ನೀವು ವಿವಾಹವಾಗುವ ಹುಡುಗಿ ಸಂಸ್ಕಾರ ಕಲಿತಿರಬೇಕಾದ್ರೆ ಇಲ್ಲಿಗೆ ಭೇಟಿ ನೀಡಿ!

By Kavya

ಮಗನಿಗೆ ಒಳ್ಳೆಯ ಮನೆತನದ ಹುಡುಗಿ ಬೇಕೆಂದು ಗಂಡಿನ ಮನೆಯವರ ಹುಡುಕಾಟ ಒಂದೆಡೆಯಾದ್ರೆ ಮತ್ತೊಂದೆಡೆ ನನ್ನ ಮಗಳು ಹೋದ ಮನೆಯಲ್ಲಿ ಸಂಸ್ಕಾರದಿಂದ ಜೀವನ ನಡೆಸಬೇಕೆಂಬುದು ಹೆಣ್ಣು ಹೆತ್ತವರ ಆಸೆ. ಅಷ್ಟೇ ಯಾಕೆ ತನಗೆ ಸಂಸ್ಕಾರಿ ಹುಡುಗಿ ಬೇಕೆಂದು ಹುಡುಗ ಹೇಗೆ ಬಯಸುತ್ತಾನೋ ಅದೇ ರೀತಿ ತಾನು ಕಾಲಿಟ್ಟ ಮನೆಯಲ್ಲಿ ಸಂಸ್ಕಾರಿ ಸೊಸೆ ಎನಿಸಿಕೊಳ್ಳಬೇಕೆಂದು ಹುಡುಗಿ ಬಯಸುತ್ತಾಳೆ... ಇಷ್ಟೆಲ್ಲಾ ಆಸೆ ಆಕಾಂಕ್ಷೆಗಳು ನಿಮ್ಮಲ್ಲೂ ಇದೆ ಎಂದಾದ್ರೆ ಭೂಪಾಲ್‌ನಲ್ಲಿರುವ ಬರ್ಖಾತುಲ್ಲಾಹ್ ವಿಶ್ವವಿದ್ಯಾನಿಲಯಕ್ಕೆ ಬನ್ನಿ.

 

ಹೌದು ಪ್ರತಿಯೊಬ್ಬರಿಗೂ ತಾವು ವಿವಾಹವಾಗುವ ಕನ್ಯೆ ಸಂಸ್ಕಾರಿಯಾಗಿರಬೇಕು ಎಂಬ ಆಸೆ ಇರುತ್ತದೆ. ಹಾಗಂತ ನಾವ್ಯಾಕೆ ನಿಮಗೆ ಬರ್ಖಾತುಲ್ಲಾ ವಿಶ್ವವಿದ್ಯಾನಿಲಯಕ್ಕೆ ಬನ್ನಿ ಅಂದಿದ್ದೇವೆ ಅಂತ ಕಂಪ್ಯೂಸ್ ಆಗ್ತೀದ್ದೀರಾ.. ಕಂಫ್ಯೂಸ್ ಆಗಬೇಡಿ. ಮುಂದೆ ಡೀಟೆಲ್ ಆಗಿ ಹೇಳ್ತೇವೆ ಓದಿ.

ಈ ವಿಶ್ವವಿದ್ಯಾನಿಲಯದಲ್ಲಿ ನಿಮಗೆ ಆದರ್ಶ ಸೊಸೆ ಸಿಗುತ್ತಾಳಂತೆ!

ಇದೀಗ ನಾಯಿ ಕೊಡೆಯಂತೆ ಅದೆಷ್ಟೋ ಶಾಲಾ -ಕಾಲೇಜುಗಳು ತಲೆ ಎತ್ತುತ್ತಿವೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳಿಗಾಗಿ ಹೊಸ ಹೊಸ ಕೋರ್ಸ್ ವೊಂದನ್ನ ಕೂಡಾ ಪರಿಚಯಿಸುತ್ತಾ ಇರುತ್ತದೆ ಶಿಕ್ಷಣ ಸಂಸ್ಥೆಗಳು. ಅಂತಹ ಕೋರ್ಸ್ ಗಳಲ್ಲಿ ಇದೀಗ ಭೂಪಾಲ್‌ನ ವಿಶ್ವವಿದ್ಯಾನಿಯವೊಂದು ವಿಶೇಷವಾದ ಕೋರ್ಸ್ ವೊಂದನ್ನ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿದೆ. ಅದೇನೆಂದ್ರೆ ಆದರ್ಶ ಸೊಸೆ ಎಂಬ ಕೋರ್ಸ್.

<strong>Also Read: ಸ್ಟಾರ್ ಗಿರಿ ಸಿಗೋ ಮುನ್ನ ಈ ಸ್ಟಾರ್‌ಗಳ ಜಾಬ್ ಹೇಗಿತ್ತು ನೋಡಿ!</strong>Also Read: ಸ್ಟಾರ್ ಗಿರಿ ಸಿಗೋ ಮುನ್ನ ಈ ಸ್ಟಾರ್‌ಗಳ ಜಾಬ್ ಹೇಗಿತ್ತು ನೋಡಿ!

ಎಲ್ಲಿದೆ ಈ ಕೋರ್ಸ್

ಎಲ್ಲಿದೆ ಈ ಕೋರ್ಸ್

ಭೂಪಾಲ್‌ನ ಬರ್ಖಾತುಲ್ಲಾ ವಿಶ್ವವಿದ್ಯಾನಿಲಯವೇ ಈ ಹೊಸತೊಂದು ವಿಶೇಷವಾದ ಕೋರ್ಸನ್ನ ವಿದ್ಯಾರ್ಥಿಗಳಿಗೆ ಪರಿಚಯಸುತ್ತಿದೆ. ಅದುವೇ ಆದರ್ಶ ಸೊಸೆ. ಇನ್ನು ಕೋರ್ಸ್ ಹೊಸತ್ತಾದ್ರೂ ಈಗಾಗಲೇ ಸಿಕ್ಕಾಪಟ್ಟೆ ಫೇಮಸ್ ಕೂಡಾ ಆಗಿದೆ

ಕೋರ್ಸ್ ಅವಧಿ

ಕೋರ್ಸ್ ಅವಧಿ

ಹೌದು ಈ ಕೋರ್ಸ್ ಅವಧಿ ಕೇವಲ ಮೂರು ತಿಂಗಳು ಅಷ್ಟೇ. ಈ ಮೂರು ತಿಂಗಳಿನಲ್ಲಿ ವಿದ್ಯಾರ್ಥಿಗಳು ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸಿಕೊಡಲಾಗುತ್ತದೆಯಂತೆ.

ಯಾವಾಗ ಕೋರ್ಸ್ ಆರಂಭ
 

ಯಾವಾಗ ಕೋರ್ಸ್ ಆರಂಭ

ಸದ್ಯ ಈ ಕೋರ್ಸ್ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದ್ದು, ಇದೀಗ ಕೋರ್ಸ್ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆಯಂತೆ. ಮುಂದಿನ ಅಕಾಡೆಮಿಕ್ ವರ್ಷದಿಂದ ಈ ಕೋರ್ಸ್ ಪ್ರಾರಂಭಮಾಡಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.

 

ಈ ಬಗ್ಗೆ ಉಪಕುಲಪತಿಗಳು ಏನೆನ್ನುತ್ತಾರೆ

ಈ ಬಗ್ಗೆ ಉಪಕುಲಪತಿಗಳು ಏನೆನ್ನುತ್ತಾರೆ

ಉಪಕುಲಪತಿ ಡಿಸಿ, ಗುಪ್ತಾ ಅವರು ಈ ಬಗ್ಗೆ ಮಾತನಾಡುತ್ತಾ, ಮದುವೆಯ ನಂತ್ರ ಹುಡುಗಿಯರು ಹೊಸ ವಾತಾವರಣದಲ್ಲಿ ಹೊಂದಿಕೊಂಡು ಜೀವನ ನಡೆಸಬೇಕಾಗುತ್ತದೆ. ಅದಕ್ಕಾಗಿ ಹುಡುಗಿಯರು ಮದುವೆ ಅಂದ್ರೆ ಭಯ ಪಡುತ್ತಾರೆ. ಉತ್ತಮ ಸೊಸೆಯನ್ನ ಸಮಾಜಕ್ಕೆ ನೀಡುವ ಉದ್ದೇಶದಿಂದ ಈ ಕೋರ್ಸ್ ಜಾರಿಗೆ ತರಲಾಗುವುದು ಎಂದಿದ್ದಾರೆ.

ಅಷ್ಟೇ ಅಲ್ಲ ಈ ಕೋರ್ಸ್ ಜತೆ ಸೈಕಾಲಾಜಿ, ಸೋಶಾಲಾಜಿ, ವುಮೆನ್ ಸ್ಟಡೀಸ್ ಬಗ್ಗೆಯೂ ಕಲಿಸಿಕೊಡಲಾಗುವುದು. ಈ ಕೋರ್ಸ್ ಮುಗಿಯುವಷ್ಟರಲ್ಲಿ ಹುಡುಗಿಯರು ಕುಟುಂಬದ ಮೌಲ್ಯ, ಹಾಗೂ ಫ್ಯಾಮಿಲಿಯನ್ನ ಹೇಗೆ ನಿಭಾಯಿಸುವುದು ಎಂಬುವುದು ತಿಳಿದುಕೊಂಡಿರುತ್ತಾರೆ ಎಂದು ತಿಳಿಸಿದ್ದಾರೆ

 

For Quick Alerts
ALLOW NOTIFICATIONS  
For Daily Alerts

English summary
Barkatullah University in Bhopal Decided To Launch a New Course Adarsh Bahu. This is a Short Term Course To Prepare an Adarsh Bahu. This Three month course will be launched from the next academic year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X