ಭಾರತದಲ್ಲಿ ಮಹಿಳಾ ಉದ್ಯಮಿಗಳಿಗೆ ಬೆಂಗಳೂರೇ ಬೆಸ್ಟ್

Posted By:

ಮಹಿಳಾ ಉದ್ಯೋಗಿ ಮತ್ತು ಉದ್ಯಮಿಗಳಿಗೆ ಎಲ್ಲಾ ರೀತಿಯ ನೆರವುಗಳನ್ನು ನೀಡುವ 50 ವಿಶ್ವದ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು 40 ನೇ ಸ್ಥಾನ ಪಡೆದಿದೆ.

ಪ್ರಖ್ಯಾತ ತಂತ್ರಜ್ಞಾನ ಸಂಸ್ಥೆ ಡೆಲ್‌ ನಡೆಸಿದ ಅಧ್ಯಯನ ವರದಿ ಪ್ರಕಾರ ಗಾರ್ಡನ್ ಸಿಟಿ ಬೆಂಗಳೂರು ಮಹಿಳೆಯರ ಉದ್ಯಮ ಮತ್ತು ಹೆಚ್ಚು ಮಹಿಳಾ ಉದ್ಯೋಗಿಗಳಿಗೆ ಪೋಷಣೆ ನೀಡುವ ಸ್ಥಳವಾಗಿದೆ.

ವಿಶ್ವದ ಟಾಪ್ 50 ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು 40 ನೇ ಸ್ಥಾನದಲ್ಲಿದ್ದರೆ, ದೆಹಲಿ 49 ಮತ್ತು ಜಕಾರ್ತಾ 50 ನೇ ಸ್ಥಾನದಲ್ಲಿದೆ. ಈ ಮೂಲಕ ಭಾರತದಲ್ಲಿ ಬೆಂಗಳೂರು ಮಹಿಳಾ ಉದ್ಯಮಿಗಳನ್ನು ಪೋಷಿಸುವಲ್ಲಿ ಮೊದಲ ಸ್ಥಾನ ಪಡೆದಿದೆ.

ಮಹಿಳಾ ಉದ್ಯಮಿಗಳಿಗೆ ಬೆಂಗಳೂರೇ ಬೆಸ್ಟ್

ವಿಶ್ವದ ಟಾಪ್ ಐದು ಸಿಟಿಗಳು

ವಿಶ್ವದ ಟಾಪ್ ಒನ್ ಸಿಟಿಯಾಗಿ ನ್ಯೂಯಾರ್ಕ್ ಮೊದಲ ಸ್ಥಾನದಲ್ಲಿದ್ದರೆ, ಬೇ ಏರಿಯಾ, ಲಂಡನ್, ಬಾಸ್ಟನ್ ಮತ್ತು ಸ್ಟಾಕ್ ಹೋಮ್ ನಗರಗಳು ಮೊದಲ ಐದು ಸ್ಥಾನದಲ್ಲಿವೆ. ಇನ್ನು ವಿಶ್ವದ ರ್ಯಾಂಕಿಂಗ್ ನಲ್ಲಿ ಎಂಟನೇ ಸ್ಥಾನ ಪಡೆದಿರುವ ಸಿಂಗಾಪುರ್ ನಗರ ಏಷ್ಯಾ ಖಂಡದಲ್ಲಿ ಮೊದಲ ಸ್ಥಾನಗಳಿಸಿದೆ.

ಮಹಿಳಾ ಉದ್ಯಮಿಗಳನ್ನು ಆಕರ್ಷಿಸುವ ಮತ್ತು ಅವರ ಉದ್ಯಮಕ್ಕೆ ಉತ್ತೇಜನ ನೀಡಿ ಪೋಷಿಸುವ ಸಾಮರ್ಥ್ಯ, ಮಹಿಳೆಯರ ಉದ್ಯೋಗಕ್ಕಾಗಿ ಸೂಕ್ತ ವಾತಾವರಣ, ಕಾನೂನು ಮತ್ತು ಮಹಿಳೆಯರಿಗೆ ಉದ್ಯಮಿ ಸ್ನೇಹಿ ಪರಿಸರ ನಿರ್ಮಾಣ ಮತ್ತು ಇನ್ನಿತರೆ ಯೋಜನೆಗಳನ್ನು ಪರಿಗಣಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಮಹಿಳಾ ಉದ್ಯಮಶೀಲತೆ ದರವು ಜಾಗತಿಕವಾಗಿ ಪ್ರತಿ ವರ್ಷ ಶೇ 10ರಷ್ಟು ಬೆಳವಣಿಗೆ ಕಾಣುತ್ತಿದೆ. ಹಲವಾರು ಮಾರುಕಟ್ಟೆಗಳಲ್ಲಿ ಮಹಿಳೆಯರು ಪುರುಷರಿಗಿತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮ ಸ್ಥಾಪಿಸಲು ಒಲವು ಹೊಂದಿದ್ದಾರೆ. ಎಂದು ಡೆಲ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಕರೆನ್‌ ಕ್ವಿಂಟೋಸ್‌ ಹೇಳಿದ್ದಾರೆ.

ಹಣಕಾಸು, ಸಾಂಸ್ಕೃತಿಕ ಮತ್ತು ರಾಜಕೀಯ ಅಡೆತಡೆಗಳು ಮಹಿಳಾ ಉದ್ಯಮಿಗಳ ಯಶಸ್ಸನ್ನು ಸೀಮಿತಗೊಳಿಸಲಿವೆ. ಮಹಿಳೆಯರು ಹೆಚ್ಚಿನದಾಗಿ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ವಿಫಲರಾಗಲು ಇದು ಪ್ರಮುಖ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆಯರು ನಿರ್ವಹಿಸುವ ಉದ್ಯಮಗಳಿಗೆ ಸಂಘಟಿತ ನೆರವು ನೀಡುವ ಮೂಲಕ ಉತ್ತಮ ವಾತಾವರಣ ನಿರ್ಮಿಸಿದರೆ ಇನ್ನು ಹೆಚ್ಚಿನ ಉದ್ಯಮಗಳಲ್ಲಿ ಭಾಗವಹಿಸುವ ಮಹಿಳೆಯರ ಸಂಖ್ಯೆ ಹೆಚ್ಚಲಿದೆ ಎಂದು ಹೇಳಿದ್ದಾರೆ.

ಮಹಿಳಾ ಉದ್ಯಮಿಗಳ ಸಂಖ್ಯೆ ಜಾಸ್ತಿಯಾದರೆ ನಗರಗಳ ಆರ್ಥಿಕ ಪ್ರಗತಿ ಕೂಡ ಸುಧಾರಿಸಲಿದೆ. ಉದ್ಯಮಶೀಲತಾ ಮಹಿಳೆಯರಿಗೆ ನೆರವಾಗುವುದರಿಂದ ಸ್ಥಳೀಯ ಆರ್ಥಿಕತೆಗೂ ಉತ್ತೇಜನ ಸಿಗಲಿದೆ ಎಂದು ಕ್ವಿಂಟೋಸ್ ಅಭಿಪ್ರಾಯಪಟ್ಟಿದ್ದಾರೆ.

English summary
India's Silicon Valley Bengaluru ranks at the 40th spot among the top 50 global cities that foster high-potential women entrepreneurs, according to a report by tech giant Dell.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia