ಪದವಿ + ಬಿ.ಎಡ್ ಅನ್ನು ನಾಲ್ಕೇ ವರ್ಷದಲ್ಲಿ ಮಾಡಬಹುದು : ಇಲ್ಲಿದೆ ಸಂಪೂರ್ಣ ಮಾಹಿತಿ

ಸಮರ್ಥ ಶಿಕ್ಷಕರನ್ನು ರೂಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ಹೊಸ ಬಿ.ಎಡ್ ಕೋರ್ಸ್‌ಗೆ ಅಧಿಸೂಚನೆ ಹೊರಡಿಸಿದೆ. ಈ ವರ್ಷದಿಂದಲೇ ನೂತನ ಕೋರ್ಸ್‌ ಆರಂಭವಾಗಲಿದೆ.ಶಿಕ್ಷಣದಲ್ಲಿ ಬೋಧನೆಯ ಗುಣಮಟ್ಟವನ್ನು ಸುಧಾರಿಸಲು, ನಾಲ್ಕು ವರ್ಷಗಳ ಬ್ಯಾಚುಲರ್ ಇನ್ ಎಜುಕೇಶನ್ (ಬಿ.ಎಡ್) ಕೋರ್ಸ್ ಅನ್ನು ಹೊರತರಲು ಸರ್ಕಾರ ತನ್ನ ಅತ್ಯುತ್ತಮ ಹೆಜ್ಜೆಯನ್ನು ಮುಂದಿಡುತ್ತಿದೆ. ಫೆಬ್ರವರಿ 2019 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 4 ವರ್ಷಗಳ ಬಿಎಡ್ ಕೋರ್ಸ್ ಅನ್ನು ಪ್ರಸ್ತಾಪಿಸಿದೆ.

 

ಇತ್ತೀಚೆಗೆ, ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ರಾಜ್ಯಸಭೆಗೆ ಹೊಸ ಬಿಇಡಿ ಕೋರ್ಸ್ ಅನ್ನು ರೂಪಿಸಲಾಗಿದೆ ಮತ್ತು ಈ ಶೈಕ್ಷಣಿಕ ಅಧಿವೇಶನದಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ ನಂತರ, ಶಿಕ್ಷಕರು 2019 ರ ಅಕ್ಟೋಬರ್ 31 ರವರೆಗೆ ತರಬೇತಿಯನ್ನು ಪಡೆಯಬಹುದು ಎಂದು ಅವರು ಭರವಸೆ ನೀಡಿದರು. ನೀವು ಶಿಕ್ಷಕರ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರೆ, ಈ ಸಮಗ್ರ ಕೋರ್ಸ್‌ಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಬಹುದು.

ಈ ವರ್ಷದಿಂದ  ಪದವಿ + ಬಿ.ಎಡ್ ಅನ್ನು ನಾಲ್ಕೇ ವರ್ಷದಲ್ಲಿ ಮಾಡಬಹುದು

4 ವರ್ಷದ ಬಿಎಡ್ ಹಿಂದೆ ಹಿನ್ನೆಲೆ :

4 ವರ್ಷದ ಬಿಎಡ್ ಹಿಂದೆ ಹಿನ್ನೆಲೆ :

ಯಾವುದೇ ನಿರ್ದಿಷ್ಟ ಉದ್ಯಮದಲ್ಲಿ ಕೌಶಲ್ಯಗಳನ್ನು ಹೊಂದಿರದ ಅಭ್ಯರ್ಥಿಗಳು ಬೋಧನಾ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ರೀತಿಯಾದರೆ ಶಿಕ್ಷಣವು ಸುಧಾರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಬೋಧನಾ ವೃತ್ತಿಯನ್ನು ಆಯ್ಕೆಮಾಡಿಕೊಳ್ಳಲೆಂದೇ ಸರ್ಕಾರವು ನಾಲ್ಕು ವರ್ಷಗಳ ಸಂಯೋಜಿತ ಬಿಎಡ್ ಕೋರ್ಸ್ ಅನ್ನು ರೂಪಿಸಿದೆ.

ಮೂರು ವಿಧಗಳಲ್ಲಿ ಲಭ್ಯವಿರುವ ಬಿಎಡ್ ಕೋರ್ಸ್:

ಮೂರು ವಿಧಗಳಲ್ಲಿ ಲಭ್ಯವಿರುವ ಬಿಎಡ್ ಕೋರ್ಸ್:

ಆಸಕ್ತ ಅಭ್ಯರ್ಥಿಗಳು ಮೂರು ವಿಧಗಳಲ್ಲಿ ಲಭ್ಯವಿರುವ ಬಿಎಡ್ ಕೋರ್ಸ್ ಅನ್ನು ಆಯ್ಕೆ ಮಾಡಿ ಅಧ್ಯಯನ ಮಾಡಬಹುದು. ಅವುಗಳೆಂದರೆ ಬಿಎ-ಬಿಎಡ್, ಬಿಎಸ್ಸಿ-ಬಿಎಡ್ ಮತ್ತು ಬಿಕಾಂ-ಬಿಎಡ್‌ ಕೋರ್ಸ್‌ಗಳು. ಐದು ವರ್ಷದ ಬದಲಾಗಿ ನಾಲ್ಕೇ ವರ್ಷದಲ್ಲಿ ಬಿಎಡ್ ಕೋರ್ಸ್ ಅನ್ನು ಈಗ ಮಾಡಬಹುದಾಗಿದೆ.

 

4 ವರ್ಷದ ಬಿಎಡ್ ಕೋರ್ಸ್‌ಗೆ ಸೇರಲು ಅರ್ಹತೆ:
 

4 ವರ್ಷದ ಬಿಎಡ್ ಕೋರ್ಸ್‌ಗೆ ಸೇರಲು ಅರ್ಹತೆ:

ಭ್ಯರ್ಥಿಗಳು ತಮ್ಮ 12 ನೇ ತರಗತಿಯಲ್ಲಿ / ಪಿಯುಸಿಯಲ್ಲಿ ಉತ್ತೀರ್ಣರಾದ ನಂತರ 4 ವರ್ಷದ ಬಿಎಡ್ ಕೋರ್ಸ್‌ಗೆ ಸೇರಬಹುದು. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು (ಎನ್‌ಸಿಟಿಇ) ಬಿಎಡ್ ಪಠ್ಯಕ್ರಮದ ಬಗೆಗೆ ಕಾರ್ಯನಿರ್ವಹಿಸುತ್ತಿದೆ.

ಸ್ನಾತಕ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದ ವಿದ್ಯಾರ್ಥಿಗಳ ಬಗ್ಗೆ :

ಸ್ನಾತಕ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದ ವಿದ್ಯಾರ್ಥಿಗಳ ಬಗ್ಗೆ :

ಸರ್ಕಾರವು ಸ್ನಾತಕ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಗ್ರೇಸ್ ಸಮಯವನ್ನು ನೀಡಲಿದೆ. ಅವರು ಎರಡು ವರ್ಷದ ಬಿಎಡ್ ಕೋರ್ಸ್ ಅಥವಾ ಮೂರು ವರ್ಷದ ಇಂಟಿಗ್ರೇಟೆಡ್ ಬಿಎಡ್ + ಎಂಎಡ್ ಕೋರ್ಸ್ ಮಾಡಬಹುದು. ಈ ಗ್ರೇಸ್ ಅವಧಿ ಎಷ್ಟು ಸಮಯದವರೆಗೆ ಲಭ್ಯವಿರುತ್ತದೆ ಎಂದು ಸರ್ಕಾರ ಇನ್ನೂ ಘೋಷಿಸದ ಕಾರಣ ಅಭ್ಯರ್ಥಿಗಳು ಈ ಬಗೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸತಕ್ಕದ್ದು.

 

ಹೊಸ 4 ವರ್ಷದ ಇಂಟಿಗ್ರೇಟೆಡ್ ಬಿಎಡ್ ಕೋರ್ಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಅಂಶಗಳು:

ಹೊಸ 4 ವರ್ಷದ ಇಂಟಿಗ್ರೇಟೆಡ್ ಬಿಎಡ್ ಕೋರ್ಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಅಂಶಗಳು:

* ಬೋಧನಾ ವೃತ್ತಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆಯಲು ಬ್ಯಾಚುಲರ್ ಆಫ್ ಎಜುಕೇಶನ್ (ಬಿಎಡ್) ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮವಾಗಿದೆ.

* ದ್ವಿತೀಯ (6 ರಿಂದ 10 ನೇ ತರಗತಿ) ಮತ್ತು ಉನ್ನತ ಮಾಧ್ಯಮಿಕ (10 + 2 ಅಥವಾ 11 ಮತ್ತು 12 ತರಗತಿಗಳು) ಶಿಕ್ಷಕರಾಗಲು ಈ ಕೋರ್ಸ್ ಕಡ್ಡಾಯವಾಗಿದೆ.

* ಪ್ರತಿ ವರ್ಷ ಬಿಎಡ್ ಪ್ರವೇಶ ಪರೀಕ್ಷೆಯನ್ನು ಮೇ / ಜೂನ್‌ ತಿಂಗಳಿನಲ್ಲಿ ನಡೆಸಲಾಗುತ್ತದೆ.

* ಕೋರ್ಸ್ ಆಯ್ಕೆಮಾಡಿಕೊಳ್ಳುವ ಮೊದಲು ಬಿ.ಎಡ್ ಪಠ್ಯಕ್ರಮವನ್ನು ಪರೀಕ್ಷಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿರುತ್ತದೆ

http://www.ncert.nic.in/departments/nie/dtee/activities/pdf/Syllabus_BEd.pdf

* ಎರಡು ವರ್ಷದ ಬಿಎಡ್ ಕೋರ್ಸ್ ಅನ್ನು ನಾಲ್ಕು ಸೆಮಿಸ್ಟರ್‌ಗಳನ್ನಾಗಿ ವಿಂಗಡಿಸಲಾಗಿರುತ್ತದೆ. 4 ವರ್ಷದ ಬಿಎಡ್‌ ಕೋರ್ಸ್‌ನ ಸೆಮಿಸ್ಟರ್‌ ಬಗೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಪ್ರಕಟಣೆ ಇಲ್ಲ.

* ಬಿಎಡ್ ಕೋರ್ಸ್‌ ಮಾಡಲು ಸಂಸ್ಥೆಗಳು ವಿಧಿಸುವ ಕೋರ್ಸ್ ಶುಲ್ಕವು ವರ್ಷಕ್ಕೆ 30,000/- ರೂ. ರಿಂದ 60,000/- ರೂ. ಇರುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Degree and BEd can be finished within four years. Read complete details here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X