಗಿ ಬಿಇಡಿ ಕಾಲೇಜುಗಳು ಗುಣಮಟ್ಟ ಕೂಡ ಹೆಚ್ಚುತ್ತದೆ. ಸದ್ಯ ದೇಶದಲ್ಲಿ ಇರುವ ಬಿಇಡಿ ಕಾಲೇಜುಗಳು ತಮ್ಮದೇ ಆದ ನಿಯಮಗಳನ್ನು ಪಾಲಿಸುತ್ತಿವೆ. ಕೆಲವೊಂದು ಕಡೆ ಪರೀಕ್ಷೆ ಮತ್ತು ಫಲಿತಾಂಶಗಳನ್ನು ಪ್ರಕಟಿಸುವುದು ವಿಳಂಭವಾಗುತ್ತಿದೆ. ಆದರೆ ಏಕರೂಪ ಪರೀಕ್ಷೆ ಜಾರಿಯಾದಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಶಿಕ್ಷಕರ ಕುರಿತಾಗಿ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರ ಮಾಹಿತಿ ಪ್ರಕಾರ ದೇಶದಲ್ಲಿ ತರಬೇತಿ ಪಡೆದ ಶಿಕ್ಷಕರ ಕೊರತೆ ಹೆಚ್ಚಿದೆ. ಏಕರೂಪ ಪರೀಕ್ಷೆ ಕೈಗೊಂಡರೆ ಗುಣಮಟ್ಟದ ಶಿಕ್ಷಕರ ಸಂಖ್ಯೆ ಏರಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಡೀನ್ ಡಾ.ಸುಂದರ್ ರಾಜ್ ತಿಳಿಸಿದರು.

ಬಿಇಡಿ ಸೇರುವವರ ಸಂಖ್ಯೆ ಇಳಿಮುಖ

ಒಂದು ವರ್ಷದ ಅವಧಿಯಿದ್ದ ಬಿಇಡಿ ಕೋರ್ಸ್ ಎರಡು ವರ್ಷವಾದ ನಂತರ ಬಿಇಡಿ ಕೋರ್ಸ್ ಗೆ ಸೇರುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇದರಿಂದ ಶಿಕ್ಷಕರ ಸಂಖ್ಯೆ ಕೂಡ ಕಡಿಮೆಯಾಗಿದೆ. ಇನ್ನು ಏಕರೂಪ ಪರೀಕ್ಷೆ ಮಾಡಿದರೆ ಮತ್ತಷ್ಟು ಕಡಿಮೆಯಾಗಬಹುದು ಎನ್ನುವುದು ಕೆಲವರ ಅಭಿಪ್ರಾಯ

ಎನ್ ಸಿ ಟಿ ಇ ಯೋಜನೆ

ಸದ್ಯ ದೇಶದಲ್ಲಿ ಹದಿನೆಂಟು ಸಾವಿರಕ್ಕೂ ಹೆಚ್ಚಿನ ಕಾಲೇಜುಗಳಲ್ಲಿ ಬಿಇಡಿ ಅವಕಾಶವಿದೆ. 2015 ರಲ್ಲಿ ಹನ್ನೆರಡನೇ ತರಗತಿಯಲ್ಲಿ ತೇರ್ಗಡೆ ಹೊಂದಿದವರಿಗೆ ಎನ್ ಸಿ ಟಿ ಇ ನಾಲ್ಕು ವರ್ಷ ಅವಧಿಯ ಬಿಎ-ಬಿಇಡಿ ಮತ್ತು ಬಿಎಸ್ಸಿ-ಬಿಇಡಿ ಆರಂಭಿಸಲು ಅವಕಾಶ ನೀಡಿದೆ.

ಆಕ್ಸ್ಫ್ಯಾಮ್ ಇಂಡಿಯಾ ಪಾಲಿಸಿಯು 2016 ರಲ್ಲಿ ಸಮೀಕ್ಷೆಯ ವರದಿ ನೀಡಿದ್ದು 13 ಲಕ್ಷ ಎಲಿಮೆಂಟರಿ ಶಾಲೆಗಳಲ್ಲಿ 6.6 ಲಕ್ಷ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು ದೇಶದಲ್ಲಿ ಇನ್ನೂ ಐದು ಲಕ್ಷಕ್ಕು ಹೆಚ್ಚಿನ ಶಿಕ್ಷಕರ ಕೊರತೆ ಇರುವುದಾಗಿ ತಿಳಿಸಿದೆ.

ಬಿಇಡಿ ನಂತೆಯೇ ಬಿಇ ಕೋರ್ಸ್ ಗೂ ಮುಂದಿನ ವರ್ಷದಿಂದಲೇ ಏಕರೂಪ ಪ್ರವೇಶ ಪರೀಕ್ಷೆ ನಡೆಸಲು ಸಕಲ ಸಿದ್ಧತೆಗಳು ನಡೆದಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್  ಈ ಬಗ್ಗೆ ಸಮ್ಮತಿ ಸೂಚಿಸಿದ್ದು ಕಳೆದ ತಿಂಗಳಷ್ಟೇ ಈ ಕುರಿತು ಹೇಳಿಕೆ ನೀಡಿತ್ತು.

ಇದನ್ನು ಗಮನಿಸಿ: 2018 ರಿಂದ ಎಂಜಿನಿಯರಿಂಗ್ ಏಕರೂಪ ಪ್ರವೇಶ ಪರೀಕ್ಷೆ

English summary
After the common medical test (National Eligibility and Entrance Test) which made its debut last year, the Union Government is now pitching for common BEd test and a common engineering test.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia