ಒಬಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನ

Posted By:

2017-18 ಸಾಲಿಗೆ ಐಐಎಂ,ಐಐಟಿ, ಐಐಎಸ್ಸಿ ಮುಂತಾದ ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹಿಂದುಳಿದ ವರ್ಗಗಳ ಪ್ರವರ್ಗ-1,2ಎ, 3ಎ, 3ಬಿ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿದೆ.

ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನ

ಅರ್ಹತೆ ಮತ್ತು ಸೂಚನೆಗಳು

 • ಐಐಎಂ,ಐಐಟಿ, ಐಐಎಸ್ಸಿ ಮುಂತಾದ ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರಬೇಕು.
 • ಆದಾಯ ಮಿತಿ-ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1,2ಎ, 3ಎ, 3ಬಿ ಗೆ ಸೇರಿದವರಾಗಿರಬೇಕು.
 • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ.6 ಲಕ್ಷಗಳಿಗೆ ಮೀರಿರಬಾರದು.
 • ವಿದ್ಯಾರ್ಥಿಯು ಐಐಎಂ,ಐಐಟಿ, ಐಐಎಸ್ಸಿ ಮುಂತಾದ ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಜಿಇಇ-ಅಡ್ವಾನ್ಸ್, ಸಿಎಟಿ, ಜೆಎಎಂ ಮತ್ತು ಇತರೆ ಆನ್-ಲೈನ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
 • ಧನ ಸಹಾಯದ ಮೊತ್ತ-ವಾರ್ಷಿಕವಾಗಿ ಗರಿಷ್ಠ ರೂ.2 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು.

ಸೂಚನೆ: ಡಿಪ್ಲೊಮಾ, ಪಿಜಿಡಿಪ್ಲೊಮಾ ಹಾಗೂ ಇತರೆ ಸರ್ಟಿಫಿಕೇಟ್ ಕೋರ್ಸುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಈ ಧನ ಸಹಾಯ ಪಡೆಯಲು ಅರ್ಹತೆ ಹೊಂದಿರುವುದಿಲ್ಲ.

ಅನುದಾನ ಮಂಜೂರು ಮಾಡುವ ವಿಧಾನ

 • ಧನ ಸಹಾಯ ಪಡೆಯುವ ಅಭ್ಯರ್ಥಿಗಳು ಸಂಬಂಧಿತ ವಿಶ್ವವಿದ್ಯಾಲಯಗಳಿಂದ ಪ್ರಗತಿ ವರದಿ ಸಲ್ಲಿಸುವುದು.
 • ಧನ ಸಹಾಯ ಒಂದು ವರ್ಷದಲ್ಲಿ ಒಂದೇ ಕಂತಿನಲ್ಲಿ ನೀಡಲಾಗುವುದು.
 • ಪ್ರೋತ್ಸಾಹಧನವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಎನ್ಇಎಫ್ ಟಿ/ಆರ್ ಟಿಜಿಎಸ್ ಮೂಲಕ ಪಾವತಿ ಮಾಡಲಾಗುವುದು.

ಆಯ್ಕೆ ವಿಧಾನ

ಪ್ರೋತ್ಸಾಹಧನಕ್ಕೆ ಅಭ್ಯರ್ಥಿಗಳನ್ನು ಮೂರು ಹಂತಗಳಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು.

 • ಆನ್-ಲೈನ್ ಮೂಲಕ ಅರ್ಜಿ ಸಲ್ಲಿಕೆ
 • ಅರ್ಹತಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿಯು ಗಳಿಸಿರುವ ರ್ಯಾಂಕಿಂಗ್
 • ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ

ಆನ್-ಲೈನ್ ಅರ್ಜಿಯೊಂದಿಗೆ ಅವಶ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಸಲ್ಲಿಸುವುದು ಹಾಗೂ ಹಾರ್ಡ್ ಕಾಪಿಯನ್ನು ಅಭ್ಯರ್ಥಿಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಕೆ ಕೇಂದ್ರ ಕಛೇರಿಗೆ ನಿಗದಿತ ಸಮಯದಲ್ಲಿ ಸಲ್ಲಿಸುವುದು.

ಅಗತ್ಯವಿರುವ ದಾಖಲೆಗಳು

 • ಎಸ್ ಎಸ್ ಎಲ್ ಸಿ ಅಂಕಪಟ್ಟಿ
 • ಇತ್ತೀಚಿನ ಭಾವಚಿತ್ರ
 • ಆಧಾರ್ ಕಾರ್ಡ್
 • ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐ.ಎಫ್.ಎಸ್.ಸಿ ಕೋಡ್ (ಬ್ಯಾಂಕ್ ಪಾಸ್ ಬುಕ್ ಮೊದಲನೇ ಪುಟದ ಜೆರಾಕ್ಸ್ ಪ್ರತಿ)
 • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
 • ಕೋರ್ಸ್ ಪ್ರವೇಶಕ್ಕೆ ನಿಗದಿ ಪಡಿಸಿದ ಪ್ರವೇಶ ಪರೀಕ್ಷೆಯ ಅಂಕಪಟ್ಟಿ
 • ಕೋರ್ಸ್ ಪ್ರವೇಶ ಬಗ್ಗೆ ದಾಖಲಾತಿ
 • ಘಟಿಕೋತ್ಸವ ಪ್ರಮಾಣ ಪತ್ರ (ಕಾನ್ವೊಕೇಷನ್ ಸರ್ಟಿಫಿಕೇಟ್)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29/07/2017

ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ backwardclasses.kar.nic.in ಗಮನಿಸಿ

English summary
Backward class welfare department invites online applications Incentives to IIT, IISc and IIM Students for the academic year 2017-18

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia