Jobs In Amazon : ಕೊರೋನಾ ನಡುವೆ ಅಮೇಜಿಂಗ್ ನೇಮಕಾತಿ ಮಾಡಲಿರುವ ಅಮೆಜಾನ್

ಅಮೆಜಾನಸ್ ನಲ್ಲಿ 55,000 ಹುದ್ದೆಗಳ ನೇಮಕಾತಿಗೆ ಸಜ್ಜು

ಜಾಗತಿಕವಾಗಿ ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿರುವ ಅಮೆಜಾನ್​​ ಕಂಪನಿಯು 55,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಸಜ್ಜಾಗಿದೆ. ಅಮೆಜಾನ್ ತನ್ನ ಮಾರಾಟ ಜಾಲವನ್ನು ವಿಸ್ತರಿಸುವ ಮತ್ತು ಗ್ರಾಹಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ ಎಂದು ಕಂಪನಿಯ ಮುಖ್ಯಸ್ಥ ಆಂಡಿ ಜಸ್ಸಿ ಅವರೇ ತಿಳಿಸಿದ್ದಾರೆ.

ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್ ಗಳ ಎದುರಿನಲ್ಲಿ ಸ್ಪರ್ಧೆಗಿಳಿದಿರುವ ಅಮೆಜಾನ್ ಕಂಪೆನಿಗೆ ರೀಟೇಲ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಅಮೆಜಾನ್ ನಲ್ಲಿ ತಂತ್ರಜ್ಞಾನ ಕ್ಷೇತ್ರದಿಂದ ಹಿಡಿದು ಕಾರ್ಪೋರೇಟ್ ಸ್ಥಾನಗಳ ವರೆಗೆ ನೇಮಕಾತಿಗಳು ನಡೆಯಲಿದೆ. ಜಾಗತಿಕ ಮಟ್ಟದಲ್ಲಿ ಕಂಪನಿಯಲ್ಲಿ ಈಗಾಗಲೇ 2,75,000 ಮಂದಿ ಉದ್ಯೋಗಿಗಳನ್ನು ಹೊಂದಿದೆ. ಅದಾಗ್ಯೂ ಪ್ರಸ್ತುತ ಕೆರಿಯರ್​ ಡೆ (Career Day) ಮೂಲಕ ಇನ್ನೂ ಶೇ. 20 ರಷ್ಟು (55 ಸಾವಿರ ಮಂದಿ) ಟೆಕ್​ ಮತ್ತು ಕಾರ್ಪೊರೇಟ್​​ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಿದ್ದೇವೆ ಎಂದು ಕಂಪನಿಯ ಮುಖ್ಯಸ್ಥ ಆಂಡಿ ಜಸ್ಸಿ ಹೇಳಿದ್ದಾರೆ.

ಸಾಂಕ್ರಾಮಿಕ ರೋಗ ಹರಡಿರುವ ಸಮಯದಲ್ಲಿ ಇತರ ಕಂಪನಿಗಳಂತೆ ಉದ್ಯೋಗಿಗಳನ್ನು ವಜಾಗೊಳಿಸದ ಅಮೆಜಾನ್ ಜನರ ಬೇಡಿಕೆಗೆ ತಕ್ಕಂತೆ ಸರಕುಗಳನ್ನು ಪೂರೈಸುತ್ತಿದೆ. ಜನರು ಮನೆಯಲ್ಲಿಯೇ ಇರುವುದರಿಂದ ಸಣ್ಣ ಟಾಯ್ಲೆಟ್ ಪೇಪರ್ ಇಂದ ಹಿಡಿದು ದಿನಸಿ ಪದಾರ್ಥಗಳನ್ನು ಆರ್ಡರ್ ಮಾಡುವ ವರೆಗೂ ಅಮೆಜಾನ್ ಮೊರೆ ಹೋಗಿದ್ದಾರೆ. ಹೀಗಾಗಿ ಅಮೆಜಾನ್ ಕಳೆದ ವರ್ಷವಷ್ಟೇ 5,00,000 ಸಿಬ್ಬಂದಿಯನ್ನು ನೇಮಿಸಿದ್ದು, ಇದೀಗ ಮತ್ತೆ 50,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ.

55,000 ಉದ್ಯೋಗಿಗಳ ನೇಮಕಾತಿಯ ಪ್ರಕ್ರಿಯೆಯಲ್ಲಿ ಭಾರತ, ಜರ್ಮನಿ ಮತ್ತು ಜಪಾನ್​ ದೇಶಗಳಿಂದ 40 ಸಾವಿರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದೇವೆ ಮತ್ತು ಉಳಿದ ಹುದ್ದೆಗಳನ್ನು ಯುಎಸ್ ನಲ್ಲಿ ನೇಮಕಾತಿ ಮಾಡಲಾಗುವುದು. ಕಳೆದ ವರ್ಷ 22 ಸಾವಿರ ಮಂದಿಯನ್ನು ಭಾರತದಿಂದ ನೇಮಕ ಮಾಡಿಕೊಂಡಿದ್ದೆವು. ಎಂಜಿನಿಯರಿಂಗ್, ಸಂಶೋಧನಾ ವಿಜ್ಞಾನ, ರೊಬೋಟಿಕ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಂಪನಿಗೆ ಉದ್ಯೋಗಿಗಳು ಬೇಕಾಗಿದ್ದಾರೆ. ಬದಲಾದ ಜಾಗತಿಕ ನಿಯಮಗಳಿಗೆ ಅನುಸಾರವಾಗಿ ಉದ್ಯೋಗಿಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿಯೂ ಅವರು ತಿಳಿಸಿದ್ದಾರೆ. ಅಮೆರಿಕದಲ್ಲಿ ಗರಿಷ್ಠವಾಗಿ ನೇಮಕ ಮಾಡಿಕೊಂಡಿರುವ ಕಂಪನಿಗಳ ಪೈಕಿ ಅಮೆಜಾನ್ ಎರಡನೆಯ ಸ್ಥಾನದಲ್ಲಿದೆ.

For Quick Alerts
ALLOW NOTIFICATIONS  
For Daily Alerts

English summary
Amazon planninng to hire 55,000 employees globally.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X