ಬೇಡಿಕೆ ಇಲ್ಲದ ಕೋರ್ಸ್ ರದ್ದು ಪಡಿಸಲು ಬೆಂಗಳೂರು ವಿವಿ ಚಿಂತನೆ

Posted By:

ಬೇಡಿಕೆ ಇಲ್ಲದ ಮತ್ತು ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಕೋರ್ಸ್ ಗಳನ್ನೂ ರದ್ದು ಪಡಿಸಲು ಬೆಂಗಳೂರು ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ.

ಸಂಸ್ಕೃತ, ಉರ್ದು ಸೇರಿದಂತೆ ಕೆಲ ಕೋರ್ಸುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಹೀಗಾಗಿ, ಉಪ ಸಮಿತಿ ನೀಡುವ ವರದಿ ಆಧರಿಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು," ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಎನ್.ರಮೇಶ್ ಹೇಳಿದ್ದಾರೆ.

ಬೆಂಗಳೂರು ವಿವಿ: ಬೇಡಿಕೆ ಇಲ್ಲದಿದ್ರೆ ಕೋರ್ಸ್ ಇಲ್ಲ

" ಬೇಡಿಕೆ ಇಲ್ಲದ ಹಾಗು ಕಡಿಮೆ ವಿದ್ಯಾರ್ಥಿಗಳ ಪ್ರವೇಶಾತಿ ಹೊಂದಿರುವ ಕೋರ್ಸ್ ಗಳೆಷ್ಟಿವೆ, ಅನುದಾನಿತ ಕಾಲೇಜುಗಳಲ್ಲಿ ಮೀಸಲಾತಿ, ರೋಸ್ಟರ್ ಪದ್ಧತಿ ಅನುಸರಿಸಲಾಗುತ್ತಿದೆಯೇ ಸೇರಿದಂತೆ ಇನ್ನಿತರೆ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲು ಸಿಂಡಿಕೇಟ್ ಸದಸ್ಯ ಜಯಣ್ಣ ಅವರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ. ಸಮಿತಿ ನೀಡುವ ವರದಿ ಆಧರಿಸಿ ಅಂತಿಮ ನಿರ್ಧಾರ ಕೈಕೊಳ್ಳಲಾಗುವುದು, " ಎಂದು ಅವರು ಹೇಳಿದ್ದಾರೆ.

ವಿಶ್ವವಿದ್ಯಾಲಯಗಳ ವಿಭಜನೆ ಬಳಿಕ ಜ್ಞಾನಭಾರತಿ ಆವರಣದಲ್ಲಿ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಸೌಲಭ್ಯವಿಲ್ಲ. ಅಲ್ಲಿನ ವಿದ್ಯಾರ್ಥಿಗಳು ಪ್ರಯೋಗಾಲಯಕ್ಕಾಗಿ ಸೆಂಟ್ರಲ್ ಕಾಲೇಜಿಗೆ ಬರಬೇಕಾಗಿದೆ. ಇದನ್ನು ತಪ್ಪಿಸಲು ಜ್ಞಾನಭಾರತಿ ಆವರಣದಲ್ಲೇ ಪ್ರಯೋಗಾಲಯವನ್ನು ತೆರೆಯಲಾಗುತ್ತಿದ್ದು.ಕೆಲವೊಂದು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಎಸ್ ಇ ಎಂ ಉಪಕರಣದ ಬೆಲೆ 1 ಕೋಟಿ ರೂ. ಇದೆ. ಹಾಗೆಯೇ ಎಕ್ಸರೇ ದರವು 30-40 ಲಕ್ಷ ರೂ. ಇದೆ. ಹಂತ ಹಂತವಾಗಿ ಎಲ್ಲ ಉಪಕರಣಗಳನ್ನು ಖರೀದಿ ಮಾಡಿ ಪ್ರಯೋಗಾಲಯಕ್ಕೆ ನೀಡಲಾಗುವುದು. ವಿಶ್ವವಿದ್ಯಾಲಯಕ್ಕೆ 22 ಏಜನ್ಸಿಗಳು ಹಣಕಾಸಿನ ನೆರವು ನೀಡುತ್ತಿವೆ. ಈ ಏಜೆನ್ಸಿಗಳು ನೀಡುವ ಹಣದಿಂದ ಉಪಕರಣಗಳನ್ನು ಖರೀದಿಸಲಾಗುವುದು, " ಎಂದು ಅವರು ಹೇಳಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಸರಕಾರದ ಆದೇಶದಂತೆ ಬೆಂಗಳೂರು ಕೇಂದ್ರ ಮತ್ತು ಉತ್ತರ ವಿಶ್ವವಿದ್ಯಾಲಯ ಗೆ ತಲಾ ೫ ಕೋಟಿಗೆ ರೂ.ನೀಡಬೇಕಿದೆ. ಈಗಾಗಲೇ ತಲಾ 3 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

English summary
Bangalore University has decided to cancel the course which has no demand and also to close the courses which has low admissions.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia