ಬೆಂಗಳೂರು ವಿವಿ: ಅನ್ಯ ಕಾಲೇಜಿಗೆ ವರ್ಗಾವಣೆ ನ.28 ರವರೆಗೂ ಅವಕಾಶ

Posted By:

ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳ ಪೋಷಕರು ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ವರ್ಗಾವಣೆ ಬಯಸುವ ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸದಿರುವವರಿಗೆ ಕೋರಿಗೆ ಮೇರೆಗೆ ನವೆಂಬರ್ 28 ರವರೆಗೆ ಕಾಲಾವಕಾಶ ನೀಡಲಾಗಿದೆ.

2017-18 ನೇ ಶೈಕ್ಷಣಿಕ ಸಾಲಿನಲ್ಲಿ ಮೂರು ಮತ್ತು ಐದನೇ ಸೆಮಿಸ್ಟರ್ ಗೆ ವರ್ಗಾವಣೆ ಮೇಲೆ ಪ್ರವೇಶ ಕಲ್ಪಿಸಲು ವಿವಿಯು ನವೆಂಬರ್ 28 ರವರೆಗೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ.

ಅನ್ಯ ಕಾಲೇಜಿಗೆ ವರ್ಗಾವಣೆ ನ.28 ರವರೆಗೂ ಅವಕಾಶ

ವಿದ್ಯಾರ್ಥಿಗಳು ನಿಗದಿತ ನಮೂನೆಯನ್ನು ವಿವಿಯ ವೆಬ್ಸೈಟ್ ಮೂಲಕ ಪಡೆದು ವರ್ಗಾವಣೆ ಬಯಸಿದ ಕಾಲೇಜುಗಳಿಗೆ ತಲುಪಿಸಲು ಕೋರಲಾಗಿದೆ.

ವರ್ಗಾವಣೆಯು ಒಂದು ಬಾರಿಯ ಕ್ರಮವಾಗಿ ಅನುಮತಿಸಲು ತೀರ್ಮಾನಿಸಲಾಗಿದ್ದು, ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.

ಷರತ್ತುಗಳು

  • ಪ್ರಾಂಶುಪಾಲರು ವರ್ಗಾವಣೆ ಮೇಲೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ವಿವಿಯು ನಿಗದಿಪಡಿಸಿರುವ ನಮೂನೆಯಲ್ಲಿ ಮುಚ್ಚಳಿಕೆ ಪಡೆದುಕೊಳ್ಳತಕ್ಕದ್ದು.
  • ಪ್ರಾಂಶುಪಾಲರು ವರ್ಗಾವಣೆ ಮೇಲೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಶೇ.75 ಹಾಜರಾತಿ ಇರುವುದನ್ನು ಪ್ರಮಾಣಿಕರಿಸಬೇಕು.
  • ಪ್ರಾಂಶಪಾಲರು ವರ್ಗಾವಣೆ ಮೇಲೆ ಪ್ರವೇಶ ಬಯಸುವ ಪ್ರತಿ ವಿದ್ಯಾರ್ಥಿಗಳು ನಿಗದಿತ ಶಲ್ಕ ಮತ್ತು ದಂಡ ಶುಲ್ಕ ರೂ.1000/- ಭರಿಸಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಹಾಗೂ ನಿಗದಿತ ವಿದ್ಯಾರ್ಥಿ ಪ್ರಮಾಣದೊಳಗೆ ಪ್ರವೇಶ ನೀಡುವುದು.
  • ವಿದ್ಯಾರ್ಥಿಗಳಿಂದ ಪಡೆದ ಮೂಲ ಮುಚ್ಚಳಿಕಗೆ ಪತ್ರವನ್ನು ಪ್ರವೇಶ ಶುಲ್ಕ ಹಾಗೂ ದಂಡ ಶುಲ್ಕ ಪಾವತಿಸಿರುವ ಡಿ.ಡಿ.ಯೊಂದಿಗೆ ಸಹಾಯಕ ಕುಲಸಚಿವರು, ವಿದ್ಯಾಕಾರ್ಯಶಾಖೆ-1, ಬೆಂಗಳೂರು-56 ಇಲ್ಲಿಗೆ ದಿನಾಂಕ 28-12-2017 ರೊಳಗೆ ಸಲ್ಲಿಸುವುದು.

English summary
Students have approached the University to approve their admissions on transfer from one college to another as they could not apply on time to the University.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia