ಬೆಂಗಳೂರು ವಿವಿ: ಉದ್ಯೋಗ ಸೃಷ್ಟಿಸುವ ಐದು ಹೊಸ ಕೋರ್ಸುಗಳ ಪರಿಚಯ

Posted By:

ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗಕ್ಕೆ ಐದು ಹೊಸ ಕೋರ್ಸುಗಳು ಸೇರ್ಪಡೆಯಾಗಿವೆ. ಇವು ಉದ್ಯೋಗಾವಕಾಶವನ್ನು ಹೆಚ್ಚಿಸುವ ಕೋರ್ಸುಗಳಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಪಠ್ಯಕ್ರಮವನ್ನು ಅಳವಡಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗ ಹಾಗೂ ಇಂಟರ್‌ನ್ಯಾಷನಲ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ (ಐಎಸ್‌ಡಿಸಿ) ಸಹಭಾಗಿತ್ವದಲ್ಲಿ ಈ ಐದು ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ.

'ಸೆಂಟ್ರಲ್‌ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಈ ಕೋರ್ಸ್‌ಗಳಿಗೆ ಚಾಲನೆ ನೀಡಲಾಗಿದ್ದು, ಭವಿಷ್ಯದಲ್ಲಿ ಈ ಕೋರ್ಸುಗಳಿಗೆ ಭಾರಿ ಬೇಡಿಕೆ ಇದೆ ಎಂದು ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಎಂ. ರಾಮಚಂದ್ರಗೌಡ ಹೇಳಿದ್ದಾರೆ.

ಹೊಸ ಕೋರ್ಸುಗಳ ವಿವರ

ಬಿ.ಕಾಂ ಫೈನಾನ್ಸ್‌, ಬಿ.ಕಾಂ ಇನ್ಯೂರೆನ್ಸ್‌ ಅಂಡ್‌ ಆಕ್ಚುವರಿಯಲ್‌ ಸ್ಟಡೀಸ್‌, ಬಿ.ಕಾಂ ಲಾಜಿಸ್ಟಿಕ್ಸ್‌ ಅಂಡ್‌ ಸಪ್ಲೆ ಚೈನ್‌ ಮ್ಯಾನೇಜ್‌ಮೆಂಟ್‌, ಬಿ.ಕಾಂ ಹಾನರ್ಸ್‌, ಬಿ.ಬಿ.ಎ ಇನ್‌ ಏವಿಯೇಷನ್‌ ಮ್ಯಾನೇಜ್‌ಮೆಂಟ್‌ ಹೊಸ ಕೋರ್ಸ್‌ಗಳು.

ಬೆಂಗಳೂರು ವಿವಿಯಲ್ಲಿ ಐದು ಹೊಸ ಕೋರ್ಸುಗಳು

'ಕೈಗಾರಿಕೆ, ವಿಮೆ ಹಾಗೂ ವಿಮಾನಯಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಕೋರ್ಸ್‌ಗಳನ್ನು ರೂಪಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಪಠ್ಯಕ್ರಮವನ್ನು ಹೊಂದಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ' .

ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೋರ್ಸ್ ಪ್ರವೇಶ ಪ್ರಕ್ರಿಯೆ ಪ್ರಾರಂಭ

ಇನ್ಯೂರೆನ್ಸ್‌ ಅಂಡ್‌ ಆಕ್ಚುವರಿಯಲ್‌ ಸ್ಟಡೀಸ್‌

'ದೇಶದಲ್ಲಿ ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಿದ ಬಳಿಕ ಸಾಕಷ್ಟು ವಿದೇಶಿ ಕಂಪೆನಿಗಳು ಸ್ಥಾಪನೆಗೊಂಡಿವೆ. ಆದರೆ, ವಿಮೆ ವಿಶ್ಲೇಷಣಾಕಾರರು ಕಡಿಮೆ ಇದ್ದಾರೆ. ಇದಕ್ಕಾಗಿ ಬಿ.ಕಾಂ ಇನ್ಯೂರೆನ್ಸ್‌ ಅಂಡ್‌ ಆಕ್ಚುವರಿಯಲ್‌ ಸ್ಟಡೀಸ್‌ ಕೋರ್ಸ್‌ ಸಹಕಾರಿ ಆಗಲಿದೆ' .

ಬಿ.ಕಾಂ ಹಾನರ್ಸ್‌

'ಬಿ.ಕಾಂ ಹಾನರ್ಸ್‌ ಕೌಶಲಾಧಾರಿತ ಕೋರ್ಸ್‌ ಆಗಿದೆ. ಈಗ ದೇಶದಲ್ಲಿ ಸ್ಕಿಲ್‌ ಇಂಡಿಯಾಗೆ ಒತ್ತು ನೀಡಲಾಗುತ್ತಿದೆ. ಕೌಶಲ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಕೋರ್ಸ್‌ ಅಧ್ಯಯನ ಮಾಡಿದವರಿಗೆ ಉದ್ಯೋಗಗಳು ಸಿಗಲಿವೆ' .

ಬಿ.ಕಾಂ ಲಾಜಿಸ್ಟಿಕ್ಸ್‌ ಅಂಡ್‌ ಸಪ್ಲೆ ಚೈನ್‌ ಮ್ಯಾನೇಜ್‌ಮೆಂಟ್‌:  'ಲಾಜಿಸ್ಟಿಕ್ಸ್‌ ಕ್ಷೇತ್ರಕ್ಕೆ ಸಂಬಂಧಿಸಿದಂತಹ ಕೋರ್ಸ್‌ ಇದಾಗಿದೆ.

ಬಿ.ಬಿ.ಎ ಇನ್‌ ಏವಿಯೇಷನ್‌ ಮ್ಯಾನೇಜ್‌ಮೆಂಟ್‌: ವಿಮಾನಯಾನ ಕ್ಷೇತ್ರದ ನಿರ್ವಹಣೆ ಮಾಡುವ ಕುರಿತು ಏವಿಯೇಷನ್‌ ಕೋರ್ಸ್‌ನಲ್ಲಿ ಹೇಳಿಕೊಡಲಾಗುತ್ತದೆ.

ಬಿ.ಕಾಂ ಫೈನಾನ್ಸ್‌

ಚಾರ್ಟೆಡ್‌ ಅಕೌಂಟೆಂಟ್‌ ಕೋರ್ಸ್‌ಗೆ ಸಮನಾದ ಬಿ.ಕಾಂ ಫೈನಾನ್ಸ್‌ ಕೋರ್ಸ್‌ ಅನ್ನೂ ಪರಿಚಯಿಸುತ್ತಿದ್ದು, ಇದರಿಂದ ಬಡ, ಮಧ್ಯಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬಹು ಬೇಗನೆ ಉದ್ಯೋಗಗಳನ್ನು ಪಡೆಯಬಹುದಾಗಿದೆ.

ಐಎಸ್‌ಡಿಸಿಯ ಪರಿಣತರು ಬೆಂಗಳೂರು ವಿವಿಯ ವಿಭಾಗದ ಉಪನ್ಯಾಸಕರಿಗೆ ತರಬೇತಿ ನೀಡಿದ್ದಾರೆ. ಅಲ್ಲದೆ ಅಧ್ಯಯನ ಸಾಮಗ್ರಿಗಳನ್ನೂ ಒದಗಿಸಿದ್ದಾರೆ

English summary
Five new courses are introduced in Bangalore university's commerce department. These job creating courses has international syllabus.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia