ಬೆಂಗಳೂರು ವಿವಿ: ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಆಹ್ವಾನ

Posted By:

ಬೆಂಗಳೂರು ವಿಶ್ವವಿದ್ಯಾಲಯದ 53ನೇ ಘಟಿಕೋತ್ಸವ ಹಿನ್ನೆಲೆ ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಮೇ/ಜೂನ್‌ ತಿಂಗಳಿನಲ್ಲಿ ವಿವಿಧ ಪದವಿಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಹಾಗೂ ಪ್ರಮಾಣ ಪತ್ರ ಪಡೆಯದೆ ಇರುವ ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಈಗಾಗಲೇ ಪರೀಕ್ಞಾ ಶುಲ್ಕದ ಜತೆಗೆ ಘಟಿಕೋತ್ಸವದ ಶುಲ್ಕ ಪಾವತಿಸಿದ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಭ್ಯರ್ಥಿಯು ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ಕಾಲೇಜು ಪ್ರಾಂಶುಪಾಲರಿಗೆ ಅಕ್ಟೋಬರ್‌ 25ರೊಳಗೆ ಸಲ್ಲಿಸಬೇಕು.

ಬೆಂಗಳೂರು ವಿವಿ ಪದವಿ ಪ್ರಮಾಣ ಪತ್ರ

ಅರ್ಜಿ ನಮೂನೆಗಳನ್ನು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿರುವ ಕಾಲೇಜುಗಳಲ್ಲಿ ಲಭ್ಯವಿದೆ ಹಾಗೂ ವಿಶ್ವವಿದ್ಯಾಲಯದ ವೆಬ್‌ಸೈಟ್‌ www.bangaloreuniversity.ac.in ನಲ್ಲಿ ಪಡೆಯಬಹುದು.

200ರೂ.ದಂಡ ಸಹಿತ ಅ.30ರೊಳಗೆ ಸಲ್ಲಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು, ಡಿಡಿ ರಶೀದಿ ಸಮೇತ ವಿಶ್ವವಿದ್ಯಾಲಯಕ್ಕೆ ನ.1ರೊಳಗೆ ಸಲ್ಲಿಸಲು ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದಾರೆ.

ಶುಲ್ಕ ವಿವರ

  • ಭಾರತೀಯ ಪ್ರಜೆಗೆ 970 ರೂ., ವಿದೇಶಿಯರಿಗೆ 3730 ರೂ.
  • ಪಿಎಚ್‌.ಡಿ ಪ್ರಮಾಣ ಪತ್ರ ಭಾರತೀಯ ಪ್ರಜೆಗೆ 1,210 ರೂ. ಹಾಗೂ ವಿದೇಶಿ ಪ್ರಜೆಗೆ 4,840 ರೂ.
  • ಸ್ವಾಯತ್ತ ಕಾಲೇಜುಗಳ ಭಾರತೀಯ ಪ್ರಜೆಗೆ 1,940 ರೂ., ವಿದೇಶಿಯರಿಗೆ 7,260ರೂ.

ಅಭ್ಯರ್ಥಿಗಳು ಇದುವರೆಗೂ ಪದವಿ ಪ್ರಮಾಣ ಪತ್ರಗಳಿಗೆ ನಿಗದಿತ ಶುಲ್ಕದ ಜತೆಗೆ ಅರ್ಜಿ ಸಲ್ಲಿಸದೆ ಇದ್ದಲ್ಲಿ

  • 2ರಿಂದ 5ವರ್ಷಗಳ ಒಳಗೆ 365 ರೂ.
  • 5ರಿಂದ 10 ವರ್ಷದ ಒಳಗೆ 735 ರೂ.
  • 10ರಿಂದ 15ವರ್ಷದ ಒಳಗೆ 1070 ರೂ.
  • 15ರಿಂದ 20 ವರ್ಷದ ಒಳಗೆ 1470 ರೂ.
  • 20ರಿಂದ 25ವರ್ಷದ ಒಳಗೆ 1800 ರೂ. ಪಾವತಿಸಬೇಕು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ಶುಲ್ಕ ರಹಿತ): 25-10-2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (200/- ರೂ. ಶುಲ್ಕ ಸಹಿತ): 30-10-2017

ಇದನ್ನು ಗಮನಿಸಿ: ಬೆಂಗಳೂರು ನ್ಯಾಯಾಲಯ ಕಚೇರಿಯಲ್ಲಿ ಎಸ್ ಎಸ್ ಎಲ್ ಸಿ ಆದವರ ನೇಮಕಾತಿ

English summary
Applications are invited from the eligible candidates for the 53rd Annual convocation of Bangalore university

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia