Aryabhatta National Maths Competition 2021: ಆರ್ಯಭಟ್ಟ ರಾಷ್ಟ್ರೀಯ ಗಣಿತ ಸ್ಪರ್ಧೆಗೆ ಅರ್ಜಿ ಆಹ್ವಾನ

ಆರ್ಯಭಟ್ಟ ರಾಷ್ಟ್ರೀಯ ಗಣಿತ ಸ್ಪರ್ಧೆ ಗೆ ಅರ್ಜಿ ಆಹ್ವಾನ...ಮೇ.20ರೊಳಗೆ ಅರ್ಜಿ ಹಾಕಿ

ಗಣಿತ ದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಸ್ಪರ್ಧೆಯಲ್ಲಿ ಭಾಗವಹಿಸಿ 1.5 ಲಕ್ಷ ಹಣವನ್ನು ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ.

ಅಖಿಲ ಭಾರತ ಕೌನ್ಸಿಲ್ ಫಾರ್ ಟೆಕ್ನಿಕಲ್ ಸ್ಕಿಲ್ ಡೆವಲಪ್ಮೆಂಟ್ (ಎಐಸಿಟಿಎಸ್‌ಡಿ) 'ಆರ್ಯಭಟ್ಟ ರಾಷ್ಟ್ರೀಯ ಗಣಿತ ಸ್ಪರ್ಧೆ 2021' ಯ ಪ್ರಕಟಣೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆರ್ಯಭಟ್ಟ ರಾಷ್ಟ್ರೀಯ ಗಣಿತ ಸ್ಪರ್ಧೆ 2021 ಅನ್ನು ಜೂನ್ 10ರಂದು ನಡೆಸಲಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಹಣ ಗೆಲ್ಲುವ ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು ಮೇ 20,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಪರೀಕ್ಷಾ ಫಲಿತಾಂಶವು ಜೂನ್ 30 ರಂದು ಪ್ರಕಟಗೊಳ್ಳಲಿದೆ.

ಆರ್ಯಭಟ್ಟ ರಾಷ್ಟ್ರೀಯ ಗಣಿತ ಸ್ಪರ್ಧೆ ಗೆ ಅರ್ಜಿ ಆಹ್ವಾನ...ಮೇ.20ರೊಳಗೆ ಅರ್ಜಿ ಹಾಕಿ

ಅರ್ಜಿ ಸಲ್ಲಿಕೆ ಹೇಗೆ ?:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://www.aictsd.com/ ಗೆ ಭೇಟಿ ನೀಡಿ.
ಸ್ಟೆಪ್ 2: ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 3: ನಂತರ ಅಭ್ಯರ್ಥಿಗಳು 290/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ನಲ್ಲಿ ಪಾವತಿಸಿ
ಸ್ಟೆಪ್ 4: ಆನ್‌ಲೈನ್ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ ಬಳಿಕ 48 ಗಂಟೆಯೊಳಗೆ ಅರ್ಜಿ ಸಲ್ಲಿಕೆ ವಿವರ ಮತ್ತು ಪರೀಕ್ಷೆಯ ಪ್ರವೇಶ ಪತ್ರದ ವಿವರವನ್ನು ನಿಮ್ಮ ಇ-ಮೇಲ್ ವಿಳಾಸಕ್ಕೆ ತಲುಪಿಸಲಾಗುವುದು.

ಆರ್ಯಭಟ್ಟ ರಾಷ್ಟ್ರೀಯ ಗಣಿತ ಸ್ಪರ್ಧೆ ಗೆ ಅರ್ಜಿ ಆಹ್ವಾನ...ಮೇ.20ರೊಳಗೆ ಅರ್ಜಿ ಹಾಕಿ

ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಣ:

ಮೊದಲ ಸ್ಥಾನ: 1.5 ಲಕ್ಷ
ದ್ವಿತೀಯ ಸ್ಥಾನ: 50,000
ತೃತೀಯ ಸ್ಥಾನ: 10,000

ಆರ್ಯಭಟ್ಟ ರಾಷ್ಟ್ರೀಯ ಗಣಿತ ಸ್ಪರ್ಧೆ ಗೆ ಅರ್ಜಿ ಆಹ್ವಾನ...ಮೇ.20ರೊಳಗೆ ಅರ್ಜಿ ಹಾಕಿ

ಅರ್ಹತೆಗಳೇನಿರಬೇಕು ?:

ಯಾವುದೇ ಕಾಲೇಜಿನ ಅಥವಾ ಶಾಲೆಯ ಕನಿಷ್ಟ 10 ರಿಂದ ಗರಿಷ್ಟ 24 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳು ಅರ್ಜಿಯನ್ನು ಹಾಕಬಹುದು.

ಆರ್ಯಭಟ್ಟ ರಾಷ್ಟ್ರೀಯ ಗಣಿತ ಸ್ಪರ್ಧೆ ಗೆ ಅರ್ಜಿ ಆಹ್ವಾನ...ಮೇ.20ರೊಳಗೆ ಅರ್ಜಿ ಹಾಕಿ

ಪರೀಕ್ಷೆ ಹೇಗಿರತ್ತೆ ?:

ಈ ಗಣಿತ ಸ್ಪರ್ಧೆಗೆ ಮನೆಯಿಂದಲೇ ಆನ್‌ಲೈನ್ ಮೂಲಕ ಭಾಗವಹಿಸಬಹುದು. ಪರೀಕ್ಷೆಯ ಪ್ರಶ್ನೆ ಪತ್ರಿಕೆಯು 30 ಬಹು ಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತದೆ. ಪ್ರತಿ ಪ್ರಶ್ನೆಗೆ 2 ಅಂಕಗಳಿರುತ್ತದೆ. ಒಟ್ಟಾರೆ ಪರೀಕ್ಷೆಯು 45 ನಿಮಿಷಗಳ ಅವಧಿಯನ್ನು ಹೊಂದಿರುತ್ತದೆ.

ಒಟ್ಟಾರೆ ಟಾಪ್ 20 ವಿದ್ಯಾರ್ಥಿಗಳನ್ನು ಆನ್‌ಲೈನ್ ಸಂದರ್ಶನಕ್ಕೆ ಆಯ್ಕೆ ಮಾಡಲಾಗುವುದು. ಆ 20 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು ಮಾತ್ರ ಸ್ಪರ್ಧೆಯಲ್ಲಿ ಗೆಲ್ಲುವ ಅವಕಾಶವಿರುತ್ತದೆ.

ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆಯ ಮತ್ತು ಸಂದರ್ಶನದ ಲಿಂಕ್ ಅನ್ನು ಅವರ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ತಲುಪಿಸಲಾಗುವುದು.

For Quick Alerts
ALLOW NOTIFICATIONS  
For Daily Alerts

English summary
AICTSD will conduct aryabhatta national maths competition on june 10. Students can apply before may 20 to win 1.5lakh.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X