ಭಾರತೀಯ ಕ್ಯಾಂಪಸ್ ಗಳಲ್ಲಿ ಆ್ಯಪಲ್‌ ಉದ್ಯೋಗ ಬೇಟೆ

Posted By:

ಪ್ರತಿಷ್ಠಿತ ಆ್ಯಪಲ್‌ ಸಂಸ್ಥೆ ಭಾರತಕ್ಕೆ ಕಾಲಿಡುತ್ತಿದೆ. ಈ ಬಾರಿ ಉದ್ಯಮಕ್ಕಾಗಿ ಅಲ್ಲ ಬದಲಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಲು ಬರುತ್ತಿದೆ. ಹೌದು ಅಮೆರಿಕದ ಪ್ರತಿಷ್ಠಿತ ಕಂಪನಿಯಾದ ಆ್ಯಪಲ್‌ ಇದೇ ಮೊದಲ ಬಾರಿಗೆ ಭಾರತದಲ್ಲಿ ಕ್ಯಾಂಪಸ್‌ ಸಂದರ್ಶನ ನಡೆಸಲು ಮುಂದಾಗಿದೆ.

ಭಾರತದಲ್ಲಿನ ಪ್ರತಿಭಾವಂತರನ್ನು ಆ್ಯಪಲ್‌ ಸಂಸ್ಥೆ ನೇರವಾಗಿ ನೇಮಕಾತಿ ಮಾಡಿಕೊಳ್ಳಲು ಕ್ಯಾಂಪಸ್ ಗೆ ಕಾಲಿಡುತ್ತಿದ್ದು, ಭಾರಿ ಕುತೂಹಲ ಮೂಡಿಸಿದೆ.

ಭಾರತೀಯ ಕ್ಯಾಂಪಸ್ ಗಳಲ್ಲಿ  ಆ್ಯಪಲ್‌

ಈಗಾಗಲೇ ಆ್ಯಪಲ್‌ ಸಂಸ್ಥೆ ಬೆಂಗಳೂರಿನಲ್ಲಿ ತನ್ನ ಘಟಕ ಆರಂಭಿಸಿದೆ. ಅಲ್ಲದೆ ಭಾರತೀಯರನ್ನೇ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುತ್ತಿದೆ. ಈಗ ಮತ್ತಷ್ಟು ಉದ್ಯೋಗದ ಆಫರ್‌ಗಳೊಂದಿಗೆ ಆ್ಯಪಲ್‌ ಕಂಪನಿಯು ಭಾರತೀಯ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಆಗಮಿಸುತ್ತಿದ್ದು, ಹೈದರಾಬಾದ್‌ನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ(ಐಐಐಟಿ-ಎಚ್‌) ವಿದ್ಯಾರ್ಥಿಗಳಲ್ಲಿ ಆಶಾಭಾವ ಮೂಡಿಸಿದೆ.

ಆ್ಯಪಲ್‌ ಅಲ್ಲದೇ ಮೈಕ್ರೋಸಾಫ್ಟ್, ಗೂಗಲ್‌ ಮತ್ತು ಫಿಲಿಫ್ಸ್‌ನಂಥ ಘಟಾನುಘಟಿ ಕಂಪನಿಗಳೂ ಐಐಐಟಿ-ಎಚ್‌ನಲ್ಲಿ ಕ್ಯಾಂಪಸ್‌ ಸಂದರ್ಶನ ನಡೆಸಲಿವೆ.

'ಯಾವ ರೀತಿಯ ಕೌಶಲ್ಯಕ್ಕೆ ಆ್ಯಪಲ್‌ ಮಣೆ ಹಾಕಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ, ಸಂಸ್ಥೆಯ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಸದವಾಕಾಶ,' ಎಂದು ಐಐಐಟಿ-ಎಚ್‌ನ ಉದ್ಯೋಗ ಕೇಂದ್ರದ ಮುಖ್ಯಸ್ಥ ಟಿ.ವಿ.ದೇವಿ ಪ್ರಸಾದ್‌ ಹೇಳಿದ್ದಾರೆ.

ಸಂಸ್ಥೆಯ ಬಿ.ಟೆಕ್‌, ಬಿಇ, ಎಂಟೆಕ್‌ ಹಾಗೂ ಎಂ.ಎಸ್ಸಿ ಪದವೀಧರರು ಒಟ್ಟು 350 ಮಂದಿ ಈಗಾಗಲೇ ಕ್ಯಾಂಪಸ್‌ ಸಂದರ್ಶನಕ್ಕೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಡಿಸೆಂಬರ್‌ನಿಂದ ಈ ಸಂದರ್ಶನದ ಪ್ರಕ್ರಿಯೆ ನಡೆಯಲಿದೆ.

English summary
Leading tech giant Apple Inc. will reportedly hire Indian students through a campus recruitment for the first time in the country.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia