ಇಂಜಿನಿಯರಿಂಗ್ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿರುವ ಬೆಂಗಳೂರು

Posted By:

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುವವರ ಸಂಖ್ಯೆ ಕುಸಿಯುತ್ತಿದೆ. ಈ ಬಾರಿಯ ಇಂಜಿನಿಯರಿಂಗ್ ಪ್ರವೇಶಾತಿಯಲ್ಲಿ ಕುಸಿತ ಕಂಡು ಬಂದಿದ್ದು, ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿರುವುದು ತಿಳಿದು ಬಂದಿದೆ.

ವಿಜ್ಞಾನ ಕ್ಷೇತ್ರದ ಕಡೆ ಮುಖ ಮಾಡಿದ ವಿದ್ಯಾರ್ಥಿಗಳು: ರಾಜ್ಯದಲ್ಲಿ ಕುಸಿದ ಇಂಜಿನಿಯರಿಂಗ್ ದಾಖಲಾತಿ

ಇಂಜಿಯರಿಂಗ್ ಮಾಡಲು ಬೆಂಗಳೂರಿಗೆ ದೇಶದ ಮೂಲೆ ಮೂಲೆಯಿಂದ ಬರುವುದನ್ನು ಕೇಳಿದ್ದೇವೆ, ಆದರೆ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿ ಕುಸಿದಿರುವುದು ಆಶ್ಚರ್ಯವನ್ನುಂಟುಮಾಡಿದೆ.

ಬೆಂಗಳೂರಿನ ವಿಟಿಯು ಕಾಲೇಜುಗಳಲ್ಲಿ ಪ್ರವೇಶ ಕುಸಿತ

ವಿಟಿಯು ವ್ಯಾಪ್ತಿಗೊಳಪಡುವ ಬೆಂಗಳೂರು ವಲಯದ ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಇಂಜಿನಿಯರಿಂಗ್ ಪ್ರವೇಶದಲ್ಲಿ ಶೇ. 4.32 ರಷ್ಟು ಕುಸಿತ ಕಂಡು ಬಂದಿದೆ. ಅಷ್ಟೇ ಅಲ್ಲದೆ ಸ್ನಾತಕೋತ್ತರ ಬಿಇ ಕೋರ್ಸಿಗೂ ಪ್ರವೇಶಾತಿ ಕಡಿಮೆಯಾಗಿದೆ.

2016-17 ರಲ್ಲಿ ಶೇ.70.32 ರಷ್ಟು ಸೀಟುಗಳ ಮಾತ್ರ ಭರ್ತಿಯಾಗಿದ್ದವು. ಒಟ್ಟು 51443 ಸಿಟುಗಳ ಪೈಕಿ 36174 ಸೀಟುಗಳು ಭರ್ತಿಯಾಗಿ 15269 ಸೀಟುಗಳು ಭರ್ತಿಯಾಗದೆ ಉಳಿದಿದ್ದವು.

2017-18 ರಲ್ಲಿ ಬೆಂಗಳೂರು ವಲಯದಲ್ಲಿ ಶೇ.66 ರಷ್ಟು ಸೀಟುಗಳು ಮಾತ್ರ ಭರ್ತಿಯಾಗಿವೆ. 63731 ಇಂಜಿನಿಯರಿಂಗ್ ಸೀಟಗಳ ಪೈಕಿ 42036 ಸೀಟುಗಳು ಭರ್ತಿಯಾಗಿದ್ದು, 21695 ಸೀಟುಗಳು ಭರ್ತಿಯಾಗದೆ ಉಳಿದಿವೆ.

ಇನ್ನು ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪ್ರವೇಶದಲ್ಲೂ ಕುಸಿತ ಕಂಡು ಬಂದಿದೆ. 2016-17 ರಲ್ಲಿ ಬೆಂಗಳೂರು ವಲಯದಲ್ಲಿ ಪಿಜಿ ಕೋರ್ಸ್ ಗಳಿಗೆ ಶೇ.46.83 ರಷ್ಟು ಪ್ರವೇಶಾತಿ ನಡೆದರೆ ಮೈಸೂರು ವಲಯದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ಶೇ.51.86 ರಷ್ಟು ಪ್ರವೇಶಾತಿಯಾಗಿದೆ.

ಯುಜಿ ಕೋರ್ಸ್ ನಲ್ಲಿ ಶೇ.3.68 ರಷ್ಟು ಕುಸಿತ
ಇಡೀ ರಾಜ್ಯಕ್ಕೆ ಹೋಲಿಸಿದರೆ ಇಂಜಿನಿಯರಿಂಗ್ ಪ್ರವೇಶಾತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.3.68 ರಷ್ಟು ಕುಸಿತ ಕಂಡು ಬಂದಿದೆ.

ಕಳೆದ ವರ್ಷ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಲಯದಲ್ಲಿ ಲಭ್ಯವಿದ್ದ 95863 ಸೀಟುಗಳ ಪೈಕಿ 68749 ಸೀಟುಗಳು ಭರ್ತಿಯಾಗಿದ್ದವು. 27114 ಸೀಟುಗಳು ಭರ್ತಿಯಾಗದೆ ಉಳಿದಿದ್ದವು.

2017-18 ರಲ್ಲಿ ಲಭ್ಯವಿದ್ದ 118272 ಸೀಟುಗಳ ಪೈಕಿ 81113 ಸೀಟು ಭರ್ತಿಯಾದರೆ 37129 ಸೀಟುಗಳು ಖಾಲಿ ಉಳಿದಿವೆ.

ಈ ವರ್ಷ ವಿಟಿಯು ವ್ಯಾಪ್ತಿಯಲ್ಲಿ ಸರಾಸರಿ ಶೇ.66.86 ರಷ್ಟು ಪ್ರವೇಶಾತಿ ನಡೆದಿದೆ.

ಪ್ರವೇಶ ಕುಸಿತಕ್ಕೆ ಕಾರಣ

ದೇಶದೆಲ್ಲೆಡೆ ಇಂಜಿನಿಯರಿಂಗ್ ಗೆ ಸೇರುವ ಮಕ್ಕಳ ಆಸಕ್ತಿ ಕಡಿಮೆಯಾಗುತ್ತಿರುವುದೇ ಪ್ರವೇಶ ಕುಸಿಯಲು ಕಾರಣ ಎಂದು ಕುಲಸಚಿವ ಡಾ.ಎಚ್.ಎನ್ ಜಗನ್ನಾಥರೆಡ್ಡಿ ತಿಳಿಸಿದ್ದಾರೆ.

ವಿಟಿಯು ಪಠ್ಯಕ್ರಮ ಬಹಳಷ್ಟು ಹಳೆಯದಾಗಿದ್ದು, ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಪಠ್ಯಕ್ರಮ ಪರಿಷ್ಕರಿಸುವಂತೆ ಕಂಪನಿಗಳು ಕೋರುತ್ತಿವೆ. ಈ ಬಗ್ಗೆ ವಿಟಿಯು ಗಮನ ಹರಿಸಬೇಕು ಎಂದು ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷರಾದ ಕೆ.ಜೈರಾಜ್ ಹೇಳಿದ್ದಾರೆ.

English summary
Compared to last year The VTU engineering colleges in the Bangalore sector got very less admissions.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia