ಬೆಂಗಳೂರು ವಿಶ್ವವಿದ್ಯಾನಿಲಯ 2018-19 ನೇ ಸಾಲಿನ ದೂರ ಶಿಕ್ಷಣ ಪ್ರವೇಶಾತಿಗೆ ಅವಧಿ ವಿಸ್ತರಣೆ

ಬೆಂಗಳೂರು ವಿಶ್ವವಿದ್ಯಾಲಯದ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯದ 2018-19 ನೇ ಸಾಲಿನ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ  ಪ್ರವೇಶಾತಿಗೆ  ಅವಧಿ ವಿಸ್ತರಣೆ

ದೂರ ಶಿಕ್ಷಣ ನಿರ್ದೇಶನಾಲಯದ 2018-19ನೇ ಸಾಲಿನ ಪದವಿ (ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷ) ಮತ್ತು ಸ್ನಾತಕೋತ್ತರ ಪದವಿ (ಪ್ರಥಮ ಮತ್ತು ದ್ವಿತೀಯ ವರ್ಷ) ಕೋರ್ಸ್‌ಗಳಿಗೆ ನೊಂದಾಯಿಸಿಕೊಳ್ಳಲು 29/6/2019 ರ ವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ವಿಳಂಬ ಶುಲ್ಕದೊಂದಿಗೆ ಅರ್ಜಿ ಶುಲ್ಕವನ್ನು (ಒಟ್ಟು ರೂ.1000/-), ಪ್ರವೇಶಾತಿ ಶುಲ್ಕದ ( ವಿಶ್ವವಿದ್ಯಾಲಯ ಪ್ರತಿ ಕೋರ್ಸ್‌ಗಳಿಗೆ ನಿಗದಿಪಡಿಸಿರುವ ಮೊತ್ತ) ಜೊತೆಗೆ ಪಡೆದು ನೇರವಾಗಿ ನಿರ್ದೇಶನಾಲಯದಲ್ಲಿ ಪ್ರವೇಶಾತಿಯನ್ನು ಪಡೆಯಲು ತಿಳಿಸಲಾಗಿದೆ.

ಅರ್ಜಿ ಮತ್ತು ಪ್ರವೇಶ ಕೈಪಿಡಿ ಸಲ್ಲಿಕೆ:

ಅಂತರ್ಜಾಲ, ಬೆಂಗಳೂರು ಒನ್ ಅಥವಾ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಮತ್ತು ಕೈಪಿಡಿಗಳನ್ನು ಪಡೆಯಬಹುದಾಗಿದೆ.

ಕೋರ್ಸುಗಳ ವಿವರ

ಸ್ನಾತಕ ಕೋರ್ಸುಗಳು :
ಬಿ.ಎ (ಕನ್ನಡ/ಆಂಗ್ಲ ಮಾಧ್ಯಮ): ಅಂಚೆ ತೆರಪು ಮತ್ತು ಮುಕ್ತ ವಿಶ್ವವಿದ್ಯಾಲಯ ಯೋಜನೆ
ಬಿ.ಕಾಂ (ಆಂಗ್ಲ ಮಾಧ್ಯಮ ಮಾತ್ರ): ಅಂಚೆ ತೆರಪು ಮತ್ತು ಮುಕ್ತ ವಿಶ್ವವಿದ್ಯಾಲಯ ಯೋಜನೆ
ಬಿ.ಬಿ.ಎ (ಆಂಗ್ಲ ಮಾಧ್ಯಮ ಮಾತ್ರ): ಅಂಚೆ ತೆರಪು ಯೋಜನೆ ಮಾತ್ರ

ಸ್ನಾತಕೋತ್ತರ ಕೋರ್ಸುಗಳು :
ಎಂ.ಎ : ಕನ್ನಡ, ಇಂಗ್ಲಿಷ್, ತೆಲುಗು, ಉರ್ದು
ಎಂ.ಎ: ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ, ವಿಜ್ಞಾನ, ಸಮಾಜಶಾಸ್ತ್ರ (ಕನ್ನಡ/ಆಂಗ್ಲ ಮಾಧ್ಯಮ), ತತ್ವಶಾಸ್ತ್ರ (ಆಂಗ್ಲ ಮಾಧ್ಯಮ)-ಅಂಚೆ ತೆರಪು ಯೋಜನೆ
ಎಂ.ಎ : ಸಂಸ್ಕೃತ ಮತ್ತು ಫ್ರೆಂಚ್ -ಬಾಹ್ಯ ಯೋಜನೆ
ಎಂ.ಕಾಂ: (ಆಂಗ್ಲ ಮಾಧ್ಯಮ)
ಎಂ.ಎಸ್ಸಿ: ಗಣಿತ (ಆಂಗ್ಲ ಮಾಧ್ಯಮ)

ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳು:

ಮಾನವ ಸಂಪನ್ಮೂಲ ನಿರ್ವಹಣೆ, ವ್ಯಾಪಾರ ಆಡಳಿತ, ಮಾರಾಟ ಮಾಡುವುದರ ನಿರ್ವಹಣೆ, ಹಿಂದಿ ಭಾಷಾಂತರ

ಡಿಪ್ಲೊಮಾ ಕೋರ್ಸುಗಳು:

ಆಂಗ್ಲ ಮಾಧ್ಯಮ- ಅನ್ವಯಿತ ಪೌಷ್ಠಿಕ ಮತ್ತು ಆಹಾರ

ಪ್ರಮಾಣ ಪತ್ರ ಕೋರ್ಸುಗಳು:

ಕನ್ನಡ ಮತ್ತು ಅನ್ವಯಿಕ ಪೌಷ್ಠಿಕತೆ ಮತ್ತು ಆಹಾರ ವಿಜ್ಞಾನ (ಆಂಗ್ಲ ಮಾಧ್ಯಮ)

ಅರ್ಜಿ ಶುಲ್ಕ :

ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಶುಲ್ಕದ ರಸೀತಿ ಪ್ರತಿಯನ್ನು ಒಳಗೊಂಡಂತೆ ನಿಗದಿತ ದಿನಾಂಕದೊಳಗೆ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-560056 ಗೆ ಸಲ್ಲಿಸುವುದು.

ಸೂಚನೆ: ಡಿ.ಡಿಯನ್ನು ವಿತ್ತಾಧಿಕಾರಿಗಳು, ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು ಇವರ ಹೆಸರಿನಲ್ಲಿ ತರುವುದು.

ದಾಖಲಾತಿ ವಿಧಾನ:

ಅರ್ಹ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಮೂಲ ದಾಖಲಾತಿಗಳನ್ನು ಅಂದರೆ ಅಂಕಪಟ್ಟಿ, ಹುಟ್ಟಿದ ದಿನಾಂಕ, ಪ್ರಮಾಣ ಪತ್ರ, ನಿಗದಿತ ಶುಲ್ಕ, ಇತ್ಯಾದಿಗಳ ಸಹಿತ ತಾವಾಗಿಯೇ ಬಂದು ದಾಖಲಾಗಲು ಸೂಚಿಸಲಾಗುವುದು.

ಕೋರ್ಸುಗಳ ವಿವರ ಮತ್ತು ಅರ್ಹತಾ ನಿಯಮ/ಶುಲ್ಕಗಳ ವಿವರ ಮತ್ತು ಅಗತ್ಯವಾದ ಮಾಹಿತಿಗಳನ್ನು ಅಂತರ್ಜಾಲ (ಆನ್-ಲೈನ್) ವೆಬ್ಸೈಟ್ ವಿಳಾಸ:

https://bu.online-ap1.com/home ರಲ್ಲಿ ಪಡೆಯಬಹುದಾಗಿದೆ. ಅಭ್ಯರ್ಥಿಗಳು ಪ್ರವೇಶಾತಿಯ ಅವಧಿ ವಿಸ್ತರಣೆಯ ಪ್ರಕಟಣೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Bangalore university 2018-19 distance education admission dates extended for various courses.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X