BBMP Tells Students To Leave Bengaluru : ಕಾಲೇಜು ರಜೆ ನೀಡಿದ್ದರೆ ವಿದ್ಯಾರ್ಥಿಗಳು ಮನೆಗೆ ತೆರಳಲು ಬಿಬಿಎಂಪಿ ಸೂಚನೆ

ಬೆಂಗಳೂರಿನಲ್ಲಿ ಪಿಜಿ ಮತ್ತು ಹಾಸ್ಟೆಲ್ ನಲ್ಲಿ ಇರುವ ವಿದ್ಯಾರ್ಥಿಗಳೇ ಗಮನಿಸಿ

ಕೋವಿಡ್-19 ಸೋಂಕು ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಕಾಲೇಜುಗಳು ರಜೆಯನ್ನು ಘೋಷಿಸಿದ್ದರೆ ಅಂತಹ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಪಿಜಿ ಅಥವಾ ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿದ್ದರೆ ನಗರವನ್ನು ತೊರೆಯುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೇಳಿದೆ.

ನಗರದ ನಾಗರಿಕ ಸಂಸ್ಥೆ ವಿದ್ಯಾರ್ಥಿಗಳನ್ನು ನಗರದಿಂದ ಹೋಗುವಂತೆ ಸಲಹೆ ನೀಡಿದ್ದು, ಪಿಜಿ ಹಾಸ್ಟೆಲ್ ಗಳ ಕೋಣೆಗಳಲ್ಲಿ ಜನದಟ್ಟಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಒಂದು ವೇಳೆ ಪಿಜಿ ಹಾಸ್ಟೆಲ್ ಗಳಲ್ಲಿ ಕೋಣೆಗಳು ಚಿಕ್ಕದಿದ್ದರೆ ಅಂತಹ ಸಮಯದಲ್ಲಿ ಇಬ್ಬರು ವ್ಯಕ್ತಿಗಳಿಗಿಂತ ಹೆಚ್ಚು ಜನರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಲಾಗಿದೆ. ಅಲ್ಲದೇ ವಿದ್ಯಾರ್ಥಿಗಳನ್ನು ಪಿಜಿ ಹಾಸ್ಟೆಲ್ ನಿಂದ ದಿಢೀರ್ ತೊರೆಯುವಂತೆ ಒತ್ತಾಯಿಸುವ ಹಾಗಿಲ್ಲ, ಯಾವುದೇ ಸಮಯದಲ್ಲಿ ನಿವಾಸಿಗಳಿಗೆ ಪೂರ್ವಭಾವಿಯಾಗಿ ಮಾಹಿತಿ ನೀಡದೆ ಮತ್ತು ಪರ್ಯಾಯ ವಸತಿ ಸೌಕರ್ಯಗಳಿಗೆ ವ್ಯವಸ್ಥೆ ಮಾಡಿಕೊಳ್ಳಲು ಸಮಯ ನೀಡದೆ ಪಿಜಿ ಮತ್ತು ಹಾಸ್ಟೆಲ್ ಗಳಿಂದ ಹೊರಹಾಕುವಂತಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಹಾಸ್ಟೆಲ್‌ಗಳು ಅಥವಾ ಪಿಜಿಗಳಲ್ಲಿ ಕೋವಿಡ್ -19 ಪ್ರಕರಣಗಳು ಹರಡಿದರೆ ಮಾಲೀಕರು ಮತ್ತು ವ್ಯವಸ್ಥಾಪಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗಾಗಿ ಸ್ವಚ್ಚತೆ ಕಾಪಾಡುವುದು ಮಾಲೀಕರ ಜವಾಬ್ದಾರಿಯಾಗಿದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

For Quick Alerts
ALLOW NOTIFICATIONS  
For Daily Alerts

English summary
Increase cases of covid19, BBMP tells students to leave bengaluru pg's and hostel's if colleges declared holidays.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X