ಬೆಂಗಳೂರು ವಿಶ್ವವಿದ್ಯಾಲಯ ಎಂಎ, ಎಂಎಸ್ಸಿ ಫಲಿತಾಂಶ ಪ್ರಕಟ

Posted By:

2017ರ ಜೂನ್ ನಲ್ಲಿ ಬೆಂಗಳೂರು ವಿವಿ ನಡೆಸಿದ್ದ ಸ್ನಾತಕೋತ್ತರ ಪದವಿಯ ಫಲಿತಾಂಶವನ್ನು ವಿಶ್ವವಿದ್ಯಾಲಯವು ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ನಮೂದಿಸಿ ಆನ್-ಲೈನ್ ಮೂಲಕ ಫಲಿತಾಂಶ ಪಡೆಯಬಹುದಾಗಿದೆ.

ಎಂಎ ರಾಜ್ಯಶಾಸ್ತ್ರ, ಎಂಎಸ್ಸಿ ಗಣಿತ, ಎಂಎಸ್ಸಿ ಅಪ್ಲೈಡ್ ಜಿಯೋಲಜಿ, ಎಂಎಸ್ಸಿ ಫ್ಯಾಷನ್ ಮತ್ತು ಅಪಾರೆಲ್ ಡಿಸೈನ್ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದೆ.

ಬೆಂಗಳೂರು ವಿವಿ ಫಲಿತಾಂಶ ಪ್ರಕಟ

ಫಲಿತಾಂಶಗಳಲ್ಲಿ ಗೊಂದಲವಿದ್ದರೆ ಮರುಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆ ನಕಲು ಪ್ರತಿ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ಶುಲ್ಕ ಭರಿಸಿ ಪಡೆಯಬಹುದಾಗಿದೆ.

ವಿಟಿಯು ಮರುಮೌಲ್ಯಮಾಪನ ನಿಯಮ ಬದಲು: ವಿದ್ಯಾರ್ಥಿಗಳು ಫುಲ್ ಖುಷ್

2ನೇ ಸೆಮಿಸ್ಟರ್ ಎಂಎ ರಾಜ್ಯಶಾಸ್ತ್ರ, 4ನೇ ಸೆಮಿಸ್ಟರ್ ಎಂಎಸ್ಸಿ ಗಣಿತಸೆ.15 ರೊಳಗೆ ಅಭ್ಯರ್ಥಿಗಳು ಮರು ಮರುಮೌಲ್ಯಮಾಪನ ಹಾಗೂ ಉತ್ತರಪತ್ರಿಕೆಗಳ ನಕಲು ಪ್ರತಿಗೆ ಶುಲ್ಕ ಭರಿಸಬೇಕು.

2 ನೇ ಸೆಮಿಸ್ಟರ್ ಎಲ್ಎಲ್ಎಂ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಸೆ.13 ರೊಳಗೆ ಮರುಮೌಲ್ಯಮಾಪನ ಹಾಗೂ ಉತ್ತರ ಪತ್ರಿಕೆಗಳ ನಕಲು ಪ್ರತಿಗೆ ಶುಲ್ಕ ಭರಿಸಬೇಕು.

2ನೇ ಸೆಮಿಸ್ಟರ್ ಎಂಎಸ್ಸಿ ಪ್ರಾಣಿಶಾಸ್ತ್ರ ಪರೀಕ್ಷೆ ಫಲಿತಾಂಶವೂ ಪ್ರಕಟಗೊಂಡಿದ್ದು. ಸೆ.12ರೊಳಗೆ ಮರುಮೌಲ್ಯಮಾಪನ ಹಾಗೂ ಉತ್ತರ ಪತ್ರಿಕೆಗಳ ನಕಲು ಪ್ರತಿಗೆ ಶುಲ್ಕ ಭರಿಸಬೇಕು ಎಂದು ಮೌಲ್ಯಮಾಪನ ರಿಜಿಸ್ಟ್ರಾರ್ ತಿಳಿಸಿದ್ಧಾರೆ.

ರಿಸಲ್ಟ್ ತಿಳಿಯುವ ವಿಧಾನ

  • ಬೆಂಗಳೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ ಗೆ ಬೇಟಿ ನೀಡಿ
  • ಎಕ್ಸಾಂ ರಿಸಲ್ಟ್ಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಮೇ-ಜೂನ್ ತಿಂಗಳು ಫಲಿತಾಂಶದ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ರಿಜಿಸ್ಟರ್ ನಂಬರ್ ನಮೂದಿಸಿ ರಿಸಲ್ಟ್ ಪಡೆಯಿರಿ.

ನಿಮ್ಮ ರಿಸಲ್ಟ್ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

English summary
Bangalore university MA, MSc results declared. Students can view their results in website by entering their register number.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia