ಆಯುಷ್ ಪ್ರವೇಶ: ಆನ್-ಲೈನ್ ನಲ್ಲಿ ಉಳಿಕೆ ಸೀಟುಗಳ ಹಂಚಿಕೆ

Posted By:

ಆಯುಷ್ ಕೋರ್ಸುಗಳ ಪ್ರವೇಶಕ್ಕಾಗಿ ಆನ್-ಲೈನ್ ಸೀಟು ಹಂಚಿಕೆ ಮೂಲಕ ಉಳಿಕೆ ಸೀಟುಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ರದ್ದುಪಡಿಸಿರುವ, ಹೊಸದಾಗಿ ಸೇರ್ಪಡೆಗೊಳಿಸಿರುವ, ಕಾಲೇಜಿಗೆ ಪ್ರವೇಶ ಪಡೆಯದೇ ಇರುವ ಆಯುಷ್ ಸೀಟುಗಳನ್ನು 2017ನೇ ಸಾಲಿನ ರ್ಯಾಂಕ್ ಪಡೆದಿರುವ ಅಭ್ಯರ್ಥಿಗಳ ಆಯ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆನ್-ಲೈನ್ ನಲ್ಲಿ ಉಳಿಕೆ ಸೀಟುಗಳ ಹಂಚಿಕೆ

ಆಸಕ್ತ ಅಭ್ಯರ್ಥಿಗಳು ವೇಳಾಪಟ್ಟಿ ಪ್ರಕಾರ ಹೊಸದಾಗಿ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ದಾಖಲಿಸುವ ಮುನ್ನ ಅಭ್ಯರ್ಥಿಗಳು ವೆಬ್ಸೈಟ್ ನಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಂಡು ದಾಖಲಿಸುವಂತೆ ಪ್ರಾಧಿಕಾರ ತಿಳಿಸಿದೆ.

ಕಾಲೇಜುವಾರು, ಕೋರ್ಸುವಾರು ಮತ್ತು ಕೆಟಗರಿವಾರು ವಿವರಗಳುಳ್ಳ ಸೀಟ್ ಮ್ಯಾಟ್ರಿಕ್ಸ್ ಅನ್ನು ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.

ಈಗಾಗಲೇ ಆಯುಷ್ ಸೀಟನ್ನು ಪಡೆದು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸುವ ಮೊದಲು ಪೋಷಕರೊಡನೆ ಚರ್ಚಿಸಿ ಆಯುಷ್ ಕೋರ್ಸುಗಳಲ್ಲಿ ಇಷ್ಟವಿದ್ದರೆ ಮಾತ್ರ ಭಾಗವಹಿಸಲು ಸೂಚಿಸಲಾಗಿದೆ.

ವೇಳಾಪಟ್ಟಿ

  • ಅಕ್ಟೋಬರ್ 17 ರಂದು ಮಧ್ಯಾಹ್ನ 2 ರ ನಂತರ ಸೀಟ್ ಮೆಟ್ರಿಕ್ಸ್ ಪ್ರಕಟಿಸಲಾಗುವುದು. ಅದೇ ದಿನ ಮಧ್ಯಾಹ್ನ 3 ರಿಂದ ಅಕ್ಟೋಬರ್ 23 ರಂದು ಬೆಳಗ್ಗೆ 10 ಗಂಟೆಯವರೆಗೆ ಅರ್ಹ ಅಭ್ಯರ್ಥಿಗಳು ಸೀಟುಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗುವುದು.
  • ಅಕ್ಟೋಬರ್ 23 ರಂದು ಸಂಜೆ 6 ರ ನಂತರ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು. ಅಕ್ಟೋಬರ್ 24 ರಿಂದ 25 ರವರೆಗೆ ಹಂಚಿಕೆಯಾದ ಸೀಟುಗಳನ್ನು ದೃಢೀಕರಿಸಿಕೊಂಡು, ಶುಲ್ಕ ಪಾವತಿಯೊಂದಿಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕು.
  • ಅಕ್ಟೋಬರ್ 26 ರಂದು ಸಂಜೆ 5.30 ರೊಳಗೆ ಅಭ್ಯರ್ಥಿಗಳು ಕಾಲೇಜಿನಲ್ಲಿ ವರದಿ ಮಾಡಿಕೊಳ್ಳಬೇಕು.

ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ, ಮೊದಲು ಪ್ರವೇಶ ಪಡೆದಿದ್ದ ಕಾಲೇಜಿನ ಸೀಟು ತಂತಾನೆ ರದ್ದುಗೊಳ್ಳುತ್ತದೆ ಮತ್ತು ಯಾವುದೇ ಕಾರಣಕ್ಕೂ ಪ್ರಸ್ತುತ ವ್ಯಾಸಂಗ್ ಮಾಡುತ್ತಿರುವ ಕಾಲೇಜಿನಲ್ಲಿ ಮುಂದುವರೆಯಲು ಸಾಧ್ಯವಿರುವುದಿಲ್ಲ.

ವೈದ್ಯ, ದಂತ ವೈದ್ಯ, ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಫಾರ್ಮಸೈನ್ಸ್ ಕೋರ್ಸುಗಳಿಗೆ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಈ ಸೂತ್ತಿನಲ್ಲಿ ಭಾಗವಹಿಸಲು ಅರ್ಹರಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Karnataka examination authority has announced to allot remaining ayush seats through online mode.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia