ಮುಂದಿನ ವರ್ಷದಿಂದ ಬೆಂಗಳೂರು ಉತ್ತರ ವಿವಿಯಲ್ಲಿ ಹೊಸ ಕೋರ್ಸುಗಳು

Posted By:

ವೇಗವಾಗಿ ಸಾಗುತ್ತಿರುವ ಇಂದಿನ ದಿನಗಳಲ್ಲಿ ಉದ್ಯೋಗ ನೀಡುವ ಕೋರ್ಸ್ ಗಳಿಗೆ ಹೆಚ್ಚು ಆದ್ಯತೆ ಇರುವುದನ್ನು ಗಮನಿಸಿ ಮುಂದಿನ ಶೈಕ್ಷಣಿಕ ಸಾಲಿನಿಂದ ಹೊಸ ಕೋರ್ಸ್ ಗಳನ್ನು ಆರಂಭಿಸಲು ಬೆಂಗಳೂರು ಉತ್ತರ ವಿವಿ ನಿರ್ಧರಿಸಿದೆ.

ಪ್ರಸ್ತುತ ದಿನದಲ್ಲಿ ಯಾವ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಮತ್ತು ಎಷ್ಟು ಮಾನವ ಸಂಪನ್ಮೂಲದ ಅವಶ್ಯವಿದೆ ಎನ್ನುವುದನ್ನು ಗಮನಿಸಿ 2018-19 ನೇ ಸಾಲಿನ ಬೆಂಗಳೂರು ಉತ್ತರ ವಿವಿಯಲ್ಲಿ ಹೊಸದಾಗಿ 8 ಸ್ನಾತಕೋತ್ತರ ಕೋರ್ಸ್ ಹಾಗೂ 3 ಹೊಸ ಪದವಿ ಕೋರ್ಸ್ ಪ್ರಾರಂಭಿಸಲಾಗುವುದು ಎಂದು ವಿವಿ ಕುಲಪತಿ ಡಾ.ಟಿ.ಡಿ ಕೆಂಪರಾಜು ತಿಳಿಸಿದ್ದಾರೆ.

ಬೆಂಗಳೂರು ಉತ್ತರ ವಿವಿಯಲ್ಲಿ ಹೊಸ ಪದವಿ ಕೋರ್ಸುಗಳು

ಬೆಂಗಳೂರು ಉತ್ತರ ವಿವಿ ಆಡಳಿತ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವಿ ವ್ಯಾಪ್ತಿಗೆ ಒಳಪಟ್ಟಿರುವ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಹಾಲಿ ಇರುವ 4 ಸ್ನಾತಕೋತ್ತರ ಕೋರ್ಸ್ ಗಳ ಜತೆಗೆ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಹೊಸ ಕೋರ್ಸ್ ಆರಂಭಿಸಲಾಗುವುದು ಎಂದು ಅವರು ಹೇಳಿದರು

ಪ್ರಸ್ತುತ ವಿವಿಯಲ್ಲಿ ಎಂ.ಎ ಕನ್ನಡ, ಅರ್ಥಶಾಸ್ತ್ರ, ಎಂ.ಕಾಂ ಮತ್ತು ಸಮಾಜಕಾರ್ಯದ ಕೋರ್ಸ್ ಗಳಿವೆ.

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ

ಸ್ನಾತಕೋತ್ತರ ಕೋರ್ಸ್ ಗಳಾದ ಎಂ.ಎ ಆಂಗ್ಲ ಭಾಷೆ, ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂ.ಎ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ , ಎಂ.ಎಸ್ಸಿ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ, ಎಂ.ಎಸ್ಸಿ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ, ಎಂ.ಎಸ್ಸಿ ಗಣಿತಶಾಸ್ತ್ರ, ಎಂ.ಎಸ್ಸಿ ಗಣಕ ವಿಜ್ಞಾನ ಮತ್ತು ಎಂ.ಎಸ್ಸಿ ಉಡುಪು ಮತ್ತು ತಂತ್ರಜ್ಞಾನ ಕೋರ್ಸ್ ಮತ್ತು ಹೆಚ್ಚು ಬೇಡಿಕೆ ಇರುವ ಬಿ ಎ ಹಾಸ್ಪಿಟಲ್ ಮತ್ತು ಇವೆಂಟ್ ಮ್ಯಾನೇಜ್ಮೆಂಟ್, ಬಿಎಸ್ಸಿ ನಾಗರಿಕ ವಿಮಾನಯಾನ ಮತ್ತು ಬಿ.ಎಸ್ಸಿ ವಿದ್ಯುನ್ಮಾನ ಸಂವಹನ ಪದವಿ ಕೋರ್ಸ್ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

English summary
Bangalore North University to introduce new courses from next academic year. These courses will provide more job opportunities to students.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia