ಬಿ.ಟೆಕ್ ಪದವಿಯಿಂದ ಏನೂ ಪ್ರಯೋಜನವಿಲ್ಲ: ಮೋಹನ್ ದಾಸ್ ಪೈ ಅಭಿಪ್ರಾಯಕ್ಕೆ ಬೆಚ್ಚಿದ ಬಿ.ಟೆಕ್ ಮಂದಿ

Posted By:

ಬಿ ಟೆಕ್ ಪದವಿಯಿಂದ ಏನೂ ಪ್ರಯೋಜನವಿಲ್ಲ. ಬಿ.ಟೆಕ್ ಹೊಂದಿದ್ದರೆ ಮುಂದಿನ ದಿನಗಳಲ್ಲಿ ಉದ್ಯೋಗ ಪಡೆಯುವುದು ಕಷ್ಟಸಾಧ್ಯವಾಗಬಹುದು ಎನ್ನುವ ಮೋಹನ್‌ದಾಸ್ ಪೈ ಅವರ ಹೇಳಿಕೆ ತಾಂತ್ರಿಕ ಶಿಕ್ಷಣ ವಲಯದಲ್ಲಿ ಸಂಚಲನವನ್ನೇ ಮೂಡಿಸಿದೆ.

ಇನ್ಫೊಸಿಸ್‌ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಮಾಜಿ ಮುಖ್ಯಸ್ಥ, ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿ.ವಿ. ಮೋಹನ್‌ದಾಸ್ ಪೈ ಅವರ ಮಾತು ಇದೀಗ ದೇಶಾದ್ಯಂತ ಚರ್ಚೆಯಾಗುತ್ತಿದೆ.

'ಎಂ ಟೆಕ್ ಅಧ್ಯಯನ ಮಾಡಿ ಪರಿಣಿತರಾಗಿ ಎಂಬುದು ವಿದ್ಯಾರ್ಥಿಗಳಿಗೆ ನನ್ನ ಸಲಹೆ. ಹೆಚ್ಚುವರಿ ತರಗತಿಗಳ ಮೂಲಕ ಕೋಡಿಂಗ್ ಕಲಿಯಿರಿ. ಯಾಕೆಂದರೆ ಮುಂದಿನ ದಿನಗಳಲ್ಲಿ ನಿಮ್ಮ ಕೋಡಿಂಗ್ ಜ್ಞಾನವನ್ನು ಆಧಾರವಾಗಿಟ್ಟುಕೊಂಡು ಕಂಪೆನಿಗಳು ಉದ್ಯೋಗಕ್ಕೆ ನೇಮಕಾತಿ ಮಾಡಿಕೊಳ್ಳಬಹುದು' ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದರ ಸಂದರ್ಶನದಲ್ಲಿ ಪೈರವರು ಈ ಮಾತುಗಳನ್ನು ಹೇಳಿದ್ದಾರೆ.

ಬಿ.ಟೆಕ್ ಪದವಿಯಿಂದ ಏನೂ ಪ್ರಯೋಜನವಿಲ್ಲ

‌'ನಿಮ್ಮನ್ನು ಉದ್ಯೋಗಕ್ಕೆ ನೇಮಕಾತಿ ಮಾಡಿಕೊಂಡು 6 ತಿಂಗಳು ತರಬೇತಿ ನೀಡುವುದು ಕಂಪೆನಿಗಳಿಗೆ ಬೇಕಿಲ್ಲ. ಅವರು ಯಾಕೆ ಸಮಯ ಹಾಳು ಮಾಡುತ್ತಾರೆ? ಅವರು ನಿಮ್ಮ ಕೋಡಿಂಗ್ ಕೌಶಲವನ್ನು ಗಮನಿಸುತ್ತಾರೆ. ಅದರ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಾರೆ' ಎಂದು ಪೈ ಹೇಳಿದ್ದಾರೆ. ಭವಿಷ್ಯದಲ್ಲಿ ಉದ್ಯೋಗ ಬೇಕೆಂದರೆ ಎಂ ಟೆಕ್‌ ಆಗಿರಲೇಬೇಕು, ಕೋಡಿಂಗ್ ಕೌಶಲ ತಿಳಿದಿರಬೇಕು ಮತ್ತು ತಜ್ಞರಾಗಿರಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದೂ ಅವರು ಹೇಳಿದ್ದಾರೆ.

ಜಾಗತಿಕವಾಗಿ ವರ್ಷಕ್ಕೆ ಶೇಕಡ 3ರಿಂದ 4ರಷ್ಟು ಬೆಳವಣಿಗೆ ಹೊಂದುತ್ತಿದ್ದ ಐಟಿ ಉದ್ಯಮ ಈ ವರ್ಷ ಕೇವಲ ಶೇಕಡ 2ರಷ್ಟು ಬೆಳವಣಿಗೆ ಸಾಧಿಸಿದೆ. ಈ ವರ್ಷ ಐಟಿ ಕಂಪೆನಿಗಳು ಕೇವಲ 1.5ರಿಂದ 1.6 ಲಕ್ಷ ಮಂದಿಯನ್ನಷ್ಟೇ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಐಟಿ ಉದ್ಯೋಗಿಗಳಿಗೆ ಬೇಸರ

ಪೈ ಅವರ ಹೇಳಿಕೆಯಿಂದ ಬೇಸರವಾಗಿದೆ ಎಂದು ಅಖಿಲ ಭಾರತ ಐಟಿ ಉದ್ಯೋಗಿಗಳ ಸಂಘಟನೆ ಹೇಳಿದೆ. ಅಲ್ಲದೆ, ಈ ಹೇಳಿಕೆ ಉದ್ಯೋಗಿಗಳ ಸಾಂವಿಧಾನಿಕ ಹಕ್ಕುಗಳಿಗೆ ಒಡ್ಡಲಾದ ಬಹಿರಂಗ ಬೆದರಿಕೆ ಎಂದು ಅಭಿಪ್ರಾಯಪಟ್ಟಿದೆ.

English summary
In future, a B Tech is not adequate to get a good job, one must have an M Tech and specialisation, says T V Mohandas Pai

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia