ಪಿ ಎಸ್ ಶಂಕರ ವೈದ್ಯ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Posted By:

2017-22 ರ ಅವಧಿಯ ವೈದ್ಯಕೀಯ ಶಿಕ್ಷಣಕ್ಕಾಗಿ ಕಲಬುರಗಿಯ ಡಾ.ಪಿ.ಎಸ್.ಶಂಕರ ಪ್ರತಿಷ್ಠಾನದ ವತಿಯಿಂದ ನೀಡುವ ಡಾ.ಪಿ.ಎಸ್.ಶಂಕರ ವೈದ್ಯ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅಲೋಪಥಿಕ್ ವೈದ್ಯ ವಿಜ್ಞಾನದ ಎಂಬಿಬಿಎಸ್ ಮೊದಲ ವರ್ಷ ಅಧ್ಯಯನ ಮಾಡುತ್ತಿರುವ ರಾಜ್ಯದ ಯಾವುದೇ ಭಾಗದ ಕನ್ನಡ ಮಾಧ್ಯಮದ ಬಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.  ಈವರೆಗೂ ಮೂವತಕ್ಕೂ ಹೆಚ್ಚಿನ ಬಡ ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದ ವತಿಯಿಂದ ಮಾಸಿಕ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ.

ಪಿ ಎಸ್ ಶಂಕರ ವೈದ್ಯ ವಿದ್ಯಾರ್ಥಿ ವೇತನ

ವಿದ್ಯಾರ್ಥಿವೇತನದ ವಿವರ

ಎಂಬಿಬಿಎಸ್ ಶಿಕ್ಷಣದ ನಾಲ್ಕುವರೆ ವರ್ಷಗಳವರೆಗೆ ಮಾಸಿಕ 1000 ರೂ. ವಿದ್ಯಾರ್ಥಿವೇತನವನ್ನು ಐವರು ವಿದ್ಯಾರ್ಥಿಗಳಿಗೆ ನೀಡಲಾಗುವುದು.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಪ್ರತಿಷ್ಠಾನದ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು, ಸೂಕ್ತ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಕಚೇರಿ ವಿಳಾಸಕ್ಕೆ ಕಳುಹಿಸಬೇಕು.

ದಾಖಲಿಸಬೇಕಾದ ಪ್ರಮುಖ ದಾಖಲೆಗಳು

  • ಪಿಯುಸಿ ಅಂಕಪಟ್ಟಿ ನಕಲು ಪ್ರತಿ
  • ಸಿಇಟಿ ಅಂಕಪಟ್ಟಿ ನಕಲು ಪ್ರತಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-10-2017

ಅರ್ಜಿ ಕಳುಹಿಸಬೇಕಾದ ವಿಳಾಸ

ಪ್ರೊ.ನರೇಂದ್ರ ಬಡಶೇಷಿ
ಕಾರ್ಯದರ್ಶಿ,
ಡಾ.ಪಿ.ಎಸ್.ಶಂಕರ ಪ್ರತಿಷ್ಠಾನ
ಖೂಬಾ ಪ್ಲಾಟ್,
ಕಲಬುರಗಿ-585102

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 944881357,9480149723 ಸಂಪರ್ಕಿಸಿ

ಡಾ.ಪಿ.ಎಸ್.ಶಂಕರ

ನಾಡಿನ ವೈದ್ಯಕೀಯ ಕ್ಷೇತ್ರವನ್ನು ವೈದ್ಯಕೀಯ ಸಾಹಿತ್ಯದ ಮೂಲಕ ವಿಸ್ತಾರ ಮತ್ತು ಜನಪ್ರಿಯಗೊಳಿಸಿದವರಲ್ಲಿ ಡಾ.ಪಿ.ಎಸ್.ಶಂಕರ ಅವರು ಪ್ರಮುಖರು.

ಪಿ.ಎಸ್.ಶಂಕರ ರವರು ಜನವರಿ 1, 1936ರಲ್ಲಿ ಈಗಿನ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕು ಹಲಗೆರೆಯಲ್ಲಿ ಜನಿಸಿದರು. ತಂದೆ ಪಾಟೀಲ ಸಿದ್ದಲಿಂಗಪ್ಪ, ತಾಯಿ ಮಲ್ಲಮ್ಮ. ವೈದ್ಯ ಶಿಕ್ಷಣವನ್ನು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ, ಸ್ನಾತಕೋತ್ತರ ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದಲ್ಲಿ ಪಡೆದರು. ತಮ್ಮ ವೈದ್ಯಕೀಯ ವ್ಯಾಸಂಗದ ಅವಧಿಯಲ್ಲಿ ಭಾರತ ಸರ್ಕಾರದ ಶಿಷ್ಯವೇತನ, ಕಾಮನ್‌ವೆಲ್ತ್ ಮೆಡಿಕಲ್ ಫೆಲೋಶಿಪ್ ಪಡೆದು ಲಂಡನ್‌ನ ಎಡಿನ್‌ಬರೋದಲ್ಲಿ ಹೆಚ್ಚಿನ ಶಿಕ್ಷಣ ಪಡೆದರು.

ಗುಲ್ಬರ್ಗದ ಎಂ.ಆರ್ ಮೆಡಿಕಲ್ ಕಾಲೇಜು, ಮುಂಬೈನ ಕೆ.ಸಿ.ಸೋಮಯ್ಯ ಮೆಡಿಕಲ್ ಕಾಲೇಜು ಸೇರಿ ವಿವಿಧೆಡೆ ಪ್ರಾಚಾರ್ಯ, ಡೀನ್‌ಆಗಿ ಸೇವೆ ಸಲ್ಲಿಸಿದ್ದಾರೆ. ಅಮೆರಿಕ, ಆಸ್ಟ್ರೇಲಿಯ, ಇಟಲಿ, ಇಂಗ್ಲೆಂಡ್‌ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಉಪನ್ಯಾಸ ನೀಡಿದ್ದಾರೆ.

ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಪಟ್ಟ ಸುಮಾರು 130 ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ ವೈದ್ಯಕೀಯ ಸಾಹಿತ್ಯ ಕೃಷಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಮೂಜಗಂ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿಗಳಲ್ಲದೆ ಮೈಸೂರು, ಗುಲ್ಬರ್ಗ, ಕೃಷಿ ವಿವಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1000ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. 250ಕ್ಕೂ ಹೆಚ್ಚು ಭಾಷಣಗಳು ಆಕಾಶವಾಣಿಯಿಂದ ಪ್ರಸಾರಗೊಂಡಿವೆ.

English summary
Dr. P. S. Shankar Vaidya Vidyarthi Vetana, this is a scholarship instituted to provide financial assistance to the deserving poor and meritorious medical students. The scholarship carries Rs 1000 every month till the student completes his 4 1/2 years study of medical course.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia