ಸಿನಿಮಾ ಅಧ್ಯಯನಕ್ಕೆ ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯ ನಿರ್ಧಾರ

ಸಿನಿಮಾ ಕ್ಷೇತ್ರಕ್ಕೆ ವೃತ್ತಿಪರರನ್ನು ಸೃಷ್ಟಿಸುವ ಮುಖ್ಯ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಸಿನಿಮಾ ಅಧ್ಯಯನಕ್ಕೆ ಸಂಬಂಧಿಸಿದ ಶಾಲೆ ಅಥವಾ ವಿಭಾಗ ತೆರೆಯಲು ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯ ನಿರ್ಧರಿಸಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರಮಟ್ಟಕ್ಕೆ ಮಾದರಿಯಾದ ಸಿನಿಮಾ ಅಧ್ಯಯನಕ್ಕೆ ಸಂಬಂಧಿಸಿದ ಶಾಲೆ ಅಥವಾ ವಿಭಾಗ ತೆರೆಯಲು ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯ ನಿರ್ಧರಿಸಿದೆ.

ಸಿನಿಮಾ ಕ್ಷೇತ್ರಕ್ಕೆ ವೃತ್ತಿಪರರನ್ನು ಸೃಷ್ಟಿಸುವ ಮುಖ್ಯ ಉದ್ದೇಶದಿಂದ ಸಿನಿಮಾ ಶಾಲೆಯನ್ನು ಆರಂಭಿಸುವುದಾಗಿ ವಿವಿ ತಿಳಿಸಿದೆ. ಡಿಸೆಂಬರ್-ಜನವರಿ ವೇಳೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಅನುಮೋದನೆ ಪಡೆಯಲು ವಿಶ್ವವಿದ್ಯಾಲಯ ನಿರ್ಧರಿಸಿದೆ.

ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ  ಸಿನಿಮಾ ಅಧ್ಯಯನ

ಈ ವಿಚಾರಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಡಾ.ರಾಜೆಂದ್ರ ಸಿಂಗ್ ಬಾಬು, ಹ.ಮ ರಾಮಚಂದ್ರ, ನಾಟಕಕಾರ ಕೆ.ವೈ ನಾರಾಯಣಸ್ವಾಮಿ ಮತ್ತಿತರರೊಂದಿಗೆ ಮೊದಲ ಸುತ್ತಿನ ಸಭೆ ನಡೆಸಲಾಯಿತು.

ಪುಣೆ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್ ಮತ್ತಿತರ ಕಡೆಗಳಲ್ಲಿ ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದ ಸಂಸ್ಥೆಗಳಿದ್ದರೂ ಸಿನಿಮಾ ಅಧ್ಯಯನಕ್ಕಾಗಿಯೇ ಪೂರ್ಣ ಪ್ರಮಾಣದ ಶಾಲೆಗಳಿಲ್ಲ. ಈ ಕೊರತೆಯನ್ನು ನೀಗಿಸಲು ಪ್ರಯತ್ನ ನಡೆಸಲಾಗುತ್ತಿದೆ.

ಬೆಂಗಳೂರಿನಲ್ಲಿ ಸಿನಿಮಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ನುರಿತ ತಜ್ಞರಿದ್ದಾರೆ. ಅವರ ಸಲಹೆ ಮಾರ್ಗದರ್ಶನ ಪಡೆದು ಸಿನಿಮಾ ಅಧ್ಯಯನ ಶಾಲೆ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಬೆಂಗಳೂರು ಸೆಂಟ್ರಲ್ ವಿವಿ ಕುಲಪತಿ ಪ್ರೊ.ಜಾಫೆಟ್ ತಿಳಿಸಿದ್ದಾರೆ.

ಸಿನಿಮಾ ಉದ್ಯಮ ಇದೀಗ ಕಾರ್ಪೋರೇಟ್ ವಲಯವಾಗಿ ಬೆಳೆಯುತ್ತಿದೆ, ಕಾರ್ಪೊರೇಟ್ ಉದ್ಯಮಿಗಳು ಕೂಡ ಚಲನಚಿತ್ರ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಮುಂದಾಗಿದ್ದಾರೆ. ಇಂತಹ ಉದ್ಯಮಿಗಳಿಗೆ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ವೃತ್ತಿಪರರು ಬೇಕಾಗಿದ್ದಾರೆ. ಹೀಗಾಗಿ, ಸುಸಜ್ಜಿತ ರೀತಿಯಲ್ಲಿ ಸಿನಿಮಾ ಅಧ್ಯಯನ ಶಾಲೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಇನ್ನಷ್ಟು ತಜ್ಞರ ಜೊತೆ ಮುಂದಿನ ವಾರ ಅಥವಾ ಇನ್ನು 10 ದಿನಗಳಲ್ಲಿ ಮತ್ತೊಂದು ಸಭೆ ನಡೆಸಲಾಗುವುದು ಎಂದರು.

ಸಿನಿಮಾ ಅಧ್ಯಯನ ಕೈಗೊಳ್ಳುವ ವಿದ್ಯಾರ್ಥಿಗಳಿಗಾಗಿ ಎರಡು-ಮೂರು ವರ್ಷದ ಡಿಪ್ಲೊಮಾ, ಪದವಿ ಅಥವಾ ಸ್ನಾತಕ ಪದವಿ ಕೋರ್ಸ್ ಪ್ರಾರಂಭಿಸಬೇಕೇ ಎಂಬುದರ ಕುರಿತು ಇನ್ನಷ್ಟೇ ನಿರ್ಧರಿಸಬೇಕಾಗಿದೆ. ಸಿನಿಮಾ ಅಧ್ಯಯನಕ್ಕೆ ಅಗತ್ಯವಾದ ಸಣ್ಣ ಸ್ಟುಡಿಯೋ ವಿವಿ ಕ್ಯಾಂಪಸ್ ನಲ್ಲಿಯೇ ಜಾಗ ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.

For Quick Alerts
ALLOW NOTIFICATIONS  
For Daily Alerts

English summary
The Bangalore Central University has decided to open a school for film studies from the next academic year with the main objective of creating professionals for the film industry.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X