ಅರ್ಧ ಸಂಬಳದಲ್ಲಿ 733 ಪಿಯು ಉಪನ್ಯಾಸಕರ ಬಿ.ಇಡಿ ತರಗತಿ

ಬಿ.ಇಡಿ ಕೋರ್ಸ್‌ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ 733 ಉಪನ್ಯಾಸಕರನ್ನು ತರಗತಿಗಳಿಗೆ ಹಾಜರಾಗಲು ಅನುಕೂಲವಾಗುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳವಾರ ಸುತ್ತೋಲೆ ಹೊರಡಿಸಿದೆ

ಬಿ.ಇಡಿ ಪದವಿ ಹೊಂದದ 733 ಪಿಯು ಉಪನ್ಯಾಸಕರಿಗೆ ಬಿ.ಇಡಿ ಶಿಕ್ಷಣ ಪೂರ್ಣಗೊಳಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.

ಬಿ.ಇಡಿ ಕೋರ್ಸ್‌ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ 733 ಉಪನ್ಯಾಸಕರನ್ನು ತರಗತಿಗಳಿಗೆ ಹಾಜರಾಗಲು ಅನುಕೂಲವಾಗುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳವಾರ ಸುತ್ತೋಲೆ ಹೊರಡಿಸಿದೆ.

2013 ರಲ್ಲಿ ನೇಮಕಗೊಂಡ 1,763 ಮಂದಿ ಉಪನ್ಯಾಸಕರ ಪೈಕಿ 733 ಮಂದಿ ಬಿ.ಇಡಿ ಪದವಿ ಹೊಂದಿರಲಿಲ್ಲ, ಈ ಹಿನ್ನಲೆಯಲ್ಲಿ 733 ಉಪನ್ಯಾಸಕರು ಅರ್ಜಿ ಸಲ್ಲಿಸಿದ್ದರೂ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿರಲಿಲ್ಲ. ಹಾಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ಅವರು, ದ್ವಿತೀಯ ಪಿಯುಸಿ ಮೌಲ್ಯಮಾಪನ ಮುಗಿಯುತ್ತಿರುವ ಹಿನ್ನಲೆಯಲ್ಲಿ ಕರ್ತವ್ಯದಿಂದ ಬಿಡುಗಡೆ ಗೊಳಿಸುವಂತೆ ಪ್ರಾಶುಂಪಾಲರಿಗೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.

ಬಿ.ಇಡಿ ತರಗತಿಗೆ ಪಿಯು ಉಪನ್ಯಾಸಕರು

ಶಿಷ್ಯವೇತನದಲ್ಲಿ ಬಿ.ಇಡಿ

ಬಿ.ಇಡಿ ಪ್ರವೇಶ ಪಡೆದಿರುವ ಉಪನ್ಯಾಸಕರಿಗೆ ಅರ್ಧದಷ್ಟು ಸಂಬಳವನ್ನು ಶಿಷ್ಯವೇತನ ರೂಪದಲ್ಲಿ ಇಲಾಖೆ ನೀಡಲಿದೆ. ಇವರು ತರಗತಿಗಳಿಗೆ ಹಾಜರಾಗಿರುವ ಮಾಹಿತಿ ಯನ್ನು ಪಿಯು ಜಿಲ್ಲಾ ನಿರ್ದೇಶಕರಿಗೆ ಸಲ್ಲಿಸುವಂತೆಯೂ ಪ್ರಾಶುಂಪಾಲರಿಗೆ ಸೂಚಿಸಲಾಗಿದೆ.

ಉಪನ್ಯಾಸಕರ ಅಳಲು

2009ರಲ್ಲಿ ನೇಮಕಗೊಂಡ ಉಪನ್ಯಾಸಕರಿಗೆ ವೇತನ ಸಹಿತ ರಜೆ ಮಂಜೂರು ಮಾಡಿ ಬಿ.ಇಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆಗ ಬಿ.ಇಡಿ ಕೋರ್ಸ್ ನ ಅವಧಿ ಒಂದು ವರ್ಷದಾಗಿತ್ತು. ಇದೀಗ ಬಿ.ಇಡಿ ಕೋರ್ಸ್ ಎರಡು ವರ್ಷಗಳಿಗೆ ವಿಸ್ತರಣೆಗೊಂಡಿದೆ. ಆದರೆ ವೇತನದಲ್ಲಿ ಕೇವಲ ಅರ್ಧದಷ್ಟು ಮಾತ್ರ ನೀಡುತ್ತಿದ್ದು ಇದರಿಂದ ಜೀವನ ನಿರ್ವಹಣೆ ಕಷ್ಟವಾಗಲಿದೆ ಎನ್ನುವುದು ಉಪನ್ಯಾಸಕರ ಅಳಲು.

ಉಪನ್ಯಾಸಕರ ಬೇಡಿಕೆ

ಸದ್ಯ ಉಪನ್ಯಾಸಕರು ತಮಗೆ ಬರುತ್ತಿರುವ ಸಂಬಳಕ್ಕೆ ತಕ್ಕಹಾಗೆ ಜೀವನೋಪಾಯ ಮಾಡಿಕೊಡಿಕೊಂಡಿದ್ದಾರೆ. ಅವರ ಪೂರ್ಣ ಸಂಬಳದಲ್ಲೇ ಮನೆಯ ಎಲ್ಲಾ ಖರ್ಚುಗಳು ಸಾಗುತ್ತಿವೆ. ಇವುಗಳಲ್ಲಿ ಪೋಷಕರು, ಮಕ್ಕಳ ಪಾಲನೆ, ಕುಟುಂಬ ನಿರ್ವಹಣೆ, ವಿಮೆ, ಪಿಂಚಣಿ ಹೀಗೆ ಎಲ್ಲದಕ್ಕು ಸಂಬಳವೇ ಮೂಲವಾಗಿದೆ. ಆದರೆ ಈಗ ಅರ್ಧ ವೇತನ ನೀಡಿದರೆ ಸಂಸಾರ ಸಾಗಿಸುವುದು ಕಷ್ಟವಾಗುತ್ತದೆ ಅದ್ದರಿಂದ ಪೂರ್ಣ ಪ್ರಮಾಣದ ವೇತನ ನೀಡಬೇಕು ಎನ್ನುವುದು ಉಪನ್ಯಾಸಕರ ಬೇಡಿಕೆಯಾಗಿದೆ.

ದೂರ ಶಿಕ್ಷಣ ಬಿ.ಇಡಿಗೆ ಅವಕಾಶವಿಲ್ಲ

ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ (ಎನ್ಸಿಟಿಇ) ಮಾರ್ಗಸೂಚಿಗಳ ಪ್ರಕಾರ ಪಿಯು ಉಪನ್ಯಾಸಕರು ಮುಕ್ತ ಮತ್ತು ದೂರ ಶಿಕ್ಷಣ ಕಲಿಕಾ ವ್ಯವಸ್ಥೆ ಮೂಲಕ ಬಿ.ಇಡಿ ಮಾಡಲು ಅವಕಾಶವಿಲ್ಲ. ಹಾಗಾಗಿ ಇವರು ರೆಗ್ಯಲರ್ ಬಿ.ಇಡಿ ಪದವಿಯನ್ನೇ ಮಾಡುವುದು ಅನಿವಾರ್ಯವಾಗಿದೆ.

For Quick Alerts
ALLOW NOTIFICATIONS  
For Daily Alerts

English summary
733 lecturers in government and aided PU colleges across the State have been asked to complete the mandatory Bachelors in Education course.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X