ಬೆಂಗಳೂರು ವಿಶ್ವವಿದ್ಯಾಲಯ: ವಿದ್ಯಾರ್ಥಿಗಳಿಗೆ 'ಆರೋಗ್ಯ ವಿಮಾ' ಭಾಗ್ಯ

Posted By:

ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ 'ಆರೋಗ್ಯ ವಿಮಾ' ಭಾಗ್ಯ ತರಲು ಬೆಂಗಳೂರು ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ.

ಆರೋಗ್ಯ ವಿಮೆ ಕುರಿತು ಸಮಿತಿ ರಚಿಸಲಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ 'ಆರೋಗ್ಯ ವಿಮಾ' ಭಾಗ್ಯ ದೊರೆಯಲಿದೆ.

ಬಾರದ ಸಂಬಳ: ಅತಿಥಿ ಶಿಕ್ಷಕರ ಗೋಳು ಕೇಳೋರು ಯಾರು?

ವಿವಿ ಜ್ಞಾನಭಾರತಿ ಆವರಣದಲ್ಲಿ 52 ವಿವಿಧ ವಿಭಾಗಗಳಿದ್ದು, 8,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೂ ವಿಮೆ ಸೌಲಭ್ಯ ದೊರೆಯಲಿದೆ.

ರಾಜ್ಯದ ಈ ಮಕ್ಕಳ ಸಾಧನೆಗೆ ಸಿಕ್ಕಿತು ರಾಷ್ಟ್ರಪತಿಗಳಿಂದ ಪುರಸ್ಕಾರ

ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ

ವಿವಿಯಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಬಡವರಾಗಿದ್ದು, ದೂರದ ಊರುಗಳಿಂದ ಬರುತ್ತಾರೆ. ಅವರ ಆರೋಗ್ಯದ ಕಾಳಜಿ ವಹಿಸುವ ಉದ್ದೇಶದಿಂದ ಆರೋಗ್ಯ ವಿಮೆ ಅನುಷ್ಠಾನ ಮಾಡಲಾಗುವುದು. ಎಂದು ಬೆಂ.ವಿವಿ ಕುಲಸಚಿವ ಬಿ.ಕೆ. ರವಿ ಹೇಳಿದ್ದಾರೆ.

ಕಳೆದ ಸಿಂಡಿಕೇಟ್ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಮಾಡಿಸುವ ಕುರಿತು ಸಿಂಡಿಕೇಟ್ ಸದಸ್ಯ ಜಯಣ್ಣ ಮತ್ತು ಶಿವಣ್ಣ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಈ ಪ್ರಸ್ತಾಪಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಆರೋಗ್ಯ ವಿಮೆ ಮಾಡಿಸಲಾಗುತ್ತಿದೆ.

ಆರೋಗ್ಯ ವಿಮೆ ಕುರಿತು ವಿತ್ತಾಧಿಕಾರಿ ಲೋಕೇಶ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಿಂಡಿಕೇಟ್ ಸದಸ್ಯ ಬಿ. ಶಿವಣ್ಣ ಸದಸ್ಯರಾಗಿದ್ದು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಕೇಂದ್ರದ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಆರೋಗ್ಯ ವಿಮೆಯ ಪ್ರೀಮಿಯಂ ಎಷ್ಟಿರಬೇಕು? ಇದರಲ್ಲಿ ವಿದ್ಯಾರ್ಥಿ ಮತ್ತು ವಿವಿ ಪ್ರಮಾಣ ಎಷ್ಟು ಎಂಬಿತ್ಯಾದಿ ವಿವರಗಳನ್ನು ಸಮಿತಿಯು ಸಭೆ ಸೇರಿ ರ್ಚಚಿಸಲಿದೆ. ನಂತರ ವರದಿಯನ್ನು ವಿವಿಗೆ ನೀಡಲಿದ್ದು, ಬಳಿಕ ಅನುಷ್ಠಾನಗೊಳ್ಳಲಿದೆ.

ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಂಯೋಜಿತ ವಿದ್ಯಾರ್ಥಿಗಳಿಗೆ ವಿವಿಯೇ ವಿಮೆ ಸೌಲಭ್ಯ ಕಲ್ಪಿಸುವುದಾದರೆ, ವಿವಿಗೆ ಹೆಚ್ಚು ಆರ್ಥಿಕ ಹೊರೆ ಬೀಳಲಿದೆ. ಹೀಗಾಗಿ ವಿವಿ ಕೇವಲ ತನ್ನ ಆವರಣದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಕಲ್ಪಿಸಲಿದೆ.

ಇಂದು ಆಸ್ಪತ್ರೆ ವೆಚ್ಚ ದುಬಾರಿಯಾಗಿದೆ. ವಿಮೆ ಇಲ್ಲದಿದ್ದರೆ ಹಣ ವಿನಿಯೋಗಿಸಿ ಗುಣಮಟ್ಟ ಚಿಕಿತ್ಸೆ ಪಡೆಯುವುದು ವಿದ್ಯಾರ್ಥಿಗಳಿಗೆ ಕಷ್ಟವಾಗಲಿದೆ. ಹೀಗಾಗಿ ಆರೋಗ್ಯ ವಿಮೆ ಜಾರಿ ಉತ್ತಮ ಯೋಜನೆಯಾಗಿದೆ ಎಂದು ವಿವಿಯ ಸಿಂಡಿಕೇಟ್ ಸದಸ್ಯ ಶಿವಣ್ಣ ಅಭಿಪ್ರಾಯ ಪಟ್ಟಿದ್ದಾರೆ.

ಈಗಾಗಲೇ ಬಹುತೇಕ ಶಾಲೆ-ಕಾಲೇಜುಗಳು ವಿದ್ಯಾರ್ಥಿಗಳಿಗಾಗಿ ಆರೋಗ್ಯ ವಿಮೆ ಮಾಡಿಸಿವೆ. ಆರೋಗ್ಯ ವಿಮೆ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚು ಹಣ ವಸೂಲಿ ಮಾಡದೆ ವಿವಿಯೇ ಹೆಚ್ಚಿನಾಂಶದ ಮೊತ್ತ ಪಾವತಿಸಬೇಕು. ಜತೆಗೆ ವಿವಿಯ ಆವರಣದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಮೂಲಸೌಕರ್ಯ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರಕಿಸಿ ಕೊಡಬೇಕು ಎಂಬುದು ವಿವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಆಗ್ರಹ.

English summary
The University of Bangalore has taken the initiative to bring 'health insurance' to students.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia